
ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ ಕರ್ನಾಟಕ ಪತ್ರಕರ್ತರ ಸಂಘ ಹಾಗೂ ಬಿ.ಬಿ ನ್ಯೂಸ್ ಡಿಜಿಟಲ್ ಚಾನಲ್ ಸಹಯೋಗದಲ್ಲಿ ಪ್ರಶಸ್ತಿ ನಡೆಗೆ ಸಾಧಕರ ಕಡೆಗೆ ಅಭಿಯಾನದಲ್ಲಿ ಈ ಸಮಿತಿಯು 12 ಜನ ಆಡಳಿತ ಮಂಡಳಿ ಸೇವಕರನ್ನು ಗುರುತಿಸಿ ಇವರಿಗೆ “ಧಾರ್ಮಿಕ ಸೇವಾ ರತ್ನ” ಪ್ರಶಸ್ತಿ ಪತ್ರ ನೀಡಿ ಗೌರವ ಪೂರ್ವಕ ಸನ್ಮಾನವನ್ನು ಮಾಜಿ ಶಾಸಕ ರಾಜಶೇಖರ ಶೀಲವಂತ ಹಾಗೂ ಜಿಲ್ಲಾ ಅಧ್ಯಕ್ಷ ಡಿ.ಬಿ ವಿಜಯಶಂಕರ್ ಪ್ರಶಸ್ತಿ ನೀಡಿ ಗೌರವಿಸಿಸದರು.
ಹಲವು ವರ್ಷಗಳಿಂದ ಈ ದೇವಸ್ಥಾನದಲ್ಲಿ ನಿರಂತರ ಅನ್ನ ಪ್ರಸಾದ ಸೇವಾ ಕಾರ್ಯವನ್ನು ಯಾವುದೇ ಫಲ ಪೇಕ್ಷೆಗಳಿಲ್ಲದೆ ಸೇವೆ ಮಾಡುತ್ತಾ ಬಂದಿರುವುದು ಇವರ ಸೇವಾ ಕಾರ್ಯ ಶ್ಲಾಘನೀಯ. ಇಂದಿನ ಸಮಾಜದಲ್ಲಿ ದಾಣಿಗಳಿಗೆ ಕಡಿಮೆ ಇಲ್ಲ ಕೊಡುವ ಕೈಗಳು ನೂರಾರು ಆದರೆ ಅದನ್ನು ಜವಾಬ್ದಾರಿಯಿಂದ ನಿಭಾಯಿಸುವ ಜನರ ಕೊರತೆ ಇಂದು ಎದ್ದು ಕಾಣುತ್ತಿದೆ.
. ಶ್ರೀ ಡಿ,ಬಿ,ವಿಜಯಶಂಕರ್ , ಜಿಲ್ಲಾ ಅಧ್ಯಕ್ಷರು ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ
ಎಲ್ಲಾ ಸಮಾಜದಲ್ಲಿ ಕೆಲಸ ಮಾಡುವವರು ಇಲ್ಲಾ, ಮಾಡಿದವರಿಗೆ ಅಪಹಾಸ್ಯ ಮಾಡುವವರೆ ಹೆಚ್ಚು ಅಂತಹ ಮಾತುಗಳಿಗೆ ಕಿವಿ ಕೊಡದೆ. ಧಾರ್ಮಿಕ ಸೇವೆ ಮಾಡಿ ಆ ಮಾರುತಿಯ ಕೃಪೆಗೆ ಪಾತ್ರರಾಗಿ ಎಂದು ಮಾಜಿ ಶಾಸಕ ರಾಜಶೇಖರ್ ಶೀಲವಂತ ಅವರು ಈ ಪ್ರಶಸ್ತಿ ವಿತರಣೆ ಮಾಡಿ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಆಸಂಗಿಯಲ್ಲಿ ಅವರು ಯುಗಾದಿ ಹಬ್ಬದ ಸಂಭ್ರಮವನ್ನು ಆಚರಿಸಿ ಬೇವು ಕುಡಿಯುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಿ,ಬಿ, ವಿಜಯಶಂಕರ್ ಅವರು ಸೂರ್ಯ ಚಂದ್ರರು ಇರೊವರೆಗೂ ಈ ಗ್ರಾಮದ ಹಿರಿಯರು ಹಾಕಿ ಕೊಟ್ಟ ಈ ಧಾರ್ಮಿಕ ಪ್ರಸಾದ ವಿತರಣೆಯ ಪದ್ದತಿ ಯಾವತ್ತೂ ಹೀಗೆ ಮುಂದುವರೆಯಲಿ ನಿಮ್ಮ ಈ ಸೇವೆಯಿಂದ ಈ ಸನ್ನಿಧಿಗೆ ಬರುವ ನೂರಾರು ಭಕ್ತರು ಪ್ರಸಾದ ಸ್ವೀಕಾರ ಮಾಡಿ ಅವರು ಸಂತೃಪ್ತರಾಗಿ ಹರಸಿ ಹೋದರೆ ನಿಮ್ಮ ಪೂರ್ವ ಜನ್ಮದ ಎಲ್ಲಾ ಪಾಪ,ಕರ್ಮಗಳು ನಾಶವಾಗಿ ಆ ಹನುಮನ ಕೃಪೆಗೆ ಪಾತ್ರರಾಗುತ್ತಿರಿ

ಜನರ ಚುಚ್ಚು ಮಾತುಗಳಿಗೆ ಕಿವಿ ಕೊಡದೆ ನೀವು ಮಾಡುತ್ತಿರುವ ಈ ಸೇವೆಯನ್ನು ಮೆಚ್ಚಿ ಇಂದು ನಿಮಗೆ ಈ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ನಿಮ್ಮನ್ನು ಹುಡುಕಿಕೊಂಡು ಬಂದಿದೆ, ಇದೇ ನಿಮ್ಮ ನಿಜವಾದ ಸೇವೆ ಎಂದು ಮಾತನಾಡಿದರು.
ಯುಗಾದಿ ಸಂಭ್ರಮದ ನಿಮಿತ್ತವಾಗಿ ಬೇವು ಕುಡಿಯುವ ಮೂಲಕ ಸನ್ಮಾನ್ಯ ಶ್ರೀ ರಾಜಶೇಖರ ಶೀಲವಂತ ಅವರು ಉದ್ಘಾಟನೆ ಮಾಡಿದರು. ಇವರೊಂದಿಗೆ ಎಲ್ಲಾ ಅಥಿತಿ ಮೊಹೋದರರು ಸಾಮೂಹಿಕವಾಗಿ ಸಾತ್ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ದೇವಸ್ಥಾನದ ಅರ್ಚಕರಾದ ಶ್ರೀ ಬಾಲಪ್ಪ ಪೂಜಾರ. ವಹಿಸಿಸದ್ದರು. ಅಧ್ಯಕ್ಷತೆಯನ್ನು ಈ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ದಾನಯ್ಯಸ್ವಾಮಿ ಹಿರೇಮಠ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಶ್ರೀ ಡಿ.ಬಿ ವಿಜಯಶಂಕರ್. ಶ್ರೀ ಪುಂಡಲಿಕ ಮುರಾಳ ಸಂಪಾದಕರು. ಶ್ರೀ ಭೀಮಪ್ಪ ಹಕ್ಕಲ್, ಜಿಲ್ಲಾ ಸದಸ್ಯರು, ಕೆಪಿಎಸ್, ಶರಣಪ್ಪ ಸಜ್ಜನ, ಗ್ರಾಂ.ಪ ಸದಸ್ಯರು, ಸುರೇಶ.ಲಮಾಣಿ, ಸಂಪಾದಕರು, ಬಾಲಪ್ಪ ಬಗಲಿ, ಶಂಕರಗೌಡ ಗೌಡರ, ಹನಮಂತ.ಡೋಳ್ಳಿನ, ಯವ್ವನೆಪ್ಪ ತಳವಾರ, ರಾಮಪ್ಪ ಡೊಳ್ಳಿನ, ರಮೇಶ.ಚವ್ಹಾಣ, ವಿರೇಶ ಭಜಂತ್ರಿ ಅನೇಕ ಜನ ಹಿರಿಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವೇದಿಕೆ ಪರವಾಗಿ ಗ್ರಾಮದ ಹಿರಿಯರಾದ ಅರ್ಜುನಪ್ಪ ಮುತ್ತಲದಿನ್ನಿ ಅವರು ಶ್ರೀ ರಾಜಶೇಖರ ಶೀಲವಂತ ಅವರಿಗೆ ಗೌರವ ಸನ್ಮಾನ ಮಾಡಿದರು.

ವಿತರಣೆ ಮಾಡಿದ ಪ್ರಶಸ್ತಿ ಪತ್ರ.