ಮಂಗಳೂರು: ವಾಟ್ಸ್‌ಆ್ಯಪ್‌ನಲ್ಲಿ ಶುಕ್ರವಾರ ಪಿಂಕ್ ವಾಟ್ಸ್‌ಆ್ಯಪ್ ನ್ಯೂ ವರ್ಶನ್ ಹೆಸರಿನಲ್ಲಿ ಹರಿದಾಡಿದ ಲಿಂಕ್ ಒತ್ತಿದ ಅನೇಕ ಮಂದಿ ಬೇಸ್ತುಬಿದ್ದಿದ್ದಾರೆ. ಪಿಂಕ್ ಬಣ್ಣದ ಸಿಂಬಲ್ ಜತೆಗೆ ಪಿಂಕ್ ವಾಟ್ಸ್‌ಆ್ಯಪ್, ನ್ಯೂ ವರ್ಶನ್ ಹೆಸರಿನಲ್ಲಿ ಲಿಂಕ್ ಹರಿದಾಡಿದೆ.
ಅದನ್ನು ಒತ್ತಿದ ತಕ್ಷಣ ಲಿಂಕ್ ತನ್ನಿಂತಾನೇ ಅವರು ಸದಸ್ಯರಾಗಿರುವ ಗ್ರೂಪ್‌ಗಳಿಗೆ, ವೈಯುಕ್ತಿವಾಗಿ ಫಾರ್ವಡ್೯ ಆಗಿದೆ. ಈ ಮೂಲಕ ಹೊಸ ವರ್ಶನ್ ಬಂದಿರಬೇಕೆಂದು ಒತ್ತಿದವರು ಪೇಚಿಗೆ ಸಿಲುಕಿದರು. ಇದೊಂದು ವೈರಸ್ ಲಿಂಕ್ ಆಗಿದ್ದು, ಒಮ್ಮೆ ಒತ್ತಿದರೆ ಸಾವಿರಾರು ಮಂದಿಗೆ ಫಾರ್ವಡ್೯ ಆಗುತ್ತದೆ.

ಪಿಂಕ್ ವಾಟ್ಸ್‌ಆ್ಯಪ್ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಈ ರೀತಿಯ ಲಿಂಕನ್ನು ಸೃಷ್ಟಿಸಿ ಹರಿಯಬಿಟ್ಟಿದ್ದಾರೆ. ಗ್ರೂಪ್‌ಗಳಲ್ಲಿ ಈ ಲಿಂಕ್ ಬಂದ ತಕ್ಷಣ ಕೆಲವರು ಎಚ್ಚರಿಸಿದ ಕಾರಣ ಹಲವರು ಅದನ್ನು ಮುಟ್ಟಲು ಹೋಗಿಲ್ಲ.