ಉತ್ತರ ಕರ್ನಾಟಕ ರಾಜ್ಯ ಹಾಗೂ ಕಬ್ಬು ಬೆಳೆಗಾರರ ಜಿಲ್ಲಾ ಅಧ್ಯಕ್ಷ ಆನಂದ ಜಕಾತಿ ಅವರ ರೈತರ ಪರವಾದ ದೊಡ್ಡ ಹೋರಾಟಕ್ಕೆ ಸುಳಿವು ಕೊಟ್ಟರು
ಉತ್ತರ ಕರ್ನಾಟಕದಲ್ಲಿ ಅಸಂಖ್ಯಾತ ರೈತರ ಸ್ಥಿತಿ ಚಿಂತಾ ಜನಕವಾಗಿದೆ,

ಅದರಲ್ಲೂ ಉತ್ತರ ಕರ್ನಾಟಕ ಬಾಗಲಕೋಟೆ ಜಿಲ್ಲೆಯ ರೈತರ ಸ್ಥಿತಿ ಇದುವರೆಗೂ ಸರಕಾರ ಸೂಕ್ತ ರಕ್ಷಣೆ ಹಾಗೂ ಅವರಿಗೆ ಸೂರು ಕಲ್ಪಿಸುವಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ,ಇದನ್ನು ನಾನೊಬ್ಬ ಜಿಲ್ಲಾ ಈ ರೈತ ಸಂಘದ ಅಧ್ಯಕ್ಷನಾಗಿ ಖಂಡಿಸುತ್ತೇನೆ, ಇದರ ಮಧ್ಯ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಕೂಡ ರೈತರಿಗೆ ಮಾನಸಿಕ ಕಿರಿಕುಳ ನೀಡುತ್ತಿದ್ದಾರೆ.

ಇತ್ತಿಚ್ಚಿಗೆ ಮೊನ್ನೆ ಬದಾಮಿ ತಾಲೂಕಿನ ಕೆರಕಲಮಟ್ಟಿಯ ಕೇದಾರನಾಥ ಸಕ್ಕರೆ ಮಾಲಿಕತ್ವ ಹೊಂದಿರುವ ಮಾನ್ಯ ನೀರಾನಿ ಅವರು ಹಿಂದಿನ ಆಳಿತ ಮಂಡಳಿ ಕಳೇದ ೦೯ ವರ್ಷಗಳಿಂದ ರೈತರ ಕಬ್ಬಿನ ಬಿಲ್ಲು ಈ ವರೆಗೂ ಪಾವತಿ ಮಾಡಿಲ್ಲ ಈಗ ಇದರ ಮಾಲಿಕತ್ವ ಹೊಂದಿರುವ ಮಾನ್ಯ ನೀರಾನಿ ಅವರು ಸಕ್ಕರೆ ಕಾರ್ಖಾನೆ ಖರೀದಿ ಮಾಡಿದ್ದು ಒಂದು ಕಡೆ ಖುಷಿ ಆದರೆ ಇನ್ನಾದರೂ ರೈತರಿಗೆ ಅನ್ಯಾಯ ಆಗದಂತೆ ಹಿಂದಿನ ಬಾಕಿ ಸಂಪೂರ್ಣವಾಗಿ ಎಲ್ಲಾ ರೈತರಿಗೆ ಬಾಕಿ ಕೊಡಬೇಕು. ಅಲ್ಲಿವರೆಗೂ ನಾವು ಈ ಕಾರ್ಖಾನೆಯನ್ನು ಪ್ರಾರಂಭ ಮಾಡಲು ಬಿಡುವುದಿಲ್ಲ, ಎಂದು ಆನಂದ ಜಕಾತಿ ಅವರು ತಿಳಿಸಿದರು.
ಹಾಗೆ ೧೦ ದಿನ ಅವರಿಗೆ ಕೊಟ್ಟ ಗಡುವು ಮುಗಿದಿದೆ ಎಫ್ರೀಲ್ ೨ನೇ ತಾರಿಕು ಸುಮಾರು ೨೦೦೦,ಸಾವಿರ ಜನ ಕೇದಾರನಾಥ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಲು ನಮ್ಮ ರಾಜ್ಯ ಸಂಘದ ರೈತ ಮುಖಂಡರೊಂದಿಗೆ ಇದೇ ಮಾಚ್೯ ೨೫ ರಂದು ರಾಜ್ಯ ಸಭೆ ಕರೆಯಲಾಗಿದೆ.

ಅಷ್ಟರಲ್ಲಿ ಇವರು ಒಂದು ನಿರ್ಣಯ ಕೈಗೊಳ್ಳುವ ಪ್ರಯತ್ನವನ್ನು ಮಾನ್ಯ ನೀರಾನಿ ಅವರು ಇತ್ತ ಆಧ್ಯ ಗಮನ ಹರಿಸಬೇಕು ಎಂದು ಜಿಲ್ಲಾ ಅಧ್ಯಕ್ಷ ಆನಂದ ಜಕಾತಿ ಅವರು ಮಾಧ್ಯಮದೊಂದಿವೆ ತಮ್ಮ ಹೋರಾಟದ ಕುರಿತು ಹಂಚಿಕೊಂಡರು. ಇಲ್ಲವಾದಲ್ಲಿ ನಮ್ಮ ಹೋರಾಟ ಇದು ಅಂತ್ಯ ಅಲ್ಲ ಆರಂಭದ ಯುದ್ದ ಎಂದರು.