ಬೆಂಗಳೂರು : ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಜನವರಿ 13 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ.
ದಿಢೀರ್ ದೆಹಲಿಗೆ ಹೋಗಿ ಬಂದಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಂಕ್ರಾಂತಿ ಸಿಹಿ ತಂದಿದ್ದಾರೆ. ಖಾಲಿ ಇರುವ ಏಳು ಸ್ಥಾನಗಳ ಭರ್ತಿಗೆ ವರಿಷ್ಠರು ಹಸಿರು ನಿಶಾನೆ ತೋರಿಸಿದ್ದು, ಯಾರೆಲ್ಲಾ ಶಾಸಕರಿಗೆ ಅದೃಷ್ಟ ಖುಲಾಯಿಸಿದೆ ಎನ್ನುವುದು ಇಂದು ಗೊತ್ತಾಗಲಿದೆ.
ಇನ್ನು ವರಿಷ್ಠರ ಜೊತೆಗೆ ಚರ್ಚೆಗೆ ತೆರಳಿದ್ದ ಯಡಿಯೂರಪ್ಪ ಯಾರೆಲ್ಲ ಸಂಪುಟಕ್ಕೆ ಸೇರಬೇಕೆಂದು ಪ್ರಸ್ತಾವನೆ ಇಟ್ಟಿದ್ದರು. ಆದರೆ ಸರ್ಕಾರ ರಚನೆಗೆ ಕಾರಣವಾದವರ ಪೈಕಿ ಬಿಎಸ್ ವೈ ಭರವಸೆ ಕೊಟ್ಟವರಿಗೆಲ್ಲ ಸಚಿವ ಸ್ಥಾನ ಖಚಿತ ಎನ್ನಲಾಗಿದೆ.
ಸಂಭಾವ್ಯ ಸಚಿವರು
ಎಂಟಿಬಿ ನಾಗರಾಜ್
ಮುನಿರತ್
ಯೋಗೇಶ್ವರ್
ಉಮೇಶ್ ಕತ್ತಿ
ಆರ್. ಶಂಕರ್
ಅರವಿಂದ್ ಲಿಂಬಾವಳಿ
ಬಸನಗೌಡ ಪಾಟೀಲ್ ಯತ್ನಾಳ್
ವಿ.ಸುನೀಲ್ ಕುಮಾರ್ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದೆ.