ಅಮೀನಗಡ
ಶ್ರೀ ವ್ಹಿ,ಎಂ,ಬ್ಯಾಂಕ್ ಹುನಗುಂದ ಇದರ ನೂತನ ಸದಸ್ಯರಾಗಿ ಪ್ರಥಮ ಬಾರಿಗೆ ಆಯ್ಕೆಯಾದ ಶ್ರೀ ಮಂಜುನಾಥ ಅಗಪ್ಪ ಆಲೂರ ಇವರಿಗೆ ಸೂಳೇಭಾವಿ ಗ್ರಾಮದ ಭಾವೈಕ್ಯತಾ ಗೆಳೆಯರ ಬಳಗದಿಂದ ಸನ್ಮಾನ ಮಾಡಲಾಯಿತು.

ಈ ಸರಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಂಜುನಾಥ ಅವರು ನನ್ನನ್ನು ಈ ಗ್ರಾಮದಲ್ಲಿ ಹೆಚ್ಚಿನ ಮತಗಳಿಂದ ಹಗಲು ರಾತ್ರಿ ಕೆಲಸ ಮಾಡಿ ಮತ ನೀಡಿ ನಿಮ್ಮ ಸೇವೆ ಮಾಡಲು ಆಯ್ಕೆ ಮಾಡಿದ್ದಿರಿ ನಿಮಗೆ ನನ್ನ ಕೃತಜ್ಞತೆಗಳು ಎಂದು ಧನ್ಯವಾದ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ನಾಗೇಶ ಗಂಜಿಹಾಳ ಅವರು ಮಂಜುನಾಥ ಅವರು ಎರಡನೆ ಬಾರಿಗೆ ಈ ಬ್ಯಾಂಕಿಗೆ ಆಯ್ಕೆಯಾಗಿದ್ದಾರೆ, ಅವರ ಈ ಸಾಮಾಜಿಕ ಸೇವೆ ಅವರ ದೊಡ್ಡಪ್ಪ ದಿ, ಬಸಪ್ಪ ಆಲೂರ ಅವರ ಸ್ಥಾನವನ್ನು ಮಂಜುನಾಥ ಅವರು ತುಂಬಿದ್ದಾರೆ. ಅವರ ಕೀರ್ತಿ ಹೀಗೆ ಹೆಚ್ಚುತ್ತಾ ಆ ಕನ್ನಡಾಂಬೆ ಹೆಚ್ಚಿನ ಆರ್ಶಿವಾದ ಮಾಡಿ ಜನ ಸೇವೆ ಮಾಡುವಂತಾಗಲಿ ಎಂದರು.
ಈ ಸರಳ ಅಭಿನಂದಾನ ಸಭೆಯಲ್ಲಿ ಹಿರಿಯರಾದ ಶ್ರೀ ಮುರಳೀಧರ ಮಾಂಡ್ರೆ, ಶ್ರೀ ಸುರೇಶ ಗಂಜಿಹಾಳ, ಗ್ರಾಂ,ಪ, ಸದಸ್ಯ ಶ್ರೀ ಗ್ಯಾನಪ್ಪ ಗೋನಾಳ, ಶ್ರೀ ರಮೇಶ ಮಡಿವಾಳರ, ಶ್ರೀ ಶಂಕರಗ ಮಿಣಜಗಿ, ಶ್ರೀ ಹನಮಂತ ನಾವಿ, ಶ್ರೀ ನಿಂಗಪ್ಪ ಹಣಗಿ, ಶ್ರೀ ನಾಗಲಿಂಗಪ್ಪ,ಪರಾಳದ ಇತರರು ಉಪಸ್ಥಿತಿ ಇದ್ದರು.
ಮಂಜುನಾಥ ಆಲೂರ ಅವರು ಕೂಡ ಅಭಿನಂದನಾರ್ಥವಾಗಿ ಹಿರಿಯರಾದ ಮುರಧರ್ ಮಾಂಡ್ರೆ ಹಾಗೂ ಸುರೇಶ ಗಂಜಿಹಾಳ ಅವರಿಗೆ ಸನ್ಮಾನ ಮಾಡಿ ಅಭಿನಂದನೆ ಹೇಳಿ ಸಿಹಿ ಹಂಚಿ ಸಂಭ್ರಮಿಸಿದರು.