Breaking News

ಕೊರೊನಾ ಲಾಕ್ಡೌನ್ ನಂತರ ಸಂಸತ್ತಿನ ಮೊದಲ ಮುಂಗಾರು ಅಧಿವೇಶನಕ್ಕೆ ಶುರುವಾಗಿದೆ ಸಿದ್ಧತೆ

ದೆಹಲಿ: ಡೆಡ್ಲಿ ಕೊರೊನಾ ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವ ನಡುವೆಯೇ ಸಂಸತ್ ಮುಂಗಾರು ಅಧಿವೇಶನಕ್ಕೂ ಸಿದ್ಧತೆ ನಡೆದಿದೆ. ಹೀಗಾಗಿ ಸಂಸತ್ ಭವನದಲ್ಲಿ ಅಧಿವೇಶನಕ್ಕಾಗಿ ಸಿದ್ಧತೆ ನಡೆಸಲಾಗಿದ್ದು, ಕೋವಿಡ್-19 ಪ್ರೊಟೋಕಾಲ್ ಅನುಸಾರವಾಗಿ ಸಂಸತ್ ಸದಸ್ಯರಿಗೆ ಸಕಲ ವ್ಯವಸ್ಥೆಗಳನ್ನೂ ಮಾಡಲಾಗಿದೆ.

ದೇಶದ ಮೂಲೆ ಮೂಲೆಯಲ್ಲೂ ಕೊರೊನಾ ಜಪ ನಡೆಯುತ್ತಿದೆ. ಮಹಾಮಾರಿಯ ಅಟ್ಟಹಾಸ ಸದ್ಯ ಎಲ್ಲರನ್ನ ಬೆಚ್ಚಿಬೀಳಿಸಿದೆ. ಹೀಗೆ ಕೊರೊನಾ ಸೋಂಕಿನ ಹಿನ್ನೆಲೆ ಮಾರ್ಚ್‌ನಲ್ಲಿ ಘೋಷಿಸಲಾಗಿದ್ದ ಲಾಕ್‌ಡೌನ್ ನಂತ್ರ ಸಂಸತ್ತಿನ ಮೊದಲ ಮುಂಗಾರು ಅಧಿವೇಶನ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲು ಸಿದ್ಧವಾಗಿದೆ.

ಈ ಬಾರಿಯ ಸಂಸತ್ ಅಧಿವೇಶನ ಸಖತ್ ಡಿಫರೆಂಟ್! 
ಅಂದಹಾಗೆ ಈ ಬಾರಿಯ ಲೋಕಸಭಾ ಅಧಿವೇಶನ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಏಕೆಂದರೆ ಇದು ಲಾಕ್​ಡೌನ್ ನಂತರ ನಡೆಯುತ್ತಿರುವ ಮೊದಲ ಅಧಿವೇಶನ. ಹಾಗೇ ಹಲವು ಮೊದಲುಗಳಿಗೆ ಈ ಬಾರಿಯ ಸೆಷನ್ ಸಾಕ್ಷಿಯಾಗಲಿದೆ. ಹಾಗಾದ್ರೆ ಅಧಿವೇಶನಕ್ಕಾಗಿ ಕೈಗೊಂಡಿರುವ ಸಿದ್ಧತೆಗಳನ್ನ ಡೀಟೇಲ್ ಆಗಿ ನೋಡೋದಾದ್ರೆ.

ಕಲಾಪಕ್ಕೆ ಕೌಂಟ್​ಡೌನ್? 
ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳಲು ಕೊಠಡಿಗೆ 4 ದೊಡ್ಡ ಪ್ರದರ್ಶನ ಪರದೆ ಅಳವಡಿಸಲಾಗುವುದು. ಹಾಗೇ ವೈರಸ್ ಕೊಲ್ಲಲು ಎಸಿ ಘಟಕದಲ್ಲಿ ಅಲ್ಟ್ರಾವಯಲೆಟ್ ರೇಡಿಯೇಶನ್ ವ್ಯವಸ್ಥೆ ಅಳವಡಿಸುವ ಪ್ರಸ್ತಾಪವಿದೆ. ಕೇಂದ್ರಸರ್ಕಾರ ಅಧಿವೇಶನಕ್ಕೆ ಡೇಟ್ ಫಿಕ್ಸ್ ಮಾಡುತ್ತಿದ್ದಂತೆಯೇ ಸಂಸತ್ ಕಟ್ಟಡವೂ ಸಿದ್ಧವೆಂದು ಹೇಳಲಾಗುತ್ತಿದೆ. ಪ್ರತಿಯೊಂದು ಪಕ್ಷದ ಬಲಾಬಲದ ಆಧಾರದಲ್ಲಿ ಅಧಿವೇಶನದಲ್ಲಿ ಆಸನಗಳ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 1 ಭಾಗ ಆಡಳಿತ ಪಕ್ಷಕ್ಕೆ ಇದ್ದರೆ, ಮನ್ನೊಂದು ಭಾಗ ಇತರರಿಗೆ ಎಂದು ಮೀಸಲಿಡಲು ತೀರ್ಮಾನಿಸಲಾಗಿದೆ. ಪ್ರತಿದಿನ ಸದನದಲ್ಲಿ ನಾಲ್ಕು ಗಂಟೆಗಳ ಕಾಲ ಕಲಾಪ ನಡೆಯಲಿದೆ ಅಂತಾ ಹೇಳಲಾಗಿದ್ದು, ಕುತೂಹಲ ಕೆರಳಿಸಿದೆ.

ಒಟ್ನಲ್ಲಿ ಕೊರೊನಾ ಸಂಕಷ್ಟ ಕಾಲದಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನ ಭಾರಿ ಕುತೂಹಲ ಕೆರಳಿಸಿದ್ದು, ಅಧಿವೇಶನಕ್ಕೆ ಸಕಲ ಸಿದ್ಧತೆಗಳು ರೂಪುಗೊಂಡಿವೆ. ಆದರೆ ಕೇಂದ್ರ ಸರ್ಕಾರ ಅಧಿವೇಶನಕ್ಕೆ ಡೇಟ್ ಯಾವಾಗ ಫಿಕ್ಸ್ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

About vijay_shankar

Check Also

AICC ಕಾರ್ಯದರ್ಶಿಯಾಗಿ ಡಾ: ಆರತಿ ಕೃಷ್ಣ ಆಯ್ಕೆ

ನವದೆಹಲಿ: ಅನಿವಾಸಿ ಭಾರತೀಯ ನಿಕಟಪೂರ್ವ ಕರ್ನಾಟಕ ಸರ್ಕಾರದ (ಎನ್ಆರ್ಐ ಫೋರಂ) ಉಪಾಧ್ಯಕ್ಷೆಯದ ಡಾಕ್ಟರ್ ಆರತಿಕೃಷ್ಣ ರವರನ್ನು ಅಖಿಲ ಭಾರತ ರಾಷ್ಟ್ರೀಯ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.