
ಅಮೀನಗಡ : ಇಂದು ನಗರದ ಪ್ರವಾಸಿ ಮಂದಿರದಲ್ಲಿ ಕೆಲೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಗ್ರಾಮದ ಶ್ರೀ ವಜೀರಪ್ಪ ಕೆ ಪೂಜಾರ ಅವರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮೀಬಾಯಿ ಆಸಂಗಿ ಅವರು ಕಾಂಗ್ರೆಸ್ ನ ಬೆಂಬಲಿತ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದರು . ಇಂದು ಅಮೀನಗಡದ

ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ,ಬಿ,ವಿಜಯಶಂಕರ್, ನಗರದ ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀ ತುಕಾರಾಮ ಪವಾರ್ ,ಉಧ್ಯಮಿ ಶ್ರೀ ಎನ್,ಎಸ್ ಕಂಚಿ, ಪತ್ರಕರ್ತರರಾದ ಶ್ರೀ ಕಿರಣ ಕಾಳಗಿ ಹಾಗೂ ರಮೇಶ ಚವ್ಹಾಣ, ಶ್ರೀ ಬಸವರಾಜ್ ಕಾಳಗಿ, ಶ್ರೀ ಶರಣಯ್ಯ ಹಿರೇಮಠ ಅವರು ಸೇರಿ ಗೌರವ ಸನ್ಮಾನ ಮಾಡಿ ಸಿಹಿ ಹಂಚಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷರು ನನ್ನ ಗೆಲುವಿಗೆ ಕಾರಣಿ ಭೂತರಾದ ಸಂಘದ ಎಲ್ಲಾ ಸದಸ್ಯರಿಗೆ ಹಾಗೂ ಹಿರಿಯರಿಗೆ ನನ್ನ ಕೃತಜ್ಞತೆಗಳು ಈ ಸಂಘದ ಏಳಿಗೆಗಾಗಿ ಉತ್ತಮ ಕೆಲಸ ಮಾಡುತ್ತೇನೆ. ಹಿರಿಯರ ಮಾರ್ಗದಲ್ಲಿ ಸಂಘದ ಅಭಿವೃದ್ಧಿಗೆ ಎಲ್ಲರೂ ಕೈ ಜೊಡಿಸುತ್ತಾರೆ, ಜಿಲ್ಲೆಯಲ್ಲಿ ಇದೊಂದು ಉತ್ತಮ ಸಂಘವಾಗಿ ಬೆಳೆಯಲಿದೆ, ಎಂದರು.