ಇಂದು ರಾಜ್ಯ NCP ಪಕ್ಷದ ರಾಜ್ಯ ಅಧ್ಯಕ್ಷ ಸೇರಿದಂತೆ ಪಕ್ಷದ ಅಪಾರ ಕಾರ್ಯಕರ್ತರು ದಿಡಿರ್ ಪ್ಲಗ್ ಹಿಡಿದು ಕರ್ನಾಟಕ ಉಳಿಸಿ ಎಂಬ ನಾಮ ಫಲಕ ಹಿಡಿದು ಸರಕಾರದ ವಿರುದ್ಧ ಮೈಸೂರು ಬ್ಯಾಂಕ್ ನಿಂದ ಫ್ರೀಡಂ ಪಾಕ್೯ ವರೆಗೂ ಮೌನ ಪ್ರತಿಭಟನೆ ಮಾಡಿದರು.
ಬೆಂಗಳೂರು: ಪಕ್ಷದ ರಾಜ್ಯ ಅಧ್ಯಕ್ಷ ಲಕ್ಷಣ್ಣ ದಿಕ್ಸಿತ್ ಮಾತನಾಡಿ ಕೇಂದ್ರ ಸರಕಾರ ರೈತರ ಜೀವನ ಜೊತೆಗೆ ಆಟ ಆಡುತ್ತಿದೆ ಭೂ ಸುಧಾರಣಾ ಕಾಯ್ದಿಯಿಂದ ಬಡ ವರು ಬಡವರಾಗಿಯೇ ಇರಬೇಕು ಶ್ರೀಮಂತ ಶ್ರಿಮಂತರಾಗಿ ಇರಬೇಕು ಎಂಬುದು ಸರಕಾರದ ಮುಖ್ಯ ಉದ್ದೇಶ ಈ ಭೂ ಸುಧಾರಣೆ ಕಾಯ್ದೇ ಅವೈಜ್ಞಾನಿಕ ವಾಗಿದ್ದು ತಕ್ಷಣ ಇದನ ಕೇಂದ್ರ ಸರಕಾರ ಕೈ ಬಿಡಬೇಕೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು, ಕರ್ನಾಟಕ ರಾಜ್ಯ ಮಾದಿಗರ ಯುವ ಸೇನೆ ಅಧ್ಯಕ್ಷ ಹಾಗೂ NCP ರಾಜ್ಯ ಪ್ರಧಾನ ಕಾರ್ಯದರ್ಶಿ ಮುತ್ತು ಸುರಕೊಡ ಕೇಂದ್ರ ಸರಕಾರ ಸಂಪೂರ್ಣವಾಗಿ ರೈತರ ಹಾಗೂ ದಲಿತರಿಗೆ ಅನ್ಯಾಯ ಮಾಡುತ್ತಿದೆ.

ಈ ಕಾಯ್ದೆಯನ್ನು ಸರಕಾರ ಕೈ ಬಿಟ್ಟು ಯತಾ ಸ್ಥಿತಿ ಮುಂದುವರೆಯಲಿ ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಸರಕಾರಕ್ಕೆ ಸವಾಲ್ ಎಸೆದರು, NCP ಪಕ್ಷದ ಉತ್ತರ ಕರ್ನಾಟಕದ ಉಸ್ತುವಾರಿ ವಹಿಸಿಕೊಂಡ ಹಾಗೂ ರಾಜ್ಯ NCP ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ಶಶಿಕುಮಾರ್ ಎಮ್ ಹಳಪಡಿ,ರಾಜ್ಯ ಸರಕಾರದ ವಿರುದ್ಧ APMC ಸೇರಿದಂತೆ ರೈತರ ಮೇಲೆ ನಿರಂತರ ಪೆಟ್ಟು ಬಿದ್ದು ಉತ್ತರ ಕರ್ನಾಟಕದ ರೈತರ ಸ್ಥಿತಿ ಚಿಂತಾಜನಕವಾಗಿದೆ ಮೇಲಿಂದಮೇಲೆ ಪ್ಲಡ್ ಬಂದು ಕಳೆದ ಒಂದೇ ವರ್ಷದಲ್ಲಿ ಎರಡು ಸಲ ಪ್ಲಡ್ ಬಂದು ಲಕ್ಷಾಂತರ ರೈತರ ಬದುಕು ಬಿದಿಗೆ ಬಂದಿದೆ ಸರಕಾರ ರೈತರ ಬೆಲೆಗೆ ಸೂಕ್ತ ಬೆಲೆ ನಿಗದಿ ಮಾಡದೇ ನಿತ್ಯ ರಾಜ್ಯದಲ್ಲಿ ರೈತರು ಮಾಡಿದ ಸಾಲ ತಿರಿಸಕಾಗದೇ ಆತ್ಮಹತ್ಯೆ ಮಾಡಿಕೊಳ್ಳತ್ತಿದ್ದಾರೆ ಇತ್ತ ಯಡೂರಪ್ಪ ಸರಕಾರ ಕಣ್ಮುಚ್ಚಿ ಕುಳಿದಿದೆ ರಾಜ್ಯದಲ್ಲಿ ಸರಕಾರದ ಭ್ರಷ್ಟಾಚಾರ ನೋಡಿ ಜನ ಉಗುಳುತ್ತಾದ್ದಾರೆ ಮಾನ್ಯ ಯಡಿಯೂರಪ್ಪ ನವರಿಗೆ ನಾಚಿಗೆ ,ಮಾನ , ಮರ್ಯಾದೆ ಇದ್ರ ರಾಜಿನಾಮೆ ನೀಡಿ ರಾಜಕೀಯ ನಿವೃತ್ತಿ ಘೋಷಣೆ ಮಾಡಲಿ.
ಜನರ ಆರೋಗ್ಯ ಕಾಪಾಡಿವಲ್ಲಿ ಕರೋನ ತಡೆಗಟ್ಟಲು ವಿಫಲವಾದ ಇಂತಹ ಭ್ರಷ್ಟ ಸರಕಾರದ ಆಡಳಿತ ನೋಡಿ ಜನ ಆಸ್ಪತ್ರೆಗೆ ಹೋಗಲು ಸಹ ಹಿಂಜರಿ ಯುತ್ತಿದ್ದಾರೆ, ಖಾಸಗಿ ಆಸ್ಪತ್ರೆಗೆ ಕಡಿವಾಣ ಹಾಗಲು ಅಸಮರ್ಥವಾದ ಇಂತಹ ಸರಕಾರ ಕರೋನ ಹೆಸರಲ್ಲಿ ಲಕ್ಷಾಂತರ ಕೋಟಿ ಸಾಲ ಮಾಡಿ ಯಾವ ಪುರುಷಾರ್ಥ ಕ್ಕೆ ಸರಕಾರ ನಡೆಸಬೇಕು ಎಂಬುದು ನಾಚಿಗೆಡಿನ ಸಂಗತಿ ಎಂದು ಲೇವಡಿ ಮಾಡಿದರು,ಈ ಮೌನ ಪ್ರತಿ ಭಟನೆಯಲ್ಲಿ NCP ಪಕ್ಷದ ಬೆಂಗಳೂರು ವಿಭಾಗದ ಜಿಲ್ಲಾ ಅಧ್ಯಕ್ಷ ಸತೀಶ್ ಹಾಗೂ ಅಪಾರ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮಧ್ಯದಲ್ಲಿ ಇವರನ್ನು ತಡೆದು ಕಾರಣ ಫ್ರೀಡಂ ಪಾಕ್೯ ನಲ್ಲಿ ಹೋರಾಟ ಅಂತ್ಯ ಮಾಡಿ ಪತ್ರಿಕಾ ಗೋಷ್ಠಿ ಮೂಲಕ ಸರಕಾರದ ಅವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತ ಪಡಿಸಿ ಇದು ಅಂತ್ಯ ಅಲ್ಲ ಆರಂಭ ಎಂದು ಸವಾಲೆಸೇದರು.
ವರದಿ: ರಮೇಶ,ಹರದೊಳ್ಳಿ