
ಹುನಗುಂದ : ತಾಲ್ಲೂಕಿನ ಚಿತ್ತರಗಿ ಗ್ರಾಮದಲ್ಲಿ ಇಂದು ಆರೋಗ್ಯ ಇಲಾಖೆಯಲ್ಲಿ ಗ್ರಾಮದ ಕರೋನಾ ವಾರಿಯರ್ ಗಳಾದ ವೈದ್ಯರು ಹಾಗೂ ಆಶಾ/ ,ಅಂಗನವಾಡಿ ಕಾರ್ಯಕರ್ತೆ ,ಪಂಚಾಯತ್ ಪೌರಕಾರ್ಮಿಕರಿಗೆ ಇಂದು ತಾಲೂಕಿನ SRNE ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾದ S R ನವಲಿ ಹಿರೇಮಠ ಅವರು ಎಲ್ಲಾ ಕರೋನಾ

ವಾರಿಯರ್ ಗಳಿಗೆ ದಿನಸಿ ಆಹಾರ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಫೌಂಡೇಶನ್ ಅಪಾರ ಕಾರ್ಯಕರ್ತರು ಹಾಗೂ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ವೈದ್ಯಕೀಯ ಸಿಬ್ಬಂದಿಯಿಂದ S R ನವಲಿ ಹಿರೇಮಠ ಅವರಿಗೆ ಸನ್ಮಾನ ಮಾಡಲಾಯಿತು, ಈ ಸಂದರ್ಭದಲ್ಲಿ ಮಾತನಾಡಿದ SR ನವಲಿಹಿರೇಮಠ ಅವರು ನಮ್ಮ ಕ್ಷೇತ್ರದಲ್ಲಿ ಯಾರೂ ಹಸಿವಿನಿಂದ ಇರಬಾರದು ಅಲ್ಲದೇ ಇಡೀ ಕ್ಷೇತ್ರವನ್ನು ಗುಡಿಸಲು ಮುಕ್ತ ಕ್ಷೇತ್ರವನ್ನಾಗಿ ಮಾಡಲು ಇಚ್ಚಿಸಿದ್ದೇನೆ. ಬಡವರು ಯಾರು ಶಿಕ್ಷಣದಿಂದ ಇತರೇ ಯಾವುದಾದರೂ ತೊಂದರೆ ಇದ್ದರೆ ತಕ್ಷಣ ನಮ್ಮ ಕಚೇರಿಗೆ ಬಂದು ಕಾನಿ ಎಂದರು.

ನೂರಾರು ಜನ ಕರೋನಾ ವಾರಿಯರ್ ಗಳಿಗೆ ಸನ್ಮಾನಿಸಿ ಆಹಾರ ಕಿಟ್ ನೀಡಿದರು, ಈ ಸಂದರ್ಭದಲ್ಲಿ ಗ್ರಾಮದ ಅನೇಕ ಹಿರಿಯರು,ಗ್ರಾಮ ಪಂಚಾಯತಿ ಸದಸ್ಯರು ಹಾಗೂ
ಭೀಮಣ್ಣ ಎಸ್ ಆರ್ ನವಲಿಹಿರೇಮಠ, ತೀರ್ಥಪ್ಪ ಉಂಡೋಡಿ ,ಚೇತನ್ ಮುಕ್ಕಣ್ಣವರ್ ,L.M.ಪಾಟೀಲ ನಾಗರಾಜ್ ಕುಲಕರ್ಣಿ
ನವೀನ್ ದೇವದುರ್ಗ
ರವಿ ಹುನಗುಂದ
ಶ್ರೀ ಮಲ್ಲು ಕಮರಿ ರವಿ ಬಾನಿ
ಅಪಾರ ಕಾರ್ಯಕರ್ತರು ಉಪಸ್ಥಿತಿ ಇದ್ದರು. ತಾಲೂಕಿನ ಇಲಕಲ್ಲ / ಹುನಗುಂದ ಅವಳಿ ತಾಲೂಕಿನಾಧ್ಯಾಂತ ೩೨ ಗ್ರಾಮ ಪಂಚಾಯತಿ ಆಧ್ಯಾಂತಹ ಆಯ್ದ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕರೋನಾ ವಾರಿಯರ್ ಗಳಿಗೆ ಕಳೆದ ೨ ತಿಂಗಳಿಂದ ಈ ಸೇವೆ ನಡೆಯುತ್ತಿದೆ ಕ್ಷೇತ್ರದಲ್ಲಿ SRN ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಜನತೆ ಕೊಂಡಾಡುತ್ತಿದ್ದಾರೆ.

ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ S RNE ಹುನಗುಂದ/ ಇಲಕಲ್ಲ.