Breaking News

ಶ್ರೀ ಸಿದ್ದಿವಿನಾಯಕ ಪ್ರೊಡಕ್ಷನ್ ಅವರ “ಅನುಗ್ರಹ ಆಂಜನೇಯ ಸ್ವಾಮಿ,ಸಾಕ್ಷ್ಯೆಚಿತ್ರ ಬಿಡುಗಡೆ


ಧಾರವಾಡ : ಶ್ರೀ ಸಿದ್ಧಿವಿನಾಯಕ ಪ್ರೊಡಕ್ಷನ್ ಅವರ ಶ್ರೀ ಅನುಗ್ರಹ ಮಾರುತಿ ದೇವಸ್ಥಾನ ಟ್ರಸ್ಟ್ ಅರ್ಪಿಸಿದ ಕಾಮನಕಟ್ಟಿಯ ‘ಶ್ರೀ ಅನುಗ್ರಹ ಆಂಜನೇಯ ಸ್ವಾಮಿ’ ಸಾಕ್ಷ್ಯಚಿತ್ರ ಬಿಡುಗಡೆಯನ್ನು ಚಲನಚಿತ್ರ ನಟ, ನಿರ್ಮಾಪಕ ರೇಣುಕುಮಾರ ಸಂಸ್ಥಾನಮಠ ಮತ್ತು ಧರ್ಮವೀರ ಚಲನಚಿತ್ರದ ನಾಯಕನಟ,ನಿರ್ಮಾಪಕರು, ಕವಿವಿ ಸಿಂಡಿಕೇಟ್ ಸದಸ್ಯ ಡಾ.ಕಲ್ಮೇಶ್ ಹಾವೇರಿಪೇಟ್ ಅವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರೆ,ಶ್ರೀ ಗದಿಗೆಯ್ಯ ಹಿರೇಮಠರು ಲ್ಯಾಪಿಯಲ್ಲಿ ಬಟನ್ ಒತ್ತುವ ಮೂಲಕ ಸಾಕ್ಷ್ಯ ಚಿತ್ರವನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ರೇಣುಕುಮಾರ ಅವರು ಅನುಗ್ರಹ ಆಂಜನೇಯ ಸ್ವಾಮಿಯ ಅನುಗ್ರಹ ಎಲ್ಲರಿಗೂ ದೊರೆತು ಕಷ್ಟಗಳು ಕಳೆದು ಸುಖ ಸಮೃದ್ಧಿಗಳು ನೆಲೆಗೊಳ್ಳುವಂತಾಗಲಿ ಎಂದರು. ಡಾ.ಕಲ್ಮೇಶ್ ಅವರು ಮಾತನಾಡಿ ಈ ಸಾಕ್ಷ್ಯ ಚಿತ್ರದ ಮೂಲಕ ಕಾಮನಕಟ್ಟಿಯ ಆಂಜನೇಯಸ್ವಾಮಿ ಕುರಿತು ಭಕ್ತಾಧಿಗಳಿಗೆ ತಿಳಿದುಕೊಳ್ಳುವಂತಾಗಿದೆ. ಇದು ಜಾಗೃತ ಸ್ಥಳವಾಗಿದೆ ಎಂದರು. ಸಮಾರಂಭದಲ್ಲಿ ಪ್ರಾಧ್ಯಾಪಕ ಡಾ.ಪ್ರಭು ಗಂಜಿಹಾಳ ಸಂದರ್ಭೋಚಿತ ಮಾತನಾಡಿದರು.ನಿರ್ದೇಶಕ ಅರವಿಂದರು ೬೦೦ ವರ್ಷಗಳ ಇತಿಹಾಸ ಇರುವ ಈ ಆಂಜನೇಯ ದೇವಸ್ಥಾನ ಕುರಿತು ಸಾಕ್ಷ್ಯ ಚಿತ್ರ ನಿರ್ದೇಶನ ಭಾಗ್ಯ ನನಗೆ ಬಂದಿರುವುದು ನನ್ನ ಪಾಲಿನ ಸೌಭಾಗ್ಯ ಎಂದರು. ಈ ಸಂದರ್ಭದಲ್ಲಿ ರಂಗಭೂಮಿ,ಚಲನಚಿತ್ರ ಕಲಾವಿದ ರಾಜೀವಸಿಂಗ್ ಹಲವಾಯಿ, ಬಸವರಾಜ ಹೂಗಾರ, ಲಕ್ಷ್ಮೀ ಬಡಿಗೇರ, ವೀರಣ್ಣ ವಿಠಲಾಪೂರ, ಕಸ್ತೂರಮ್ಮಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಾಕ್ಷಚಿತ್ರಕ್ಕೆ ಸಾಹಿತ್ಯ ಮಧು ಜೋಷಿ, ಛಾಯಾಗ್ರಹಣ,ಸಂಕಲನ, ರಾಹುಲ್ ದತ್ತಪ್ರಸಾದ , ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ನಿರೂಪಣೆ ಮೇಘನಾ ಟಕ್ಕಳಕಿ,ಆಶಾ ಆಚಾರ್ಯ, ಶ್ರೀದೇವಿ ಆಚಾರ್ಯ ಸ್ತುತಿ ಹೇಳಿದ್ದಾರೆ. ಕಾರ್ಯನಿರ್ವಹಣೆ ಆನಂದ ಜೋಶಿ, ಮುರಳಿ ಮುಳಗುಂದ, ಸಹಕಾರ ಶ್ರೀಮತಿ ಲತಾ ಜೋಶಿ, ಶ್ರೀಮತಿ ಕೀರ್ತಿ ಅರವಿಂದ, ಸಹಾಯಕ ನಿರ್ದೇಶನ ಶ್ರೇಯಸ್ ಮತ್ತು ರಾಕೇಶ್ ಅವರದಿದ್ದು, ಮೂರು ಕನ್ನಡ ಚಲನಚಿತ್ರಗಳನ್ನು ಮತ್ತು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಯುವ ಪ್ರತಿಭಾವಂತ ನಿರ್ದೇಶಕ ಅರವಿಂದ ಮುಳಗುಂದ ಅವರು ನಿರ್ದೇಶನ ಮಾಡಿದ್ದು, ಬಸವರಾಜ ಹೂಗಾರ, ಮಹಾರುದ್ರ ಕಿತ್ತೂರ ನಿರ್ಮಿಸಿದ್ದಾರೆ.

About vijay_shankar

Check Also

ಎ, ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡ ಚಲನಚಿತ್ರ ಚಿತ್ರೀಕರಣ ಮುಕ್ತಾಯ

Veryಬೆಂಗಳೂರ : ಸ್ನೇಹಾಲಯಂ ಕ್ರಿಯೇಷನ್ಸ್ ಸಮರ್ಪಿಸಿ ಎ.ಎ.ನ್.ಆರ್ ಪಿಕ್ಚರ್ಸ್ ಬ್ಯಾನರ್ಅಡಿಯಲ್ಲಿ ಎ. ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡಚಲನಚಿತ್ರದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.