
ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ೨೦೦೨ ರಲ್ಲಿ ಸ್ಥಾಪನೆಗೊಂಡ ಈ ” ಚಿನ್ಮಯ ಚೇತನ ಪ್ರಕಾಶನದ ವಿಶ್ವಸ್ಥ ಮಂಡಳಿ, ನೂತನ ಅಧ್ಯಕ್ಷರಾಗಿ ನಿವೃತ್ತ ಹಿರಿಯ ಆರೋಗ್ಯ ಮೇಲ್ವಿಚಾರಕರು ( ಕುಷ್ಟರೋಗಿ ವಿಭಾಗ) ಇವರನ್ನು ಈ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.


ಶ್ರೀ ಅಶೋಕ ಹನಮಂತಪ್ಪ ಬೆಲ್ಲದ ಇವರನ್ನು ಈ ಶೂಲೇಭಾವಿ ಗ್ರಾಮದ ಚಿನ್ಮಯ ಚೇತನ ಪ್ರಕಾಶನದ ವಿಶ್ವಸ್ಥ ಮಂಡಳಿ ನೂತನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಸದರಿ ಅಶೋಕ ಬೆಲ್ಲದ ಅವರು ಗ್ರಾಮದ ಸರಕಾರಿ ಪ್ರೌಢಶಾಲಾ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಸದರಿಯವರು ಇದೆ ತಿಂಗಳ ೩೦ ರಂದು ನಿವೃತ್ತಿ ಹೊಂದಲಿದ್ದಾರೆ. ಇನ್ನೂ ತಮ್ಮ ಬಿಡುವಿನ ಸಮಯದಲ್ಲಿ ಈ ಮಂಡಳಿಯಲ್ಲಿ ಸಕ್ರಿಯವಾಗಿ ಸೇವೆ ಮಾಡಬೇಕು ಈ ಮಂಡಳಿ ಬ್ಯಾನರ್ ನಲ್ಲಿ ಕಳೆದ ೨೦ ವರ್ಷಗಳಿಂದ ದಿ: ಮೌನೇಶ ಬಸಪ್ಪ ಗಾಡದ ಅವರು ಈ ಮಂಡಳಿಯನ್ನು ಸ್ಥಾಪಿಸಿದ್ದರು, ಹಲವು ಬಡ ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ, ಪ್ರಸಿದ್ದ ಕಾದಂಬರಿ,ವೀರ ನಾಯಕರ ಪುಸ್ತಕಗಳನ್ನು ಬಹುಮಾನವಾಗಿ ನೀಡಿ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ಚಿನ್ಮಯ ಚೇತನ ಪ್ರಕಾಶನದ ವಿಶ್ವಸ್ಥ ಮಂಡಳಿಯನ್ನು ಬೆಲ್ಲದ ಅವರು ಶಾಲಾ- ಕಾಲೇಜು ದಿನಗಳಲ್ಲಿ ಹಲವು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಹೀಗಾಗಿ ಅವರ ಅನುಭವ,ಮಾರ್ಗದರ್ಶನದಲ್ಲಿ ಈ ಮಂಡಳಿ ಇನ್ನೂ ಸಾವಿರಾರು ವಿಧ್ಯಾರ್ಥಿಗಳಿಗೆ ನೇರಳಾಗಲಿ ಎಂದು ಅಶೋಕ ಬೆಲ್ಲದ ಅವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ, ಎಂದು ಈ ಮಂಡಳಿ ಅಧ್ಯಕ್ಷ ಪಾಂಡುರಂಗ ಮಾಶ್ಯಾಳ ಅವರು ತಿಳಿಸಿದರು. ಇನ್ನೂ ಈ ಮಂಡಳಿ ಸದಸ್ಯರಾಗಿ ಶ್ರೀ ಮನೋಹರ ಮಹಾರುದ್ರಪ್ಪ ಕಮ್ಮಾರ, ಹಾಗೂ ಶ್ರೀ ಶೇಖರ ರಾಮಣ್ಣ ಧುತ್ತರಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಮಂಡಳಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.
