Breaking News

ಸಿಂದಗಿಯ ಯುವಪ್ರತಿಭೆಗಳಿಂದ ” ಪ್ರಶ್ನಾರ್ಥಕ, ಕನ್ನಡ ಕಿರು ಚಲನಚಿತ್ರದ ಪೊಸ್ಟರ್ ಬಿಡುಗಡೆ

ಸಿಂದಗಿ: ಉತ್ತರ ಕರ್ನಾಟಕ ಸಿಂದಗಿಯ ಯುವ ಪ್ರತಿಭೆಗಳು ಕಿರು ಚಿತ್ರ “ಪ್ರಶ್ನಾರ್ಥಕ”ದಲ್ಲಿ ನಟಿಸಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಉತ್ತರ ಕನಾಟಕದ ಯುವಕರ ಪ್ರತಿಭೆ ಕಿರುತೆರೆ, ಹಿರಿತೆರೆಗಳ ಚಿತ್ರಗಳ ಮೂಲಕ ಹೊರಹೊಮ್ಮಲಿ, ಯುವ ನಟರಿಗೆ ಹೆಚ್ಚಿನ ಅವಕಾಶಗಳು ಸಿಕ್ಕು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ನೂತನ ಶಾಸಕರಾದ ರಮೇಶ ಭೂಸನೂರ ಹೇಳಿದರು.
ಅವರು ಗುರುವಾರ ಆರ್.ಕೆ.ಸ್ಟುಡಿಯೋ ಹಾಗೂ ಪ್ರೊಡಕ್ಷನ್ ಅವರ “ಪ್ರಶ್ನಾರ್ಥಕ” ಕಿರುಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡುತ್ತ, ನಾವು ಗಳಿಸಿದ ಆಸ್ತಿ-ಅಂತಸ್ತು, ಬಂಗಾರ, ಒಡವೆಗಳನ್ನು ಯಾರಾದರೂ ಕಸಿದುಕೊಳ್ಳಬಹುದು ಆದರೆ ಕಲೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಮನುಷ್ಯ ತಾನು ಕಂಡಿದ್ದನ್ನು ಭಾವನೆಗಳ ಮೂಲಕ ,ಕಲ್ಪನೆಗಳಿಂದ ಹುದುಗಿಕೊಂಡಿರುವ ಕಲಾ ಪ್ರತಿಭೆಯನ್ನು ಹೊರಗೆ ತರುವುದೇ ನಿಜವಾದ ಕಲೆ. ಆ ಸಾಧನೆಗೆ ಮುಂದಾಗಿರುವ ಇಲ್ಲಿನ ನಿರ್ಮಾಪಕರು, ನಿರ್ದೇಶಕರು ತಮ್ಮ ಸ್ವಂತ ಹಣದಿಂದ ವಿಶೇಷವಾಗಿ ಉತ್ತರ ಕರ್ನಾಟಕದ ನಟರನ್ನು ಬೆಳಕಿಗೆ ತರಲು ಕಷ್ಟಪಟ್ಟು ಚಿತ್ರೀಕರಣ ಮಾಡಿ ಚಿತ್ರವನ್ನು ಹೊರತಂದಿದ್ದಾರೆ.

ಅವರ ಈ ಚಿತ್ರವನ್ನು ಎಲ್ಲರೂ ನೋಡಿ ಪ್ರೋತ್ಸಾಹ ನೀಡಿ,ಮುಂದಿನ ದಿನಗಳಲ್ಲಿ ಅವರು ಹಿರಿತೆರೆ ಚಿತ್ರಗಳ ನಿರ್ಮಾಣಕ್ಕೆ ಸ್ಫೂರ್ತಿಯಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಕಿರುಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರನ್ನೂ ಶಾಸಕರು ಶಾಲುಹೊದಿಸಿ ಸನ್ಮಾನಿಸಿ ಗೌರವಿಸಿ ಚಿತ್ರತಂಡಕ್ಕೆ ಶುಭಕೋರಿದರು.
ಈ ಸಂದರ್ಭದಲ್ಲಿ ಚಿತ್ರತಂಡದ ಸಿಂದಗಿಯ ಯುವಪ್ರತಿಭಾವಂತ ನಟರಾದ ವಿಶ್ವಪ್ರಕಾಶ ಟಿ ಮಲಗೊಂಡ, ಯಂಗ್ ಟೈಗರ್ ರವಿ ಜಾಲವಾದಿ, ನಿರ್ದೇಶಕ ಸಿದ್ದು ಮಾಡಗಿ, ಆರ್.ಕೆ.ಪ್ರೊಡಕ್ಷನ್ ಮಾಲಿಕರು ಹಾಗೂ ಛಾಯಾಗ್ರಾಹಕ ರವಿ ಕುಂಟೋಜಿ, ಸಹನಿರ್ದೇಶಕ ಅಮರೇಶ, ಹಾಸ್ಯ ಕಲಾವಿದ ವೀರೇಶ, ನೀನಾಸಂ ಯಶವಂತ್ ಕುಚಬಾಳ, ನಾಗರಾಜ ಸಂಗಮ್, ಆಸಿಫ್ ಗುಂದಗಿ, ಮನೋಜ ಡೋಣೂರ, ಸಾಹೇಬಗೌಡ ಪಾಸೋಡಿ, ನಾಗರಾಜ ಸಂಗಮ, ಸಿದ್ದು ತಳ್ಳೊಳ್ಳಿ, ಶಿವು ಚೌರ, ಸಿಂದಗಿ ಬಿಜೆಪಿ ಮಂಡಳ ಅಧ್ಯಕ್ಷ ಈರಣ್ಣ ರಾವೂರ, ರವಿ ನಾಯ್ಕೋಡಿ, ಹೊನ್ನಪ್ಪಗೌಡ ಬಿರಾದಾರ, ಸೊಮಜಾಳ,ಸುಕನ್ಯಾ ಮೊದಲಾದವರು ಪಾಲ್ಗೊಂಡಿದ್ದರು.
ತಾಂತ್ರಿಕ ವರ್ಗದಲ್ಲಿ ಮಹಾಂತೇಶ ತಳವಾರ ಛಾಯಾಗ್ರಹಣ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಪ್ರಚಾರಕಲೆ ವಿಶ್ವಪ್ರಕಾಶ ಮಲಗೊಂಡ ಅವರದಿದ್ದು, ಸಿದ್ದು ಮಾಡಗಿ ಅವರ ನಿರ್ದೇಶನ ಚಿತ್ರಕ್ಕಿದೆ. ಕಾಚಾಪೂರ ಗೆಳೆಯರ ಬಳಗದವರ ಸಹಕಾರ ಚಿತ್ರಕ್ಕಿದೆ ಎಂದು ಚಿತ್ರತಂಡ ಹೇಳಿದೆ.
*
ವರದಿ:ಡಾ.ಪ್ರಭು ಗಂಜಿಹಾಳ-9448775346

About vijay_shankar

Check Also

ಎ, ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡ ಚಲನಚಿತ್ರ ಚಿತ್ರೀಕರಣ ಮುಕ್ತಾಯ

Veryಬೆಂಗಳೂರ : ಸ್ನೇಹಾಲಯಂ ಕ್ರಿಯೇಷನ್ಸ್ ಸಮರ್ಪಿಸಿ ಎ.ಎ.ನ್.ಆರ್ ಪಿಕ್ಚರ್ಸ್ ಬ್ಯಾನರ್ಅಡಿಯಲ್ಲಿ ಎ. ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡಚಲನಚಿತ್ರದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.