ಬೆಳಗಾವಿ : ಕರ್ನಾಟಕ ರಾಜ್ಯ ರೈತ ಸಂಘದಿಂದ ಇಂದು ಬೆಳಗಾವಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ, ಕೇಂದ್ರ ಸರಕಾರದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಾಗೂ ಕಾರ್ಮಿಕರ ಕಾಯ್ದೆ ತಿದ್ದುಪಡಿ ಮತ್ತು ರೈತ ವಿರೋದಿ ಕಾಯ್ದೆಯನ್ನು ಕೈ ಬಿಟ್ಟು ಸರಕಾರ ರೈತಪರವಾದ ಮಸೂದೆ ಜಾರಿ ತರಲು ರಾಜ್ಯ
ಸಂಘದ ರಾಜ್ಯ ಅಧ್ಯಕ್ಷ ಬಸವರಾಜ್ ಕರಿಗಾರ ಬೃಹತ್ ರೈತ ಸಮಾವೇಶದ ಮೂಲಕ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಆನಂದ ಜಕಾತಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಿಂದ 50, ಸಾವಿರಕ್ಕೂ ಅಧಿಕ ರೈತರು ಈ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಹಾವೇರಿ ,ಗದಗ,ವಿಜಯಪುರ, ಕಾರವಾರ ಸೇರಿದಂತೆ ಸಾವಿರಾರು ರೈತ ಮುಖಂಡರು ಸಾಕ್ಷಿಯಾದರು.

ಉತ್ತರ ಕರ್ನಾಟಕ ರೈತ ಸಂಘದಿಂದ ಬೆಳಗಾವಿ ಜಿಲ್ಲೆಯಲ್ಲಿ ನಡೆದ ರೈತ ಮಹಾ ಪಂಚಾಯತ್ ಸಮಾವೇಶದಲ್ಲಿ ರಾಜ್ಯಾಧ್ಯಕ್ಷರಾದ ಬಸವರಾಜ್ ಕರಿಗಾರ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಳಿಯಪ್ಪ ದಬಗಲ್ ಹಾಗೂ ಹಾಗೂ ಕಾರವಾರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಅಬ್ದುಲ್ಕರಿಂ ಅಜರೇಕರ್ ಹಾಗೂ ದಾಂಡೇಲಿ ತಾಲೂಕಿನ ಅಧ್ಯಕ್ಷರಾದ ಮಹಬೂಬ್ ಪೀರಾ ಹಾಗೂ ಜಯಪಾಲ್ ಸಿಂಗ್ ಎಲ್ಲರೂ ಪಾಲ್ಗೊಂಡಿದ್ದರು.
