Breaking News

ರಾಜ್ ಕುಂದ್ರಾ ಕಾಮದಾಹಕ್ಕೆ ಹೆದರಿ ಟಾಯ್ಲೆಟ್ ನಲ್ಲಿ ಅಡಗಿ ಕುಳಿತಿದ್ದೆ-ನಟಿ ಶೆರ್ಲಿನ್ ಚೋಪ್ರಾ ಹೇಳಿದ್ದೆನು?

ನ್ಯೂಸ್‌ ಬ್ಯೂರೋ.ಬೆಂಗಳೂರು

ಮುಂಬೈ: ಅಶ್ಲೀಲ ಚಿತ್ರ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಮತ್ತೋರ್ವ ನಟಿ ಗಂಭೀರ ಆರೋಪ ಮಾಡಿದ್ದು, ರಾಜ್ ಕುಂದ್ರಾ ತಮ್ಮ ಮೇಲೂ ಲೈಂಗಿಕ ಹಲ್ಲೆ ಮಾಡಿದ್ದರು ಎಂದು ಕಾಮಸೂತ್ರ 3ಡಿ ಸಿನಿಮಾ ಖ್ಯಾತಿಯ ನಟಿ ಶೆರ್ಲಿನ್ ಚೋಪ್ರಾ ಹೇಳಿದ್ದಾರೆ.

ಮೂಲಗಳ ಪ್ರಕಾರ ಕಳೆದ ಏಪ್ರಿಲ್ನಲ್ಲಿಯೇ ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ಚೋಪ್ರಾ ದೂರು ನೀಡಿದ್ದರು. ಆ ದೂರಿನಲ್ಲಿ ರಾಜ್ ಕುಂದ್ರಾ ಬಗ್ಗೆ ಹಲವು ಆರೋಪಗಳನ್ನು ಮಾಡಲಾಗಿದ್ದು, ಪ್ರಮುಖವಾಗಿ ತಮ್ಮ ಮೇಲೆ ರಾಜ್ ಕುಂದ್ರಾ ಲೈಂಗಿಕ ಹಲ್ಲೆ ಮಾಡಿದ್ದರು ಎಂದು ಆರೋಪಿಸಿದ್ದಾರೆ.

‘2019ರ ಆರಂಭದಲ್ಲಿಯೇ ಒಂದು ಆ್ಯಪ್ ಬ್ಯುಸಿನೆಸ್ಗಾಗಿ ರಾಜ್ ಕುಂದ್ರಾ ಅವರು ನನ್ನನ್ನು ಕರೆದಿದ್ದರು. ಮೀಟಿಂಗ್ ಮುಗಿದ ಬಳಿಕ ಅವರು ನನ್ನ ಜೊತೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದರು. ಇದರಿಂದ ನಮ್ಮ ನಡುವೆ ಜಗಳ ಶುರುವಾಯಿತು. ನಾನು ಬೇಡ ಎಂದು ವಿರೋಧಿಸಿದರೂ ಕೂಡ ರಾಜ್ ಕುಂದ್ರಾ ಬಲವಂತವಾಗಿ ಕಿಸ್ ಮಾಡಲು ಬಂದರು. ನನಗೆ ಭಯವಾಯಿತು. ಇದನ್ನೆಲ್ಲ ನಿಲ್ಲಿಸುವಂತೆ ಕೇಳಿಕೊಂಡೆ. ನಂತರ ಅವರನ್ನು ತಳ್ಳಿ ಓಡಿ ಹೋದೆ. ಶೌಚಾಲಯಕ್ಕೆ ತೆರಳಿ ಅಡಗಿಕೊಂಡೆ ಎಂದು ದೂರಿನಲ್ಲಿ ಶೆರ್ಲಿನ್ ಚೋಪ್ರಾ ಹೇಳಿದ್ದಾರೆ ಎನ್ನಲಾಗಿದೆ.

ಸಂಪುಟ ಸೇರಲು ಜಾರಕಿಹೊಳಿ ಸಹೋದರರ ಪ್ಲಾನ್ ಬಿ
ಇದೇ ವೇಳೆ ಶಿಲ್ಪಾ ಶೆಟ್ಟಿ ಜೊತೆ ನನ್ನ ಸಂಬಂಧ ಸರಿಯಿಲ್ಲ. ಹಾಗಾಗಿ ನಾನು ಸದಾ ಒತ್ತಡದಲ್ಲಿ ಇರುತ್ತೇನೆ ಎಂದು ಶರ್ಲಿನ್ ಬಳಿ ರಾಜ್ ಕುಂದ್ರಾ ಹೇಳಿಕೊಂಡಿದ್ದರು ಎಂಬ ಸುದ್ದಿ ಈಗ ಬಹಿರಂಗ ಆಗಿದೆ.

ಇನ್ನು ಇದೇ ಪ್ರಕರಣದಲ್ಲಿ ರಾಜ್ ಕುಂದ್ರಾ ಜೊತೆ ಸಂಪರ್ಕ ಹೊಂದಿದ್ದ ಕಾರಣಕ್ಕಾಗಿ ಶೆರ್ಲಿನ್ ಚೋಪ್ರಾ ಅವರಿಗೂ ಬಂಧನದ ಭಯ ಕಾಡುತ್ತಿದೆ. ಹಾಗಾಗಿ ಅವರು ನಿರೀಕ್ಷಣಾ ಜಾಮೀನು ಅರ್ಜಿ ಹಾಕಿದ್ದರು. ಆದರೆ,ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂಬೈ ಸೆಷನ್ ಕೋರ್ಟ್ ವಜಾಗೊಳಿಸಿದೆ. ರಾಜ್ ಕುಂದ್ರಾ ಅವರ ಬಗ್ಗೆ ಮೊದಲು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು ತಾವೇ ಎಂದು ಶೆರ್ಲಿನ್ ಚೋಪ್ರಾ ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ಆಯಾಮಗಳಿಂದ ತನಿಖೆ ಮುಂದುವರಿದಿದ್ದು, ಅನೇಕ ನಟಿಯರ ಹೆಸರುಗಳು ಹೊರಬರುತ್ತಿವೆ. ಶಿಲ್ಪಾ ಶೆಟ್ಟಿಗೆ ಪೊಲೀಸರು ಇನ್ನೂ ಕ್ಲೀನ್ ಚಿಟ್ ಕೊಟ್ಟಿಲ್ಲ ಎನ್ನಲಾಗಿದೆ.

ಪ್ರಸ್ತುತ ರಾಜ್ ಕುಂದ್ರಾ ಅವರನ್ನು ಮುಂಬೈ ಕೋರ್ಟ್ ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ರಾಜ್ ಕುಂದ್ರಾ ವಿರುದ್ಧದ ಆರೋಪವೇನು? ಆರೋಪ ಸಾಬೀತಾದರೆ, ಶಿಕ್ಷೆ ಏನು?
ರಾಜ್ ಕುಂದ್ರಾ ಅವರು ಅಶ್ಲೀಲ ಚಿತ್ರಗಳನ್ನು ನಿರ್ಮಿಸಿದ್ದಾರೆ ಮತ್ತು ಅವುಗಳನ್ನು ವಿವಿಧ ಆ್ಯಪ್‌ಗಳ ಮೂಲಕ ಡೌನ್‌ಲೋಡ್ ಮಾಡುವ ಮೂಲಕ ಮಾರಾಟ ಮಾಡಿದ್ದಾರೆ ಎಂಬ ಆರೋಪವಿದೆ. ಅಂತಹ ಆರೋಪಗಳ ಮೇಲೆ, ಆರೋಪಿಯ ವಿರುದ್ಧ ಐಟಿ ಕಾಯ್ದೆ ಮತ್ತು ಐಪಿಸಿ ಯ ವಿವಿಧ ವಿಭಾಗಗಳ ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗುತ್ತದೆ. ರಾಜ್ ಕುಂದ್ರಾ ತಪ್ಪಿತಸ್ಥರೆಂದು ಸಾಬೀತಾದರೆ, ಅವನು 5 ರಿಂದ 7 ವರ್ಷ ಮತ್ತು ಗರಿಷ್ಠ 10 ವರ್ಷಗಳವರೆಗೆ ಜೈಲಿಗೆ ಹೋಗಬೇಕಾಗಬಹುದು.

ಸದ್ಯಕ್ಕೆ, ರಾಜ್ ಕುಂದ್ರಾ ಮಾಡುತ್ತಿದ್ದ ಅಶ್ಲೀಲ ಚಿತ್ರಗಳು ಮೃದು ಮತ್ತು ಸಾಮಾನ್ಯ ವಯಸ್ಕ ಮತ್ತು ಕಾಮಪ್ರಚೋದಕ ಚಲನಚಿತ್ರಗಳು ಅಥವಾ ಪೋರ್ನ್ ಚಲನಚಿತ್ರಗಳ ವರ್ಗದಲ್ಲಿವೆ ಎಂಬುದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕು. ರಾಜ್ ಕುಂದ್ರಾ ಅವರ ‘ಗಂಡಿ ಬಾತ್’ ಚಿತ್ರದಲ್ಲಿ ನಾಯಕಿ ಮತ್ತು ಅದೇ ಪ್ರಕರಣದ 11 ಆರೋಪಿಗಳಲ್ಲಿ ಒಬ್ಬರಾಗಿದ್ದ ಗೆಹ್ನಾ ವಶಿಶ್ತ್ ಈ ಚಿತ್ರಗಳು ಕಾಮಪ್ರಚೋದಕ ಅಥವಾ ಅಶ್ಲೀಲ ಚಿತ್ರಗಳ ವರ್ಗಕ್ಕೆ ಬರಬಹುದು ಎಂದು ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ, ಆದರೆ ಈ ಅಶ್ಲೀಲ ಚಿತ್ರಗಳು ಇಲ್ಲವೇ ಇಲ್ಲ.

About vijay_shankar

Check Also

ಎ, ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡ ಚಲನಚಿತ್ರ ಚಿತ್ರೀಕರಣ ಮುಕ್ತಾಯ

Veryಬೆಂಗಳೂರ : ಸ್ನೇಹಾಲಯಂ ಕ್ರಿಯೇಷನ್ಸ್ ಸಮರ್ಪಿಸಿ ಎ.ಎ.ನ್.ಆರ್ ಪಿಕ್ಚರ್ಸ್ ಬ್ಯಾನರ್ಅಡಿಯಲ್ಲಿ ಎ. ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡಚಲನಚಿತ್ರದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.