
ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಆವರಣದ ಗಾಂಧಿ ವೃತ್ತದ ಮುಂದೆ ಇಂದು ಹುನಗುಂದ ಮತಕ್ಷೇತ್ರದ ಶಾಸಕ ಶ್ರೀ ದೊಡ್ಡನಗೌಡ ಗೌಡರ ಅವರು ಜಲ ಜೀವನ ಮಿಷನ್ ಯೋಜನೆಯನ್ನು ಗುದ್ದಲಿ ಪೂಜೆ ಮಾಡುವ ಮೂಲಕ ಉದ್ಘಾಟಿಸಿದರು,ಒಟ್ಟು ೧೯೩೬ ಮನೆಗಳಿಗೆ ಅಂದಾಜು ೨೫೫ ಲಕ್ಷ ರೂಪಾಯಿ ಅನುದಾನದಲ್ಲಿ ಮನೆಗಳಿಗೆ ನಳ ಜೊಡನೆ ಮಾಡುವುದು ಈ ಯೋಜನೆ ಉದ್ದೇಶವಾಗಿದೆ. ಈ ಸಂಧರ್ಭದಲ್ಲಿ ಮಾಜಿ KHDC ನಿಗಮ ಮಂಡಳಿ ಅಧ್ಯಕ್ಷ ಶ್ರೀ ಆರ್,ಪಿ,ಕಲಬುರ್ಗಿ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಗ್ಯಾನವ್ವ ದುರಗಪ್ಪ ಮಾದರ ಹಾಗೂ ಉಪಾಧ್ಯಕ್ಷ ಶ್ರೀಮತಿ ಜ್ಯೋತಿ ಜಗದೇಶ ಪೂಜಾರ,ಹುನಗುಂದ ತಾಲೂಕಿನ ಭಾರತೀಯ ಜನತಾ ಪಾರ್ಟಿ OBC ಘಟಕದ ಅಧ್ಯಕ್ಷ ಶ್ರೀ ನಾಗೇಶ ಗಂಜಿಹಾಳ, ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಪಿಡ್ಡಪ್ಪ ಕುರಿ, VM ಬ್ಯಾಂಕ್ ನಿರ್ದೇಶಕ ರಾಜು ನಾಡಗೌಡರ ಗುದ್ದಲಿ ಪೂಜೆ ಮಾಡಿ ಉದ್ಘಾಟನೆಯಲ್ಲಿ ಪಾಲ್ಗೊಂಡರು,ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಶ್ರೀ ಹನಮಂತಗೌಡ ಬೇವೂರು, ಕಾರ್ಯಕರ್ತರು ಹಾಗೂ ಗ್ರಾಂ,ಪ,ಸದಸ್ಯರಾದ ಶ್ರೀ ಹನಮಂತ ಮಿಣಜಗಿ,ಶ್ರೀ ಗ್ಯಾನಪ್ಪ ಗೋನಾಳ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಲಜೀವನ ಯೋಜನೆ ಉದ್ಘಾಟನೆ ಮಾಡುತ್ತಿರುವ ಹುನಗುಂದ ಮತಕ್ಷೇತ್ರದ ಶಾಸಕ ಶ್ರೀ ದೊಡ್ಡನಗೌಡ ಪಾಟೀಲ,

ಜಲಜೀವನ ಯೋಜನೆ ಉದ್ಘಾಟನೆಯಲ್ಲಿ ಪಾಲ್ಗೊಂಡು ಶಾಸಕರೊಂದಿಗೆ ಅದಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಗ್ಯಾನವ್ವ ದುರಗಪ್ಪ ಮಾದರ,

ಜಲಜೀವನ ಯೋಜನೆ ಉದ್ಘಾಟನೆಯಲ್ಲಿ ಪಾಲ್ಗೊಂಡು ಶಾಸಕರೊಂದಿಗೆ ಅದಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶ್ರೀಮತಿ ಜ್ಯೋತಿ ಜ ಪೂಜಾರ

ಜಲಜೀವನ ಯೋಜನೆ ಉದ್ಘಾಟನೆಯಲ್ಲಿ ಪಾಲ್ಗೊಂಡು ಶಾಸಕರೊಂದಿಗೆ ಅದಕ್ಕೆ ಚಾಲನೆ ನೀಡಿದ KHDC ನಿಗಮ ಮಂಡಳಿ ಮಾಜಿ ಅಧ್ಯಕ್ಷ ಶ್ರೀ ಆರ್,ಪಿ,ಕಲಬುರಗಿ,

ಜಲಜೀವನ ಯೋಜನೆ ಉದ್ಘಾಟನೆಯಲ್ಲಿ ಪಾಲ್ಗೊಂಡು ಶಾಸಕರೊಂದಿಗೆ ಅದಕ್ಕೆ ಚಾಲನೆ ನೀಡಿದ ತಾಲೂಕಿನ ಭಾರತೀಯ ಜನತಾ ಪಾರ್ಟಿ OBC ಘಟಕದ ಅಧ್ಯಕ್ಷ ಶ್ರೀ ನಾಗೇಶ ಗಂಜಿಹಾಳ ಚಾಲನೆ ನೀಡಿದರು,

ಜಲಜೀವನ ಯೋಜನೆ ಉದ್ಘಾಟನೆಯಲ್ಲಿ ಪಾಲ್ಗೊಂಡು ಶಾಸಕರೊಂದಿಗೆ ಅದಕ್ಕೆ ಚಾಲನೆ ನೀಡಿದ ತಾಲೂಕಿನ ಭಾರತೀಯ ಜನತಾ ಪಾರ್ಟಿ ಪಕ್ಷದ ಯುವ ನಾಯಕ ಹಾಗೂ ಹುನಗುಂದ ವಿಜಯ ಮಹಾಂತೇಶ ಕೋ,ಆಫ್ ಬ್ಯಾಂಕ್ ನಿರ್ದೇಶಕ ಶ್ರೀ ರಾಜು ನಾಡಗೌಡ ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಶಾಸಕರಿಗೆ ಗ್ರಾಮದಲ್ಲಿ ಹಲವಾರು ರಸ್ತೆಗಳು ದುರಸ್ತಿಗೆ ಬಂದಿದ್ದು ಗ್ರಾಮಕ್ಕೆ ತಮ್ನ ಅನುದಾನದಲ್ಲಿ CC ರಸ್ತೆ ಮಾಡಲು ಅನುದಾನ ಬಿಡುಗಡೆ ಮಾಡಬೇಕೆಂದು ಪಿಡ್ಡಪ್ಪ ಕುರಿ ಹಾಗೂ ಸರ್ವ ಸದಸ್ಯರು ಮನವಿ ನೀಡಿದರು.