
ಗುಡೂರುsc : ಇಲಕಲ್ಲ ತಾಲೂಕಿನ ವಡಗೇರಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ನೂತನ SDMC ಅಧ್ಯಕ್ಷ ಶ್ರೀ ಮುತ್ತಣ್ಣ ಬಸಪ್ಪ ಹಿರೇಕುರಬರ,ಅವರು ನೂತನವಾಗಿ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ,ಆಯ್ಕೆಯಾದ ೨೪ ಗಂಟೆಯಲ್ಲಿ ಕನ್ನಡ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಹಗಲು – ರಾತ್ರಿ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾರೆ, ಈಗಾಗಲೇ ಮಕ್ಕಳ ಕಲಿಕೆಗಾಗಿ ಶಾಲಾ ಸುತ್ತ ಕಾಂಪೌಂಡ್ ಹಾಗೂ ಉತ್ತಮ ಸುಸಜ್ಜಿತ ಶಿಕ್ಷಕರ ಕೋಠಡಿ, ಮಾಡಲಿದ್ದಾರೆ,ಅಲ್ಲದೆ ಮಕ್ಕಳ ಕಲಿಕೆಗೆ ಕಂಪ್ಯೂಟರ್ ಕೊಡಿಸುವುದಾಗಿ ಘೋಷಣೆ ಮಾಡಿದ್ದಾರೆ,ಅಷ್ಟಕ್ಕೂ ಈ ಮುತ್ತಪ್ಪನವರು ಶ್ರಮ ಜೀವಿ,ಕಾಯಕ ಜೀವಿ, ಮತ್ತು ರೈತ ಕಾಯಕವೇ ಕೈಲಾಸ ಎಂದು ನಂಬಿದ ಬಸವಣ್ಣನವರ ಅನುಯಾಯಿ ಎಂದರೆ ತಪ್ಪಾಗಲಾರದು,

ನೂತನ ಈ ಶಾಲೆಯ ಅದ್ಯಕ್ಷರಾಗಿ ಆಯ್ಕೆಯಾದ ಮುತ್ತಣ್ಣನವರಿಗೆ ಗ್ರಾಮದ ಹಿರಿಯರು, ಯುವಕರು,ಅಭಿನಂದನೆ ಸಲ್ಲಿಸಿದ್ದಾರೆ, ಈ ಶಾಲೆಯಲ್ಲಿ ೩೬ಂ ಕ್ಕೂ ಹೆಚ್ಚು ವಿಧ್ಯಾರ್ಥಿಗಳ ಸಂಖ್ಯೆ ಇದ್ದರು ಇಲ್ಲಿ ಶಿಕ್ಷಕರ ಕೊರತೆ ಇದೆ,ಈ ಬಗ್ಗೆ ಮಾನ್ಯ ಶಾಸಕರ ಜೊತೆಗೆ ಮಾತನಾಡಿ ಮನವಿ ಸಲ್ಲಿಸಿ ಒಂದು ತಿಂಗಳಲ್ಲಿ ಇದನ ಬಗೆ ಹರಿಸುವುದಾಗಿ ಹೇಳಿದರು,ಗ್ರಾಮದ ಎಲ್ಲಾ ಪಾಲಕರು ದಯಮಾಡಿ ಪ್ರತಿಯೊಬ್ಬರು ಕನ್ನಡ ಶಾಲೆಯನ್ನು ಬೆಳೆಸಬೇಕು ಕನ್ನಡ ಭಾಷೆಯನ್ನು ಉಳಿಸಬೇಕು ಎಂದು ಕರೆ ನೀಡಿದರು.