Breaking News

ಶೂಲೇಭಾವಿ ಗ್ರಾಮದಲ್ಲಿ S,G, ನಂಜಯ್ಯನಮಠ ಅವರ ನೇತೃತ್ವದಲ್ಲಿ ಕೋವಿಡ್ ಕುರಿತು ಬಹಿರಂಗ ಸಮಾಲೋಚನಾ ಸಭೆ

ಸ್ಥಳೀಯ BHEO- ಶ್ರೀಮತಿ N,N,ನಾಯಕ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ನೀಡಿದರು.

ಅಮೀನಗಡ:
ಇಂದು ಕೋವಿಡ್ ಸೋಂಕಿತರ ಕುರಿತು ಶೂಲೇಭಾ ವಿ, ಗ್ರಾಮದಲ್ಲಿ ಮಾಜಿ ಶಾಸಕ ಎಸ್,ಜಿ,ನಂಜಯ್ಯನಮಠ ಅವರ ನೇತೃತ್ವದಲ್ಲಿ ಬಹಿರಂಗ ಸಮಾಲೋಚನಾ ಸಭೆ ನಡೆಸಿದರು,ಜಿಲ್ಲಾ KPCC ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಇವರು ಗ್ರಾಮದ ಹಿತ ದೃಷ್ಟಿಯಿಂದ ನಮ್ಮ ಪಕ್ಷದ ಕಾರ್ಯ ಚಟುವಟಿಕೆಗಳ ಮಧ್ಯ ಗ್ರಾಮದ ವಾಸ್ತವ ಚಿತ್ರಣ ಹೇಗಿದೆ ಇದರ ಪೂರ್ಣ ಮಾಹಿತಿ ಪಡೆದು ಗ್ರಾಮದ ಪ್ರಮುರ ಮೂಲಕ ಕರೋನ ತಡೆಯಲು ಏನೆಲ್ಲ ಕ್ರಮಗಳಿವೆ ಎಂಬ ವಾಸ್ತವ ಅರಿತು ಈ ದಿಡಿರ್ ಸಮಾಲೋಚನಾ ಸಭೆ ಕರೆಯಬೇಕಾಯಿತು ಎಂದರು, ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮ ಪಂಚಾಯತಿ ಆವರಣದಲ್ಲಿ ಇಂದು ಸಾಯಂಕಾಲ ೫:೩೦ ರ ಸುಮಾರಿಗೆ ಗ್ರಾಮ ಪಂಚಾಯತಿ ಸರ್ವ ಸದಸ್ಯರ ಸಮ್ಮುಖದಲ್ಲಿ ಹಾಗೂ ಗ್ರಾಮದ ಪ್ರಮುಖ ಹಿರಿಯರು, ಸೇರಿ ಗ್ರಾಮದಲ್ಲಿ ದಿನೆ ದಿನೆ ಕರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಇದರ ಕಟ್ಟುನಿಟ್ಟಿನ ಕ್ರಮ ಹಾಗೂ ಮುಂಜಾಗ್ರತಾ ಕ್ರಮದ ಬಗ್ಗೆ ತಾಲೂಕು ವೈಧ್ಯಾದಿಕಾರಿ ಡಾ: ಪ್ರಶಾಂತ ತುಂಬಗಿ ಹಾಗೂ ಗ್ರಾಮದ ಸರಕಾರಿ ಆಸ್ಪತ್ರೆಯ BHEO ಆದ ಶ್ರಿಮತಿ ಎನ್,ಎನ್, ನಾಯಕ ಅವರನ್ನು ಕೋವಿಡ್ ಸೋಂಕಿತರ ಪೂರ್ಣ ವಿವರಗಳನ್ನು ಬಹಿರಂಗವಾಗಿ ಚರ್ಚೆ ಮಾಡುವ ಮೂಲಕ ಅವರ ಸಧ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು,

ಸ್ಥಳೀಯ BHEO- ಶ್ರೀಮತಿ N,N,ನಾಯಕ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿ ನೀಡಿದರು.

ಚಿಕಿತ್ಸೆಗೆ ಸ್ಪಂದನೆ ಮಾಡದೆ ಇದ್ದವರು ಉಡಾಫೆ ಉತ್ತರ ಕೊಟ್ಟವರು ಹೊಮ್ ಕ್ವಾರಂ ಟೈನ್ ಗೆ ಒಳಪಟ್ಟು ಹೊರಗಡೆ ಓಡಾಡುವರು ಇದ್ದರೆ ಹೇಳಿ ಅಂತವರಿಗೆ ನಾವು ಬುದ್ದಿ ಹೇಳುತ್ತೆವೆ ಎಂದು R,P ಕಲಬುರ್ಗಿ ಹಾಗೂ ಹಿರಿಯರು ಕೇಳಿದರು., ಈ ಬಗ್ಗೆ ಪೂರ್ಣ ವಿವರಣೆ ನೀಡಿದ ಶ್ರೀಮತಿ ಎನ್,ಎನ್,ನಾಯಕ ಮೆಡಮ್ ಅವರು ಗ್ರಾಮದಲ್ಲಿ ಒಟ್ಟು ೩೨ ಸೋಂಕಿತರು ಇದ್ದು ಅವರಲ್ಲಿ ಎರಡು ಸಲ ಮತ್ತೆ ಮತ್ತೆ ಸೋಂಕು ಧೃಡ ಪಟ್ಟಿದೆ ಇನ್ನೂ ಮೂರು ದಿನದಲ್ಲಿ ೦೭ ಜನ ಸೋಂಕಿತರು ಪೂರ್ಣ ಗುಣ ಹೊಂದಲಿದ್ದಾರೆ ,ಯಾರೂ ಗಂಭೀರವಾಗಿ ತೊಂದರೆಗೆ ಒಳಗಾಗಿಲ್ಲ,ಆಕ್ಸಿಜನ್ ಒಳಪಟ್ಟಿಲ್ಲ ಎಲ್ಲರೂ ಮನೆಯಲ್ಲಿ ಇದ್ದು ಆರೈಕೆ ಮಾಡಿಕೊಳ್ಳುತ್ತಿದ್ದಾರೆ,ಈ ಬಗ್ಗೆ ಅವರ ಮನೆಯವರು ಅಂತರ ಕಾಯ್ದುಕೊಂಡು ಉಪಚಾರ ಮಾಡಬೇಕು,ಹಾಗೆ ಹೊರಗಡೆ ಬರದಂತೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಲು ತಿಳಿಸಿದರು. ಹಾಗೆ ಎಲ್ಲರಿಗೂ ಮನೆಯಲ್ಲಿ ಔಷದ ನೀಡುವ ವ್ಯವಸ್ಥೆ ಮಾಡಿದೆ ಎಲ್ಲರೂ ಚೇತರಿಕೆ ಕಂಡಿದ್ದಾರೆ, ಭಯ ಪಡುವ ಅವಶ್ಯಕತೆ ಇಲ್ಲ ಆದರೆ ಸೋಂಕು ಹರಡದಂತೆ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದರು.

ಹಾಗೆ ಸುತ್ತಮುತ್ತಲಿನ ಜನರೊಂದಿಗೆ ಅಂತರ ಕಾಯ್ದಕೊಂಡು ಹಾಗೂ ಮಾಸ್ಕ್ ಧರಿಸಿ ವ್ಯವಹಾರ ಮಾಡಬೇಕು ಎಂದರು.
ಈ ಸಭೆ ಉದ್ದೇಶಿಸಿ ಮಾತನಾಡಿದ ಅಮೀನಗಡ ಪಿ,ಎಸ್,ಐ, ಮಲ್ಲಿಕಾರ್ಜುನ ಕುಲಕರ್ಣಿ ಅವರು ಜೀವನ ಪೂರ್ತಿ ದುಡಿಯೋದು ಇದೆ, ಹಣ ಗಳಿಸೊದು ಇದೆ ಆದರೆ ಜೀವ ಒಂದೆ ಸಲ ಹೋಗೊದು ಕಳೆದ ಒಂದು ವಾರದಲ್ಲಿ ಪಕ್ಕದ ಕಮತಗಿ ಗ್ರಾಮದಲ್ಲಿ ೦೭ ಜನ ಹಸುನಿಗಿದ್ದಾರೆ ಹೀಗಾಗಿ ಆ ಗ್ರಾಮದ ಪ್ರಮುಖರು ಸೇರಿ ಸ್ವತ: ಗ್ರಾಮವನ್ನು ಒಂದು ವಾರ ಲಾಕ್ ಡೌನ್ ಮಾಡಲಿದ್ದಾರೆ ಇದರಿಂದ ಸೋಂಕು ಹರಡುವುದು ಸಾಧ್ಯವಾದಷ್ಟು ಕಡಿಮೆ ಮಾಡಬಹುದು, ಈ ತರ ತಾವು ಕೂಡ ಬಹಳ ಎಚ್ಚರಿಕೆಯಿಂದ ಇರಬೇಕು,ತಾಬು ಕೂಡ ಲಾಕ್ ಡೌಡ್ ಮಾಡಲು ಮುಂದೆ ಬಂದರೆ ನಮ್ಮ ಸಹಕಾರ ಇದೆ ಎಂದರು. ನಮ್ಮ ಇಲಾಖೆಗೆ ಹೇದರಿ ಮಾಸ್ಕ್ ಧರಿಸಬೇಡಿ ನಿಮ್ಮನ ನೀವು ರಕ್ಷಣೆ ಮಾಡಿಕೊಳ್ಳಲು ಕಡ್ಡಾಯ ಮಾಸ್ಕ್ ಧರಿಸಿ ಅಂತರ ಕಾಯ್ದಕೊಳ್ಳಿ ,ಅನಾವಶ್ಯಕವಾಗಿ ಹೊರಗಡೆ ಬರಬಾರದು,ಮನೆಯಲ್ಲಿ ಇರಬೇಕು,ಕಡ್ಡಾಯವಾಗಿ N95 ಮಾಸ್ಕ್ ಬಳಸಿ ಎಂದರು,


ಕೊನೆಯಲ್ಲಿ ಸಭೆ ಕುರಿತು ಅಲ್ಲಿದ್ದ ಜನತೆಯನ್ನು ಉದ್ದೇಶಿಸಿ ಶ್ರೀ ಎಸ್ ಜಿ,ನಂಜಯ್ಯನಮಠ ಅವರು ಕೋವಿಡ್ ಕರಾಳತೆ ಬಗ್ಗೆ ಜನರಿಗೆ ಸಲಹೆ ಹಾಗೂ ಮುಂಜಾಗ್ರತೆ ಕುರಿತು ಸಲಹೆ ನೀಡಿದರು. ಗ್ರಾಮದಲ್ಲಿ ಎಂದು ತಾವು ಈ ಕರೋನ ಕುರಿತು ಯಾರನ್ನು ಆಲಸ್ಯ ಮಾಡಬೇಡಿ ಕರೋನ ಸೋಂಕು ಗಾಳಿಯಲ್ಲಿ ತೆಲುವ ವೈರಸ್,ಯಾರಿಂದ ಹೇಗೆ ಹರಡುತ್ತದೆ ಎಂದು ಗೊತ್ತಾಗುವುದಿಲ್ಲ ತಾವು ಮದುವೆ,ಕಾರ್ಯಕ್ರಮ ಎಂದು ಜನ ಸೇರಿಸುವ ಹರಸಾಹಸ ಬಿಟ್ಟುಬಿಡಿ ಇದರಿಂದ ಅಪಾಯ ತಪ್ಪಿದ್ದಲ್ಲ ,ಸರಳ ಮದುವೆ ಮಾಡಿ,ಆದಷ್ಟೂ ಮನೆಯಲ್ಲಿ ಈ ಸಂದರ್ಭದಲ್ಲಿ ಕೆವಲ ಕಡಿಮೆ ಖರ್ಚಿನಲ್ಲಿ ಮದುವೆ ಮಾಡಿ ಮುಗಿಸಿ ಮನೆಯಲ್ಲಿ ಇರಿ ಅವಶ್ಯಕತೆ ಮೀರಿ ಹೋರಗಡೆ ಬರಬೇಡಿ,ಕಡ್ಡಾಯ ಮಾಸ್ಕ್ ಹಾಕಿ.ಅಂತರ ಕಾಯ್ದುಕೊಂಡು ವ್ಯಾಪಾರ, ವ್ಯವಹಾರ,ಮಾಡಿ ಹೆಚ್ಚಿನ ಸುರಕ್ಷತೆಗೆ ಗಮನ ಕೋಡಿ ಎಂದರು.

ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವ ಹವ್ಯಾಸ ಮಾಡಿಕೊಳ್ಳಿ ಇದರಿಂದ ಸ್ವಲ್ಪ ಸೋಂಕು ತಡೆಗಟ್ಟಬಹುದು ಏನೆ ಸಣ್ಣ ಪುಟ್ಟ ನೆಗಡಿ,ಕೆಮ್ಮು,ಜ್ವರ,ಇದ್ದರೆ ತಕ್ಷಣ ಅದಕ್ಕೆ ವೈದ್ಯಕೀಯ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದರು,ಅಲ್ಲದೆ ಗ್ರಾಮದಲ್ಲಿ ಎಂತಹ ಪ್ರತಿಷ್ಟೀತ ವ್ಯಕ್ತಿ ಇದ್ದರೂ ಸಹ ೫ ಜನರಿಗೆ ಮಾತ್ರ ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ತಾವು ಇದನ ಅರಿತು ನಡೆಯಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಪ್ರಶಾಂತ ತುಂಬಗಿ ಅವರೊಂದಿಗೆ ಸುಧೀರ್ಘ ಮಾಹಿತಿಯನ್ನು ಪಡೆದು ಸ್ಥಳೀಯ ಪಂಚಾಯತಿ ಆಡಳಿತ ಮಂಡಳಿ ಕಮೀಟಿ ಈ ಬಗ್ಗೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಇದನ ತಡೆಗಟ್ಟುವ ಹಲವು ಬಗೆಗಳ ಕುರಿತು ಸಮಾಲೋಚನೆ ಮಾಡಿದರು.

ಈ ಸಭೆಯಲ್ಲಿ ಮಾನ್ಯ S,G ನಂಜ್ಯನಮಠ ಸೇರಿದಂತೆ ಗ್ರಾಂ,ಪ,ಅಧ್ಯಕ್ಷರಾದ ಶ್ರೀಮತಿ ಗ್ಯಾನವ್ವ,ದುರಗಪ್ಪ ಮಾದರ, ಹಾಗೂ ಶ್ರೀ ಆರ್,ಪಿ,ಕಲಬುರ್ಗಿ, ಶ್ರೀಮತಿ ಜ್ಯೋತಿ,ಜಗದೇಶ ಪೂಜಾರ, ಶ್ರೀ ರೈಮನಸಾಬ ದೊಡಮನಿ ಶ್ರೀ ಪಿಡ್ಡಪ್ಪ ಕುರಿ, ಶ್ರೀ ಮಹಾಂತಪ್ಪ ಅ, ಭದ್ರಣ್ಣನವರ ಶ್ರೀ ನಾಗೇಂದ್ರಸಾ ನೀರಂಜನ್, ಶ್ರೀ ಎಮ್,ಎ,ದಖನಿ, PDO, ಶ್ರೀ ಜಗದೇಶ ಪಾಟೀಲ್,ಶ್ರೀ ಕೃಷ್ಣಾ ರಾಮದುರ್ಗ, ಶ್ರೀ ಶಂಕ್ರಪ್ಪ ಜನಿವಾರದ, ಶ್ರೀ ದೇವರಾಜ ಕಮತಗಿ, ಶ್ರೀ ನಾಗೇಶ ಗಂಜಿಹಾಳ ಹಾಗೂ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತಿ ಇದ್ದರು ,

ವರದಿ: ಮುಸ್ತಫಾ ಮಾಸಾಪತಿ.

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.