ಗೂಡೂರ SC : ಇಂದು ಇಲಕಲ್ಲ ತಾಲೂಕಿನ ಗುಡೂರು Sc, ಗ್ರಾಮದಲ್ಲಿ ಕರವೇ, ಸಂಘಟನೆಯಿಂದ ಬೃಹತ್ ಪ್ರತಿಭಟನೆ ನಡೆಯಿತು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಸಾವಿನ ಪ್ರಕರಣದ ಬಗ್ಗೆ ಇಡೀ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಇದೇ ರೀತಿಯಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ.
ಹತ್ರಾಸ್ ನಿಂದ 500 ಕಿಲೋ ಮೀಟರ್ ದೂರದಲ್ಲಿರುವ ಬಲ ರಾಮ್ ಪುರ ಗ್ರಾಮದಲ್ಲಿ ಮಂಗಳವಾರ ಸಂಜೆ 22 ವರ್ಷದ ದಲಿತ ಯುವತಿ ಮೇಲೆ ಕಾಮುಕರು ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಪರಿಣಾಮ ಆಕೆ ಲಖನೌನ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಕಾಲೇಜಿಗೆ ಪ್ರವೇಶಾತಿ ಪಡೆಯಲು ಬೆಳಗ್ಗೆ ಹೋಗಿದ್ದ ಯುವತಿಯನ್ನು ಅಪಹರಣ ಮಾಡಲಾಗಿತ್ತು. ಆಕೆ ಮನೆಗೆ ವಾಪಸ್ಸಾಗದಿದ್ದಾಗ ಕುಟುಂಬದವರು ಶೋಧ ಕಾರ್ಯ ನಡೆಸುತ್ತಿದ್ದಾಗ ಸಂಜೆ 7 ಗಂಟೆ ಸುಮಾರಿಗೆ ಹಲ್ಲೆಕೋರರು ಇ- ರಿಕ್ಷಾದಲ್ಲಿ ಆಕೆಯನ್ನು ಮನೆಗೆ ಕಳುಹಿಸಿದ್ದರು. ಆಕೆಯ ಕಾಲು, ಬೆನ್ನಿನ ಮೇಲೆ ಹಲ್ಲೆ ನಡೆಸಲಾಗಿತ್ತು. ಆಟೋ ರಿಕ್ಷಾ ಚಾಲಕ ಮನೆಗೆ ಮುಂಭಾಗ ಆಕೆಯನ್ನು ಎಸೆದು ಹೋಗಿದ್ದ.ಆಕೆಗೆ ಎದ್ದು ನಿಲ್ಲುವ ಅಥವಾ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಅತ್ಯಾಚಾರಕ್ಕೊಳಗಾದ ಯುವತಿಯ ತಾಯಿ ಕಣ್ಣೀರು ಹಾಕಿದ್ದಾರೆ.
ನಂತರ ಸ್ಥಳೀಯ ಆಸ್ಪತ್ರೆಗೆ ಆಕೆಯನ್ನು ಕೊಂಡೊಯ್ಯಲಾಯಿತು. ಆದರೆ, ಆಕೆಯ ಸ್ಥಿತಿ ಗಂಭೀರವಾಗಿದ್ದು, ಲಖನೌ ಆಸ್ಪತ್ರೆಗೆ ಕೊಂಡೊಯ್ಯುವಂತೆ ಡಾಕ್ಟರ್ ನೀಡಿದರು. ಆದರೆ, ಬಲರಾಮಪುರದಲ್ಲಿಯೇ ಆಕೆ ಸಾವನ್ನಪ್ಪಿದ್ದಾಗಿ ತಾಯಿ ತಿಳಿಸಿದರು.
ಮೃತದೇಹವನ್ನು ಪೊಲೀಸರು ಕುಟುಂಬಕ್ಕೆ ಹಸ್ತಾಂತರಿಸಿದ ಬಳಿಕ ಬುಧವಾರ ಅಂತ್ಯಕ್ರಿಯೆ ನಡೆಸಲಾಗಿದೆ. ಈ ಪ್ರಕರಣ ಸಂಬಂಧ ಯೋಗಿ ಸರ್ಕಾರದಮತ್ತೊಂದು, ಉತ್ತರ ಪ್ರದೇಶದ ಹಥ್ರಾಸ್ ನಲ್ಲಿ ದಲಿತ ಬಾಲಕಿ ಮನಿಷಾ ವಾಲ್ಮೀಕಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಠಾಕೂರ್ ದುಷ್ಟರಿಗೆ ಗಲ್ಲು ಶಿಕ್ಷೆ ಜಾರಿಮಾಡಬೇಕು.

ಅತ್ಯಾಚಾರಿ ಕೃರೀಗಳಿಗೆ ಸಂವಿಧಾನ ತಿದ್ದುಪಡಿ ಮಾಡಿ ಕಠಿಣ ಕಾನೂನು ಜಾರಿ ಮಾಡಬೇಕೆಂದು ಕರವೇ ಕಾರ್ಯಕರ್ತರು ಇಂದು ಇಲಕಲ್ಲ ತಾಲೂಕಿನ ಗುಡೂರು sc ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಕಂದಾಯ ನೀರಿಕ್ಷಕ ಶ್ರೀ ನವೀನ ಬಲಕುಂದಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ರಮೇಶ ಬದ್ನೂರ ಯೋಗಿ ಆದಿತ್ಯನಾಥ ಸರಕಾರ ಮಹಿಳೆಯರ ಮಾನ ರಕ್ಷಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ, ಇಂತಹ ಪ್ರಕರಣಗಳು ಉತ್ತರ ಪ್ರದೇಶ ದಲ್ಲಿ ಮೇಲಿಂದ ಮೇಲೆ ನಡೆತ್ತಿವೆ,
ಇದಕ್ಕೆ ಕಾನೂನಿನ ಭಯವಿಲ್ಲದೆ ರಾಕ್ಷಸ ಕೃತ್ಯ ನಡೆಸುತ್ತಿರುವವರ ವಿರುದ್ದ ಕಠಿಣ ಕಾನೂನು ಜಾರಿ ಮಾಡಿ ಸದರಿ ಪ್ರಕರಣ ಸಾಬಿತಾದ ಒಂದು ತಿಂಗಳಲ್ಲಿ ಶಿಕ್ಷೆ ಜಾರಿ ಮಾಡಬೇಕು ಎಂದು ಆದಿತ್ಯನಾಥ ಸರಕಾರಕ್ಕೆ ಎಚ್ಚರಿಸಿದರು, ತಾಲೂಕು ಅಧ್ಯಕ್ಷ ರಮಜಾನ್ ನದಾಫ್ ,ನಗರ ಘಟಕ ಅಧ್ಯಕ್ಷ ಶಿವು ಸಾಲಿಮಠ, ಸಲೀಂ,ಜರತಾರಿ,ಸಂಗಪ್ಪ ಚಳ್ಳಪನವರ,ರೀಯಾಜ್ ವಾಲಿಕಾರ,ಫಕೀರುದ್ದಿನ್ ವಾಲಿಕಾರ, ಅಲ್ಲಾಭಕ್ಷ,ವಾಲಿಕಾರ, ರಫೀಕ ಇಟಗಿ, ಹಾಗೂ ಅಪಾರ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು. ಅಮೀನಗಡ ಪೊಲೀಸ್ ಠಾಣೆಯ ASI ಕುಪ್ಪಿ ಸರ್ ಹಾಗೂ ವಾಲಿಕಾರ, ಪೊಲೀಸ್ ಸಿಬ್ಬಂದಿ ಸೂಕ್ತ ಬಂದುಬಸ್ತ್ ಒದಗಿಸಲಾಗಿತ್ತು.
ವರದಿ: ಪರಶುರಾಮ CK