Breaking News

ಮ್ಯಾಕ್ ವುಡ್ ಎಂಟರ್ಟೈ ನ್ಮೆಂಟ್ ಬ್ಯಾನರ್ ಅಡಿಯಲ್ಲಿ ಮೂಡಿಬಂದ “ರುದ್ರಾಕ್ಷಪುರ, ಚಿತ್ರತಂಡ ಹೈದ್ರಾಬಾದ್ ನತ್ತ

ಬೆಂಗಳೂರು : ಮ್ಯಾಕ್ ವುಡ್ ಎಂಟರ್ಟೈ ನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೊಂಡ್ರಾಸಿ ಉಪೇಂದರ್ ನಿರ್ಮಿಸುತ್ತಿರುವ ಆರ್.ಕೆ. ಗಾಂಧಿ ನಿರ್ದೇಶನದ ಕನ್ನಡ,ತೆಲುಗು, ತಮಿ ಳು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ‘ರುದ್ರಾಕ್ಷಪುರ’ ಚಲನಚಿತ್ರದ ಅಂತಿಮ ಹಂತ ದ ಚಿತ್ರೀಕರಣಕ್ಕಾಗಿ ಚಿತ್ರತಂಡ ಹೈದ್ರಾಬಾದ್ ನತ್ತ ಪ್ರಯಾಣ ಬೆಳಸಿದೆ.
ಈಗಾಗಲೇ ಮೂರನೇ ಹಂತದ ಚಿತ್ರೀಕರಣ ವನ್ನು ಯಶಸ್ವಿಯಾಗಿ ಕೋಲಾರ, ಚಿಕ್ಕಬಳ್ಳಾ ಪುರ ,ಮತ್ತು ಚಿತ್ರದುರ್ಗದ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಣ ಮುಗಿಸಿದ್ದು, ಅಂತಿ ಮ ಹಂತದ ಚಿತ್ರೀಕರಣಕ್ಕೆ ಹೈದ್ರಾಬಾದ್‌ನ ರಾಮೋಜಿರಾವ್ ಫಿಲಂ ಸಿಟಿಗೆ ತೆರಳಿದೆ.
ಬೆಂಗಳೂರಿನಿಂದ ಹೈದರಾಬಾದ್ ಚಲನಚಿತ್ರವೊಂದರ ಆಡಿಷನ್ಗಾಗಿ ತೆರಳುವ ಮೂರು ಜನ ಹುಡುಗಿಯರು ಹಾಗೂ ಮೂರು ಜನ ಹುಡುಗರಿಗೆ ಮಾರ್ಗಮ ಧ್ಯದಲ್ಲಿರುವ ಅನಂತಪುರ ಸಮೀಪದ ರುದ್ರಾಕ್ಷಪುರ ಕಾಡಿನಲ್ಲಿ ಆಕಸ್ಮಿಕವಾಗಿ ನರಹಂತಕರ ಕೈಗೆ ಸಿಕ್ಕಿಹಾಕಿಕೊಳ್ಳುತ್ತ್ತಾರೆ. ಅವರಿಂದ ಆರು ಜನರೂ ಹೇಗೆ ಪಾರಾಗು ತ್ತಾರೆ ಎಂಬ ಕುತೂಹಲ ಭರಿತ ಸಾಹಸ ಮಯ ಕಥಾವಸ್ತು ಚಿತ್ರದಲ್ಲಿದೆ.

ತಾರಾಗಣ ದಲ್ಲಿ ಮಣಿಸಾಯಿತೇಜ, ಪವನ್ ವರ್ಮ, ರಾಜೇಶ್ ರೆಡ್ಡಿ, ವೈಢೂರ್ಯ, ರೇಖ, ಸುನೀತ, ಅಕ್ಷರನಿಹ, ಆನಂದ್,ಸಂತೋಷ್, ನಾಗಮಹೇಶ್, ವೀರಬಾಬು ,ಸುರೇಶ್ ಕೊಂಡೇಟಿ, ಕೃಷ್ಣ, ತರುಣ್, ಪವನ್‌ಕುಮಾರ್, ರಾಜೇಂದ್ರ, ಜೀವ, ರವಿಕುಮಾರ್, ಪದ್ಮಜಯಂತಿ, ಮೊದಲಾದವರು ಅಭಿನಯಿಸುತ್ತಿದ್ದಾರೆ.
ಗಂಟಾಡಿ ಕೃಷ್ಣ ಮತ್ತು ಜಯಸೂರ್ಯ ಸಾಹಿತ್ಯ ಮತ್ತು ಸಂಗೀತವಿದೆ, ನಾಗೇಂದ್ರಕು ಮಾರ ರೇಲಂಗಿ ಛಾಯಾಗ್ರ ಹಣ, ಸ್ಟಾರ್ ಮಲ್ಲಿ, ಬಾಜಿರವರ ಸಾಹಸ, ರಾಜು ದಾಸರಿ ಸ್ಥಿರಚಿತ್ರಣ, ಮಲ್ಲಿ ಸಂಕಲನ, ವೀರಬಾಬು ಪತ್ರಿಕಾ ಸಂಪರ್ಕ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಗಿ ಪ್ರಚಾರಕಲೆ, ಕಲಾ ನಿರ್ದೇಶನ ಕರೀವರ್, ಪ್ರಸಾಧನ ಮೇಕಪ್ ಸಿದ್ದು, ನೃತ್ಯ ಅಣ್ಣಾರಾವ್ ,ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಯುವ ಉತ್ಸಾ ಹಿ ನಿರ್ದೇಶಕ ಆರ್.ಕೆ.ಗಾಂಧಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈ ಚಿತ್ರವನ್ನು ಫೆಬ್ರವರಿ ತಿಂಗಳ ಲ್ಲಿ ತೆರೆಗೆ ತರುವ ಪ್ರಯತ್ನ ನಡೆದಿದೆ ಎಂದು ನಿರ್ದೇಶಕ ಆರ್.ಕೆ.ಗಾಂಧಿ ತಿಳಿಸಿದ್ದಾರೆ. ವರದಿ: ಡಾ::ಪ್ರಭು ಅ,ಪೊನ್: ೯೪೪೮೭೭೫೩೪೬

About vijay_shankar

Check Also

ಶಿವಶಕ್ತಿ ಸಿನಿ ಕಂಬೈನ್ಸ್ ಮೂಲಕ ಪ್ರಥಮ ಕಾಣಿಕೆಯಾಗಿ ‘ಕರಾಸ್ತ್ರ ’ ಕನ್ನಡ ಚಲನಚಿತ್ರ ಅತೀ ಶೀಘ್ರದಲ್ಲಿ ಬಿಡುಗಡೆ

ಗದಗ : ಶ್ರೀ ಶಿವಶಕ್ತಿ ಸಿನಿ ಕಂಬೈನ್ಸ್ ಮೂಲಕ ಪ್ರಥಮ ಕಾಣಿಕೆಯಾಗಿ ‘ಕರಾಸ್ತ್ರ ’ ಕನ್ನಡ ಚಲನಚಿತ್ರ ಉತ್ತರ ಕರ್ನಾಟಕದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.