
ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ನೂತನ ಅಧ್ಯಕ್ಷರಾಗಿ ಶ್ರೀಮತಿ ಸರೋಜಾ ಕನಕಪ್ಪ ವಡ್ಡರ ಅವರು ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆ ಆದರು. ಈ ಹಿಂದೆ ಇದ್ದ ಗ್ರಾಮ ಪಂ,ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ರಾಜಿನಾಮೆ ನೀಡಿದ ಪ್ರಯುಕ್ತ ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷೆ ಶ್ರೀಮತಿ ಸರೋಜಾ ಕನಕಪ್ಪ ವಡ್ಡರ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿರುವುದರಿಂದ ಮಾಜಿ ಶಾಸಕ ಶ್ರೀ ಎಸ್,ಜಿ,ನಂಜಯ್ಯನಮಠ ಹಾಗೂ ಕಾಂಗ್ರೇಸ್ ಪಕ್ಷಕ ಹಿರಿಯ ಮುಖಂಡರಾದ ಶ್ರೀ ಆರ್,ಪಿ,ಕಲಬಿರ್ಗಿ ಅವರ ಸಮ್ಮುಖದಲ್ಲಿ ಎಲ್ಲಾ ಸದಸ್ಯರ ಅಭಿಪ್ರಾಯದ ಮೇರೆಗೆ ಅ ವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಶ್ರೀಮತಿ ಸರೋಜಾ ಕನಕಪ್ಪ ವಡ್ಡರ ಅವರು ಪಕ್ಷದ ಹಿರಿಯ ಮುಖಂಡರಿಗೆ ಹಾಗೂ ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರ ಮುಂದೆ ಇರುವ ಸವಾಲುಗಳು
ನೂತನ ಅಧಿಕಾರ ಸ್ವೀಕರಿಸಿದ ಶ್ರೀಮತಿ ಸರೋಜಾ ಅವರು ಆಡಳಿತವನ್ನು ಚುರುಕು ಗೋಳಿಸಬೇಕಾಗಿದೆ. ಗ್ರಾಮದಲ್ಲಿ ಮಳೆಗಾಲ ಈಗ ಆರಂಭವಾಗಿದೆ,ಸಾರ್ವಜನಿಕರಿಗೆ ಕುಡಿಯುವ ನೀರು,ಉತ್ತಮ ರಸ್ತೆಗಳಿಲ್ಲದೆ ಜನ ಪರಿಪಾಟೀಲು ಪಡುತ್ತಿದ್ದಾರೆ. JJM ಕಾಮರಿಯಿಂದ ಎಲ್ಲಾ ರಸ್ತೆಗಳು ಹಾಳಾಗಿವೆ. ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ. ರಸ್ತೆಗಳು ಸಂಪೂರ್ಣವಾಗಿ ಕೆಟ್ಟು ಹೋಗಿದ್ದು ರಾತ್ರಿ ವಿದ್ಯುತ್ ಸಮಸ್ಯೆಯಿಂದ ಜನ ಓಡಾಡುವುದು ಬಹಳ ತೊಂದರೆ ಪಡುತ್ತಿದ್ದಾರೆ.ಈ ಬಗ್ಗೆ ಮೊದಲು ಅಧ್ಯಕ್ಷರು ಆಧ್ಯತೆ ನೀಡಬೇಕು ಎಂಬುವುದು ಸಾರ್ವಜನಿಕರ ಅಭಿಪ್ರಾಯ. ಗ್ರಾಮದಲ್ಲಿ ೧೫,೦೦೦ ಸಾವಿರಕ್ಕೂ ಹೆಚ್ಚು ಜನ ಇದ್ದಾರೆ,ಆದರೆ ಒಂದು ಶುದ್ದ ಕುಡಿಯುವ ನೀರಿನ ಘಟಕ ಪದೆ ಪದೆ ರಿಪೇರಿ ಬರುತ್ತಿದ್ದೆ, ಗ್ರಾಮ ಪಂಚಾಯತಿ ಮುಂದೆ ಇರುವ ಶುದ್ದ ನೀರಿನ ಘಟಕ ಬಂದ್ ಆಗಿ ವರ್ಷಗಳೇ ಕಳೆದಿವೆ ಇದರ ಕಡೆ ಗಮನ ಹರಿಸಿ ಹೊಸ ಮಸಿನ್ ಕರಿದಿ ಮಾಡಿ ಇದನ್ನು ಪುನಹ ಆರಂಬಿಸಿ ಜನತೆಗೆ ಅನುಕೂಲ ಮಾಡಿದರೆ ಒಳ್ಳೆಯದು, ವಾರ್ಡ ನಂಬರ್ ೧ ರಲ್ಲಿ ಶ್ರೀ ವಿವೇಕಾನಂದ ಶಾಲೆಯಿಂದ ಗ್ರಾಮದ ಹೊರ ವಲಯದ ಸ್ಮಶಾನದ ವರೆಗೆ ಸಾಕು ವಿದ್ಯುತ್ ಕಂಬಳಿದ್ದು ಅಲ್ಲಿ ನೀರು ಬಿಳದ ಕಾರಣ ವಿದ್ಯುತ್ ಸರಬರಾಜು ಕೊಟ್ಟಿಲ್ಲ ಹೋಲದಿಂದ ಬರುವ ರೈತರಿಗೆ ಹಾಗೂ ರಾತ್ರಿ ಶವ ಸಂಸ್ಕಾರ ಮಾಡಲು ಹೋಗುವ ಸಾರ್ವಜನಿಕರಿಗೆ ಭಾರಿ ಕತ್ತಲು ಇರುವಿದರಿಂದ ಈಗ ತಾತ್ಕಾಲಿಕವಾಗಿ ಬಲ್ಪಗಳನ್ನು ಹಾಕಿ ಬೆಳಕು ಮಾಡಲು ರೈತರ ಆಗ್ರಹವಾಗಿದೆ. ನಮ್ಮೂರಿನ ಕೆರೆಗೆ ಹೋಗುವ ಮಾರ್ಗದಲ್ಲಿ ರಸ್ತೆ ಸಂಪೂರ್ಣವಾಗಿ ಮುಳ್ಳು ಕೊಂಪೆಗಳಿಂದ ಮುಚ್ಚಿ ಹೋಗಿದ್ದು ಗ್ರಾಮದ ಹೋಲಕ್ಕೆ ಹೋಗಿವ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗತಾ ಇವೆ ಇವುಗಳ ಕಡೆ ಆದ್ಯತೆ ನೀಡಬೇಕು, ನೂತನ ಅಧ್ಯಕ್ಷರು ಜಾತ್ಯಾತೀತವಾಗಿ,ಉತ್ತಮ ಆಳಿತದ ಮೂಲಕ ಜನರ ಸಣ್ಣ ಸಣ್ಣ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪ್ರತಿ ತಿಂಗಳು ಪ್ರತಿ ವಾರ್ಡಗಳಿಗ ಬೇಟಿ ನೀಡಿ ವಾಸ್ತವೆ ಮಾಡಬೇಕು ವಾರ್ಡಿನ ಸಂಪೂರ್ಣ ಮಾಹಿತಿ ಪಡೆದು ಕೆಲಸ ಮಾಡಬೇಕು ಎಂಬುದು ಜನರ ಆಶಯ ನೂತನ ಅಧ್ಯಕ್ಷರು ಇಂತಹ ದೊಡ್ಡ ಅಧಿಕಾರವನ್ನು ಹೇಗೆ ನಿಭಾಯಿಸುತ್ತಾರೊ ಎಂಬುದು ಕಾದು ನೋಡಬೇಕಾಗಿದೆ.