
ಇಲಕಲ್ಲ :
ನಗರದ ತಹಶಿಲ್ದಾರ ಕಾರ್ಯಾಲಯದಲ್ಲಿ ನಿನ್ನೆಯ ದಿನ ಕಂದಾಯಾ ದಿನಾಚರಣೆ ಅಂಗವಾಗಿ ತಹಶಿಲ್ದಾರರ ಇಲಾಖೆಯ ಆವರಣದಲ್ಲಿ ೧೦೦ ಸಸಿಗಳನ್ನು ನೆಡುವ ಮೂಲಕ ಹಸಿರೋತ್ಸವ ಕಾರ್ಯಕ್ರಮವನ್ನು ಆಚರಿಸಲಾ ಯಿತು. ಇಲಾಖೆಯ ಗ್ರೇಡ್ ೨ ತಹಶಿಲ್ದಾರ ಶ್ರೀಮತಿ ಎ ರತ್ನಮ್ಮ ಅವರು ಸಸಿ ನೆಟ್ಟು ನೀರು ಉನಿಸುವ ಮೂಲಕ ಉದ್ಘಾಟನೆ ಮಾಡಿದರು,

ಈ ಸಂದರ್ಭದಲ್ಲಿ ರಾಜ್ಯ ಗ್ರಾಮ ಲೇಕ್ಕಾಧಿಕಾರಿಗಳ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಶ್ರೀ ಡಿ,ಎಸ್,ಯತ್ನಟ್ಟಿ ಅವರು ಕಂದಾಯ ದಿನಾಚರಣೆ ಅಂಗವಾಗಿ ನಮ್ಮ ಕಾರ್ಯಾಲಯದಲ್ಲಿ ೧೦೦ ಕ್ಕೂ ಅಧಿಕ ಸಸಿ – ಮರಗಳನ್ನು ಹಚ್ಚಿ ಈ ದಿನ ವಿಶೇಷವಾಗಿ ಆಚರಣೆ ಮಾಡುತ್ತಿರುವುದು ಬಹಳ ಖುಷಿ ತಂದಿದೆ,ಕರೋನ ಸಂಧರ್ಭದಲ್ಲಿ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು ತುಂಬಾ ಹೋರಾಟ ಮಾಡಿದ್ದಿರಿ ಈ ಸಂದರ್ಭದಲ್ಲಿ ತಮಗೆ ಅಭಿನಂದನೆ ಸಲ್ಲಿಸುತ್ತೇನೆ, ಗ್ರಾಮದಲ್ಲಿ ತುಂಬಾ ಒತ್ತಡದ ಮಧ್ಯ ನಾವು ಕೆಲಸ ಮಾಡುವ ಅನಿವಾರ್ಯತೆ ಬರುತ್ತೆ ಅದಕ್ಕೆ ನಾವು ಬಹಳ ಸಹನೆಯಿಂದ ಕೆಲಸ ಮಾಡಬೇಕು, ಸರಕಾರದ ಹತ್ತಾರು ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ಜತ್ಯಾತೀತವಾಗಿ,ಮಾಡಬೇಕು ಎಂದರು.

ಹಸಿರು ಈ ನಾಡಿನ ಉಸಿರು ಎಲ್ಲರೂ ಮನೆಗೊಂದು ಮರ ಶಾಲೆಗೊಂದು ವನ ನಿರ್ಮಿಸಲು ತಮ್ಮ ಮಕ್ಕಳಿಗೆ ಪರಿಸರ ಕಾಳಜಿಯನ್ನು ಬೆಳೆಸಬೇಕು ಈ ಕಾರ್ಯಕ್ರ ಮದಲ್ಲಿ ,ನನ್ನ ಕರೆದು ಸನ್ಮಾನ ಮಾಡಿದ ಈ ವೇದಿಕೆಯ ಎಲ್ಲಾ ನನ ಸಹಪಾಟಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು ಎಂದರು, ಈ ಕಾರ್ಯಕ್ರಮದಲ್ಲಿ ತಹಶಿಲ್ದಾರ ಸೇರಿದಂತೆ ಶೀರಸ್ಥಾರರಾದ ಶ್ರೀ ಎಸ್,ಡಿ,ಗೌಡರ, ಹಾಗೂ ಶ್ರೀ ಏ,ಜೇ,ಸಜ್ಜನ ಮತ್ತು ನಿವೃತ್ತ ತಹಶಿಲ್ದಾರ ಆದ ದೇಸಾಯಿ ಸರ್ ಹಾಗೂ ಕಂದಾಯ ನೀರಿಕ್ಷ ಕರಾದ,ನವೀನ ಬಲಕುಂದಿ,

ಆಹಾರ ನೀರಿಕ್ಷಕರಟದ ಶ್ರೀ ಚಿದಾನಂದ ವಡವಡಗಿ ಹಾಗೂ ಇಲಕಲ್ಲ ತಾಲೂಕಿನ ಕಂದಾಯ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀ ಸಿ,ಎಸ್,ಕನ್ನೂರು, ಹಾಗೂ ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀ ಎಸ್,ಕೆ,ವಿಶ್ವಕರ್ಮ. ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಾದ ಶ್ರೀ ಶಂಕರ್ ಲಮಾನಿ, ಶ್ರೀ ಮಹಾಂತೇಶ ಕಲ್ಮಟ, ಶ್ರೀ ಬಿ,ಎಮ್, ಪಾಟೀಲ, ಶ್ರೀ ಯಮನಪ್ಪ ವಡ್ಡರ, ಹಾಗೂ ಇಲಕಲ್ಲ ಕಂದಾಯ ಇಲಾಖೆ ಎಲ್ಲಾ ನೌಕರ ವರ್ಗ ಮತ್ತು ಗ್ರಾಮ ಸಹಾಯಕರು ಉಪಸ್ಥಿತಿ ಇದ್ದರು.