Breaking News

ಶಹಾಪೂರ | ಮಳೆರಾಯನ ಅರ್ಭಟಕ್ಕೆ ಮನೆ, ರಸ್ತೆಗಳು ಜಲಾವೃತ | ಬೀದರ್ ಶ್ರೀರಂಗಪಟ್ಟಣ ಹೆದ್ದಾರಿ ಮೇಲೆ ಭಾರಿ ನೀರು

ಯಾದಗಿರಿ (ಶಹಾಪೂರ) | ಯಾದಗಿರಿ ಜಿಲ್ಲೆಯ ಶಹಾಪೂರ ನಗರದ ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ನಿನ್ನೆ ಶನಿವಾರ ರಾತ್ರಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮವಾಗಿ ಬೀದರ್ ಶ್ರೀರಂಗಪಟ್ಟಣ ರಸ್ತೆಯುದ್ದಕ್ಕೂ ನೀರುಹರಿದಿದೆ. ಹಳ್ಳ, ಕೊಳ್ಳ ಕೆರೆಗಳು ತುಂಬಿ ಹರಿಯುತ್ತಿದ್ದು, ಹಳ್ಳ ಸಮೀಪ ನಿವೇಶನವೊಂದರಲ್ಲಿ ಶೆಡ್ ಹಾಕೊಂಡು ವಾಸವಿದ್ದ ಕುಟುಂಬವೊಂದು ಹಳ್ಳದ ನೀರಿನ ಪ್ರವಾಹಕ್ಕೆ ಸಿಲುಕಿದ್ದು, ಜೆಸ್ಕಾಂ ನೌಕರರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ನಗರದ ಬಾಪುಗೌಡ ನಗರದಲ್ಲಿ ಬೆಳಗಿನ ಜಾವ 4 ಗಂಟೆಗೆ ನಡೆದಿದೆ.

ಜೆಸ್ಕಾಂ ಸಿಬ್ಬಂದಿಯ ಸಮಯ ಪ್ರಜ್ಞೆ, ಕುಟುಂಬದ ಸದಸ್ಯರ ರಕ್ಷಣೆ

ಶೆಡ್ ಅರ್ಧ ಮುಳುಗಡೆಯಾಗಿ ಆತಂಕದಲ್ಲಿರುವಾಗ ಜೆಸ್ಕಾಂ ಸಹಾಯಕ ಶಾಖಾಧಕಾರಿ ಎಕ್ಬಾಲ್ ಲೋಹಾರಿ ಹಾಗೂ ಸಿಬ್ಬಂದಿ ಬೆಳಗಿನ ಜಾವ 4 ಸುಮಾರಿಗೆ ವಿದ್ಯುತ್ ಕಂಬ ಉರಿಳಿರುವ ಕುರಿತು ಲೈನ್  ಚೆಕ್ ಮಾಡುವಾಗ ಕುಟುಂಬವೊಂದು ನೀರಿನಡಿಸಿಲುಕಿರುವದು ಕಂಡು ಬಂದಿದೆ ತಕ್ಷಣ ಅಗ್ನಿಶಾಮಕ ದಳ ಶಾಖೆಗೆ ತೆರಳಿ ಸಿಬ್ಬಂದಿಯನ್ನು ಕರೆ ತಂದು ತಾವೂ ಸಾಥ್ ನೀಡುವ ಮೂಲಕ ಕುಟುಂಬ ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ, ಜೆಸ್ಕಾಂನೌಕರ ಎಕ್ಬಾಲ್ ಲೋಹಾರಿ ಮತ್ತು ಸಿಬ್ಬಂದಿ ಸಾಥ್ ನೀಡಿ ವೃದ್ಧ ದಂಪತಿ, ನಾಲ್ಕು ಜನಮಕ್ಕಳು ಸೇರಿದಂತೆ ಒಟ್ಟು 8 ಜನರನ್ನು ರಕ್ಷಣೆ ಮಾಡಿದ್ದಾರೆ. ರಬಸದಿ ಹರಿಯುತ್ತಿರುವ ಹಳ್ಳದ ನೀರಿನಲ್ಲಿಹಗ್ಗ ಹಾಕಿ ಅವರನ್ನು ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ವೃದ್ಧ ಅರ್ಜುನ್ ಗೂಡೂರ ಹಾಗೂ ಪತ್ನಿ ಮತ್ತು ಮಗ ಮಹಾಂತೇಶ, ಸೊಸೆ ಮತ್ತು ನಾಲ್ಕು ಜನ ಮಕ್ಕಳನ್ನು ರಕ್ಷಿಸಿ ಸದ್ಯ ನಗರಸಭೆ ಅಧೀನದ ನಿರಾಶ್ರಿತ ಕೇಂದ್ರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ.

ಪತ್ರಕರ್ತರ ಕರೆಗೆ ಸ್ಪಂಧಿಸಿದ ತಹಶೀಲ್ದಾರ

ಪತ್ರಕರ್ತರು ಕಾಲ್ ಮಾಡಿ ವಿಷಯ ತಿಳಿಸುತ್ತಿದ್ದಂತೆ ತಹಶಿಲ್ದಾರ ಜಗನ್ನಾಥರಡ್ಡಿ ಅವರು ಕೂಡಲೇ ಸ್ಪಂಧಿಸಿ ನಗರಸಭೆ ಅಧಿಕಾರಿ ಹರೀಶ ಅವರಿಗೆ ಕರೆ ಮಾಡಿ ನಿರಾಶ್ರಿತ ಕುಟುಂಬಕ್ಕೆ ತಂಗಲು ವ್ಯವಸ್ಥೆ ಮಾಡಲು ಸೂಚಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ನಗರಸಭೆ ಅಧಿಕಾರಿ ಹರೀಶ ಅವರು, ನಿರಾಶ್ರಿತ ಕೇಂದ್ರದಲ್ಲಿ ತಾತ್ಕಾಲಿಕವಾಗಿ ತಂಗಲು ವ್ಯವಸ್ಥೆ ಮಾಡಿದರು. ನಿರಾಶ್ರಿತರಿಗೆ ಊಟ ಉಪಚಾರದ ವ್ಯವಸ್ಥೆಯೂ ಕೇಂದ್ರದಲ್ಲಿಇದೆ ಎಂದು ತಿಳಿಸಿದರು. ಅಲ್ಲದೆ ತಹಶೀಲ್ದಾರ ಅವರು ಮೂರು ನಾಲ್ಕು ಬಾರಿ ಪತ್ರಕರ್ತರು ಮತ್ತು ನಗರಸಭೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ, ಕರೆ ಮಾಡಿ ನಿರಾಶ್ರಿತ ರಿಗೆ ವ್ಯವಸ್ಥೆ ಆಗುವದನ್ನು ಖಚಿತ ಪಡಿಸಿಕೊಂಡಿರುವದು ಅವರ ಕಾಳಜಿಪೂರ್ವಕಕರ್ತವ್ಯಕ್ಕೆ ಸಾಕ್ಷಿಯಾಯಿತು. ಎಕ್ಬಾಲ್ ಲೋಹಾರಿ ಅವರು ನಿರಾಶ್ರಿತ ಕುಟುಂಬಕ್ಕೆ ಸದ್ಯಕ್ಕೆ ಉಪಾಹಾರ ಮಾಡಿಸಿ ಕೇಂದ್ರಕ್ಕೆ ಸ್ವತಹಃ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಬಿಟ್ಟು ಬಂದರು.ಮಾನವೀಯತೆ  ಮೆರೆದ ಈ ಎಲ್ಲಾ ಅಧಿಕಾರಿ ವರ್ಗಕ್ಕೆಜನರಿಂದಮೆಚ್ಚುಗೆ ದೊರೆಯಿತು.

ಶಹಾಪೂರ ನಗರದ ಮನೆ, ರಸ್ತೆಗಳು ಜಲಾವೃತ, 200 ಕೋಳಿಗಳು ನೀರುಪಾಲು

ದಾರಾಕಾರವಾಗಿ ಸುರಿದ ಮಳೆಯಿಂದ ಶಹಾಪುರ ನಗರದ ಅನೇಕ ನಗರ ಕಾಲೋನಿಗಳಲ್ಲಿ ಚರಂಡಿಗಳು ತುಂಬಿಕೊಂಡು ರಸ್ತೆಗೆ ನಿಂತು ಮನೆಗಳಿಗೆ ನುಗ್ಗಿವೆ,ಈ ಹಿಂದೆ ಕೊಟ್ಯಾಂತರ ರೂ,ಗಳನ್ನು ವೆಚ್ಚ ಮಾಡಿ ಶಹಾಪುರ ನಗರ ರಾಷ್ಟ್ರೀಯ ಹೆದ್ದಾರಿ, ಬೀದರ ಬೆಂಗಳೂರ ರಸ್ತೆಯೂದ್ದಕ್ಕೂ ಚರಂಡಿ ನಿರ್ಮಾಣ ಮಾಡಲಾಗಿತ್ತು, ಅವೈಜ್ಞಾನಿಕ ಚರಂಡಿಯಿಂದ ಮಳೆ ಅರ್ಭಟಕ್ಕೆ ಶಹಾಪುರ ನಗರದ ಬಸವೇಶ್ವರ ವೃತ್ತ, ಗ್ಯಾರೆಜ್ ಲೈನ, ಡಿಗ್ರಿ ಕಾಲೆಜು ಹಳ್ಳದ ದಡದಲ್ಲಿರುವ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ.ಇಲ್ಲಿನ ಮನೆಗಳಿಗೂ ನೀರು ನುಗ್ಗಿ ಮನೆಯಲ್ಲಾ ನೀರು ತುಂಬಿಕೊಂಡು ಕುಟುಂಬಗಳು ಪರಾದಡುವಂತಾಗಿವೆ,ಮಟನ್ ಮಾರುಕಟ್ಟೆಯಲ್ಲಿನ ಅಂದಾಜು 200 ಕೊಳಿಗಳು ನೀರುಪಾಲಾಗಿವೆ. ಹಳ್ಳದ ನೀರಿಗೆ ಬೈಲಪತ್ತಾರ ಮನೆಗಳು  ನೀರಿನಲ್ಲಿ ಮುಳುಗಿದೆ,ಎಂದು ತಿಳಿದು ಬಂದಿದೆ.

ಧಾರಾಕಾರಮಳೆಗೆ ವಿದ್ಯುತ್ ಕಂಬ, ಗಿಡಮರ ನೆಲಕ್ಕೆ

ತಾಲೂಕಿನಲ್ಲಿ ಶನಿವಾರ ಧಾರಕಾರ ಮಳೆಸುರಿದ ಪರುಣಾಮಮಳೆ ಗಾಳಿಗೆ ಅಲ್ಲಲ್ಲಿ ವಿದ್ಯುತ್ ಕಂಬ, ಗಿಡಮರಗಳು ನೆಲಕ್ಕುರುಳಿವೆ. ಮಾವಿನ ಕೆರೆ ಮತ್ತು ನಾಗರ ಕೆರೆಗಳು ತುಂಬಿ ನಿಂತಿವೆ. ಕೆಇಬಿ ಹತ್ತಿರದ ಮಾವಿನಕೆರೆಯಿಂದ ಬರುವ ಹಳ್ಳ ಒತ್ತುವರಿಯಾದ ಪರಿಣಾಮ ನೀರಿನ ಹರಿವು ಎತ್ತೆತ್ತಲೋ ಹರಿಯುತ್ತಿದ್ದು ಸಾಕಷ್ಟು ಮನೆ, ರಸ್ತೆಗಳುತುಂಬೆಲ್ಲ ನೀರು ಆವರಿಸಿಕೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ. ನಹರದ ಫಿಲ್ಟರ್ ಬೆಡ್ ಗೆ ತೆರಳುವ ಮಾರ್ಗ ಮಧ್ಯ ಹಳ್ಳ ತುಂಬಿ ಹರಿಯುತ್ತಿದ್ದ ಸೇತುವೆ ಮೇಲೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಬಾಪುಗೌಡ ನಗರದ ಸರ್ಕಾರಿ ಶಾಲಾಸುತ್ತಲು ನೀರು ಆವರಿಸಿ ತುಂಬಿ ಹರಿಯುತ್ತಿದೆ. ಅಲ್ಲದೆ ಡಿಗ್ರಿ ಕಾಲೇಜು ಕಂಪೌಂಡ್ ನೀರಿನ ರಬಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಟೌನ್ ಹಾಲ್ ಮುಂದೆ ನೀರು ಕೆರೆಯಂತಾಗಿದೆ.

ಶಹಾಪುರ- ಭೀಮರಾಯನ ಗುಡಿ ರಸ್ತೆ ಸಂಚಾರಅಡೆತಡೆಯುಂಟಾಗಿದೆ. ದಿಗ್ಗಿ ಹೋಗುವ ರಸ್ತೆ ಮೂಲಕಡಿಗ್ತಿ ಕಾಲೇಜು ಗೇಟ್ ಮುಂದೆ ರಾಜ್ಯ ಹೆದ್ದಾರಿ ಮೇಲೆನೀರು ಹರಿಯುತ್ತಿದ್ದ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು. ಕಾರುಗಳು ಅರ್ಧ ನೀರಲ್ಲಿ ಮುಳಗಿದ ದೃಶ್ಯಗಳು ಕಂಡು ಬಂದವು,ನಗರದ ಬಸವೇಶ್ವರ ವೃತ್ತ ನೀರಲ್ಲಿ ಮುಳುಗಿದ್ದ ಬಸವೇಶ್ವರ ಪ್ರತಿಮೆಸುತ್ತಲೂ ನೀರು ಆವರಿಸಿದ್ದು,ಒಟ್ಟಾರೆ ರಾತ್ರಿ ಮಳೆ ಅವಾಂತರ ಸೃಷ್ಟಿಸಿದೆ ಎನ್ನಬಹುದು.

About vijay_shankar

Check Also

test

test

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.