ಬೆವೂರು: ಸಾರ್ವಜನಿಕ ಪ್ರತಿಯೊಂದು ಸಂಸ್ಥೆಯಾಗಲಿ ಹಾಗೂ ಬ್ಯಾಂಕ್ ಆಗಲಿ, ರೈತರ ಸಂಘಗಳಾಗಲಿ ಅದರ ಅಳಿವು- ಉಳಿವು ಇಡೀ ಸಂಸ್ಥೆಯ ಜವಾಬ್ದಾರಿ ಜೊತೆಗೆ ಆ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಹೊಣೆಗಾರಿಕೆ ಬಹಳ ಮಹತ್ವದ್ದು ಹೀಗಾಗಿ ಅಂತವರ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೆವೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ನಿರ್ವಾಹಕರಾಗಿ ಸೇವೆ ಮಾಡುತ್ತಿರುವ ಮಲ್ಲಿಕಾರ್ಜುನ ಘಂಟಿಯವರ ಅನನ್ಯ ಸೇವೆ ಇಂದು ಕೇವಲ ಆರು ಲಕ್ಷ ರೂಪಾಯಿ ವ್ಯವಹಾರ ಹೊಂದಿರುವ ಸಂಘ ಇಂದು ಆರು ಕೋಟಿ, ಇಪ್ಪತ್ತೆಂಟು ಲಕ್ಷ ರೂಪಾಯಿ ಹಣಕಾಸಿನ ವ್ಯವಹಾರ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ, ಸಂಘದ ಈ ಸುಧೀರ್ಘ ಸಾಧನೆಯ ಹಿಂದೆ ಮುಖ್ಯ ಕಾರ್ಯನಿರ್ವಾಹಕರ ನೂರಾವು ನೋವುಗಳು,ರೈತರ ದಬ್ಬಾಳಿಕೆಯ ಮಾತುಗಳು , ಆಗಾಗ ಇವರ ಕಾರ್ಯವನ್ನು ಮೆಚ್ಚಿ ಉರುದುಂಬಿಸುವ ಜನ ಒಂದಡೆಯಾದರೆ ಯಾವುದೇ ಅನುಪ ಸ್ಥಿತಿಯಲ್ಲಿ ಬಂದು ಸಂಘದಲ್ಲಿ ಕಾರ್ಯ ನಿರ್ವಹಿಸುವು ಅನಿವಾರ್ಯತೆ ಹೀಗೆ ಎಲ್ಲಾ ಎಡರು ತೊಡರುಗಳನ ಮೆಟ್ಟಿ ಜಿಲ್ಲೆಯಲ್ಲಿ ಒಂದು ಉತ್ತಮ, ಮಾದರಿ ಸಂಘವನ್ನು ಬೆಳಸಿ ತೋರಿಸಲು ಹಠ ತೊಟ್ಟು “ಕೋಟಿ ವೀರ, ಎನ್ನಿಸಿಕೊಂಡ ಮಲ್ಲಿಕಾರ್ಜುನ ಅವರ ಈ ಸೇವೆ ಇಂದು ನೂರಾರು ರೈತರ ದಾರಿ ದೀಪವಾಗಿದೆ ಎಂದರೆ ತಪ್ಪಾಗಲಾರದು.

ಪ್ರಸಕ್ತ ೨೦೧೫ ರಿಂದ ಈ ಸಂಘದಲ್ಲಿ ಕೆಸಲ ಮಾಡುವಾಗ ಕೇವಲ ಸಂಘದ ಹಣಕಾಸು ವ್ಯವಹಾರ ೦೬ ಲಕ್ಷ ರೂಪಾಯಿ, ಒಟ್ಟು ಶೇರುಗಳ ಸಂಖ್ಯೆ ೬೮೪ , ಆಗ ಸಂಘವು ೧೦ ಲಕ್ಷ ರೂಪಾಯಿ ನಷ್ಟದಲ್ಲಿ ಸಾಗುತ್ತಿತ್ತು ಅಂತಹ ಸಂಧರ್ಭದಲ್ಲಿ ಸಂಘವನ್ನು ಹಾಗೂ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಂದಿಗೆ ೧,೭೦೦ ಸಂಘದ ಒಟ್ಟು ಶೇರುದಾರರು, ಈಗ ಈ ಸಂಘವು ೮,೯೮,೦೦೦ ಸಾವಿರ ರೂಪಾಯಿ ಆದಾಯದಲ್ಲಿ ಸಂಘ ನಡೆಯುತ್ತಿದೆ, ೨೦೦೭ ರಿಂದ ಪ್ರತಿ ವರ್ಷ ಲಾಭ ದತ್ತ ಸಂಘವನ್ನು ಮುನ್ನುಡೆಸುವಲ್ಲಿ ಸಂಸ್ಥೆಯ ಅಧ್ಯಕ್ಷರ ಕಾರ್ಯ ದಕ್ಷತೆ ಇಲ್ಲಿ ಸ್ಮರಿಸಬಹುದು ಅಂದಿನ ಮಾಜಿ ಅಧ್ಯಕ್ಷ ರತನಕುಮಾರ ,ಎಸ್ ವೈಜಾಪೂರ, ಇವರ ನೀರಂತರವಾಗಿ ಎರಡು ಸಲ ಅಧ್ಯಕ್ಷರಾಗಿ ,ಸದಸ್ಯರಾಗಿ, ಪ್ರಾಮಾಣಿಕತೆಯ ಫಲವಾಗಿ ಇಂದು ಸಂಘವು ನೂರಾರು ರೈತರ ಪಾಲಿನ ಸಂಜೀವಿನಿಯಾಗಿದೆ, ಇಂದಿನ ಅಧ್ಯಕ್ಷ ಶ್ರೀಮತಿ ಶಶಿಕಲಾ,ಗ್ಯಾನಪ್ಪ ಕಲಗುಡಿ ಅವರು ಸಹ ಹೀಗೆ ಪ್ರಾಮಾಣಿಕ ಸೇವೆ ಮಾಡಿದಲ್ಲಿ ಈ ಸಂಘವು ಜಿಲ್ಲೆಯಲ್ಲಿ ಉತ್ತಮ ಸಂಸ್ಥೆಯಾಗಿ ಹೋರ ಹೊಮ್ಮಲ್ಲಿದೆ .
ಆಡಳಿತ ಮಂಡಳಿ ಸದಸ್ಯ ರುಗಳ ಹಾಗೂ ರೈತರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿ ಕೊಂಡ ಮಲ್ಲಿಕಾರ್ಜುನ ಅವರ ಸರಳತೆ,ಆತ್ಮಿಯತೆ, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ, ಅರಳ ಸರಳತೆಯಿಂದ ಹಾಗೂ ಪ್ರಾಮಾಣಿಕತೆ ಸೇವೆಯಿಂದ ಸಂಘವು ಇನ್ನೂ ಹೆಚ್ಚಿನ ಬೆಳೆಯಲಿ ಹಾಗೂ ಸ್ನೇಹ ಜೀವಿಯಾದ ಘಂಟಿಯವರ ಚಾಣಕ್ಯತನಕ್ಕೆ ತಲೆ ಬಾಗದವರು ಯಾರು ಇಲ್ಲ ಇಂತಹ ಒಬ್ಬ ಸಮರ್ಥ ಕಾರ್ಯದರ್ಶಿ ಈ ಸಂಘದಲ್ಲಿ ಇರೊದು ರೈತರ ಪುಣ್ಯ ಹಾಗೂ ರೈತರ ಪೂರ್ಣ ಸಹಕಾರದ ಫಲವಗಿ ಹೀಗೆ ಈ ಸಂಸ್ಥೆ ಬೆಳೆಯಲಿ ಜಿಲ್ಲಾ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಪಡೆದ ಈ ಸಂಸ್ಥೆ ಇನ್ನೂ ರಾಜ್ಯಮಟ್ಟದಲ್ಲಿ ಗುರುತಿಸಲು ಮಲ್ಲಿಕಾರ್ಜುನ ಅವರ ಪ್ರಾಮಾಣಿಕತೆ ಬಹಳ ಅವಶ್ಯ ಈ ಸಂಘದ ಉತ್ತಮ ಬೆಳವಣಿಗೆಗೆ ಬಹಳ ಜನ ರೈತರು ಮಲ್ಲಿಕಾರ್ಜುನ ಅವರ ಕಾರ್ಯ ಕ್ಷಮತೆಯ ಮೆಚ್ಚಿ ಅಭಿನಂದನೆ ಹೇಳಿದ್ದಾರೆ. ಇವರ ಈ ಪ್ರಾಮಾಣಿಕ ಸೇವೆ ಪಕ್ಷಾತೀತವಾಗಿ,ಜಾತ್ಯಾತೀತವಾಗಿ ಇರಲಿ ಎಂದು ನಮ್ಮ ಪತ್ರಿಕೆಯ ಶುಭ ಹಾರೈಕೆ.