
ಶೂಲೇಭಾವಿ:
ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ೮ನೇ ಶತಮಾನದಲ್ಲಿ ನಿರ್ಮಾಣಗೊಂಡ ಶಿವ ದೇವಾಯದಲ್ಲಿ ಇಂದು ಪ್ರತಿ ಸೋಮವಾರ ದಂತೆ ಈ ವಾರ ಸೋಮವಾರ ನಿಮಿತ್ತವಾಗಿ ಶ್ರೀ ತುಳಜಾ ಭವಾನಿ ಭಜನಾ ಮಂಡಳಿ ಬಳಗದಿಂದ ಶಿವ ಕಿರ್ತನಾ ಗೀತೆಗಳನ್ನು ಹಾಡುವ ಮೂಲಕ ಶಿವ ಸ್ಮರಣೆಯನ್ನು ಮಾಡಲಾಯಿತು, ಇದು

ಶಿವಾಲಯದಲ್ಲಿ ಪ್ರತಿ ಸೋಮವಾರ ಸಾಯಂಕಾಲ ೬:೩೦)ಗಂಟೆಯಿಂದ ೮ ಗಂಟೆಯವರೆಗೆ ಈ ಭಜನಾ ಕಾರ್ಯಕ್ರಮ ಜರುಗಿತು ಭಜನಾ ಮಂಡಳಿಯ ಮೂಲ ಗಾಯಕರಾದ ಲಕ್ಷ್ಮಣ್ಣ ಕತ್ತಿ,ಪೇನಪೆಟ್ಟಗಿ ವಾದಕರಾದ ನಾರಾಯಣಪ್ಪ ಲಾಯದಗುಂದಿ ತಪ್ಪಡಿ ವಾದಕರಾದ ಈರಣ್ಣ

ದೂಪದ ,ಸಂಘಡಿಗರಾದ ಗಂಗಪ್ಪ ಕಮ್ಮಾರ, ಹಾಗೂ ಶೂಲೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾದ ದೇವರಾಜ ಕಮತಗಿ,ಕಾಂಗ್ರೆಸ್ ಪಕ್ಷದ ಮುಖಂಡರಾದ ಮಹಾಂತೇಶ ಭದ್ರಣ್ಣವರ, ಶಂಕರ್ ಭಜಂತ್ರಿ ಉಪಸ್ಥಿತಿ ಇದ್ದರು.
