
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ನೂತನ ಪಟ್ಟಣ ಪಂಚಾಯತ ಸದಸ್ಯೆ ಶ್ರೀ ಸಂಜಯ್ ಐಹೊಳೆ ಅವರು ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ಪಾಲಕರು ತಪ್ಪದೆ ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು,ಆಂಗನವಾಡಿ ಕಾರ್ಯಕರ್ತರು ಪ್ರತಿ ಮನೆಗೆ ಬೇಟಿ ಕೊಟ್ಟು ಪಾಲಕರ ಮನ ಹೋಲಿಸಿ ಪೋಲಿಯೋ ಹಾಬೇಕು ಎಂದರು. ಕಾರ್ಯಕ್ರಮವನ್ನು 14 ನೇ ವಾರ್ಡಿನ ಬನ್ನಿ ಕಾಳಮ್ಮ ದೇವಸ್ಥಾನದಲ್ಲಿ ನೆರವೇರಿದ್ದು ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರಾದ ನಾಗರತ್ನ ಗುಡ್ಡ, ಅಂಗನವಾಡಿ ಶಿಕ್ಷಕಿಯರಾದ ಜಯಶ್ರೀ ಪೇಟೆಜಯಶ್ರೀ, ಸಾಯಿರ ತಾಳಿಕೋಟಿ, ಅಂಗನವಾಡಿ ಸಹಾಯಕಿಯರಾದ ಪಾರ್ವತಿ ಸನಕಲ್ ಮತ್ತು ಮಾಲಾ ಬಾಪರೆ ಇದ್ದರು.
