ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದ ನಿವೃತ್ತ ಯೋಧ ಸಂತೋಷ ಹನಮಪ್ಪ ಕತ್ತಿ ಅವರಿಗೆ ಗ್ರಾಮಸ್ಥರು ಪ್ರೀತಿಯಿಂದ ಸ್ವಾಗತ ಕೋರಿದ್ದಾರೆ.

ಭಾರತೀಯ ಸೇನೆಯಲ್ಲಿ ಸುಮಾರು 17 ವರ್ಷ ಸೇವೆ ಸಲ್ಲಿಸಿರುವ ಸಂತೋಷ ಕತ್ತಿ ಅವರು ಸದ್ಯ ನಿವೃತ್ತಿ ಪಡೆದಿದ್ದಾರೆ. ರಾಜಸ್ಥಾನ ಬಾರ್ಡರ್ ನಲ್ಲಿ ಯೋಧನಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಬಹುವರ್ಷಗಳ ಬಳಿಕ ಗ್ರಾಮಕ್ಕೆ ಆಗಮಿಸಿರುವ ಹೆಮ್ಮೆಯ ವೀರ ಯೋಧ ಸಂತೋಷ ಕತ್ತಿ ಅವರನ್ನು ಸನ್ಮಾನ ಹಾಗೂ ಮೆರವಣಿಗೆಯ ಮೂಲಕ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಿದರು. ನಗರದ ಉಪ ತಹಶಿಲ್ದಾರರ ಎಸ್,ವ್ಹಿ ಕುಂದರಗಿ ಸ್ವಾಗತ ಕೋರಿ ಸನ್ಮಾನಿಸಿದರು.
ಅಂಜುಮನ್ ಇಸ್ಮಾಂ ಕಮೀಟಿಯಿಂದ ಅದ್ದೂರಿಯಾಗಿ ಸ್ವಗತ :

ಪಟ್ಟಣದ ಅಂಜುಮನ್ ಅಧ್ಯಕ್ಷರಾದ ಅಜಮೀರ ಮುಲ್ಲಾ, ಹಾಸಿಮ್ ಪೀರಾ ಪೀರಜಾದೆ, ಹಸನಸಾಬ ಮುಲ್ಲಾ, ಮತ್ತು ಸಮಾಜದ ಅನೇಕ ಗಣ್ಯರು ಉಪಸ್ಥಿತಿ ಇದ್ದರು.
ಬಿದಿ ಬದಿ ವ್ಯಾಪಾರಸ್ಥರ ಸಂಘದಿಂದ ನಿವೃತ್ತ ಯೋಧನಿಗೆ ಸನ್ಮಾನ :

ಭಾರತ ಮಾತೆಯ ಸುದೀರ್ಘ ಸೇವೆ ಮಾಡಿ ಸೇನಾ ನಿವೃತ್ತಿಹೊಂದಿ ಸ್ವಗ್ರಾಮಕ್ಕೆ ಆಗಮಿಸಿರುವ, ಸಂತೋಷ್ ಹನುಮಪ್ಪ ಕತ್ತಿ ಅವರಿಗೆ ಕರ್ನಾಟಕ ಬೀದಿಬದಿ ವ್ಯಾಪಾರಸ್ಥರ ಸಂಘಟನೆ ಒಕ್ಕೂಟ ಶಾಖೆ ಅಮೀನಗಡ ಇವರಿಂದ ಭರ್ಜರಿಯಾಗಿ ಸ್ವಾಗತಿಸಿ,ಸನ್ಮಾನ ಮಾಡಿದರು. ಬೀದಿ ವ್ಯಾಪಾರಸ್ಥರ ಅಧ್ಯಕ್ಷರಾದ ಶ್ರೀ ದಾವಲಸಾಬ ಬಾಗೇವಾಡಿ, ಶ್ರೀಮತಿ ಮಮ್ತಾಜ್ ಬೇಗಂ, ಶ್ರೀಮತಿ ಚಾಂದಿ ಬಿ ಎಂ ಜಂಗಿ, ಎಸ್ ಅಂಬಲಗಿ, ಮುತ್ತಪ್ಪ ಮುಂದಿನಮನಿ,ಮತ್ತು ಹನುಮಂತ ಎಸ್ ಕತ್ತಿ, ಗಣೇಶ್ ಸಿಂಹಾಸನ, ರಾಜೇಸಾಬ ಜಂಗಿ ಮತ್ತು ಸಂಘದ ಸಂಘದ ಸರ್ವ ಸದಸ್ಯರು ಉಪಸ್ಥಿತಿ ಇದ್ದರು.
ಗ್ರಾಮಕ್ಕೆ ಬಂದ ಯೋಧರಿಗೆ ಗ್ರಾಮಸ್ಥರು ತೆರೆದ ವಾಹನದಲ್ಲಿ ಒಂದು ಕಿಲೋಮೀಟರ್ ಮೆರವಣಿಗೆ ಮಾಡಿದರು, ಈ ವೇಳೆ ತ್ರಿ ವರ್ಣ ಧ್ವಜ ಹಿಡಿದು, ಜೈಹಿಂದ್ ಘೋಷಣೆಯನ್ನೂ ಕೂಗಿದ ಗ್ರಾಮಸ್ಥರ ಪ್ರೀತಿಗೆ ವೀರಯೋಧ ಸಂತೋಷ ಹನಮಪ್ಪ ಕತ್ತಿ ಧನ್ಯವಾದ ಹೇಳಿದರು.
ವರದಿ : ಮುಸ್ತಾಪ್ ಮಾಸಾಪತಿ