
ಅಮೀನಗಡ: ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ದೊಡ್ಡನಗೌಡ ಜಿ ಪಾಟೀಲ ಅವರ ೬೪ ನೇ ಹುಟ್ಟು ಹಬ್ಬವನ್ನು ಶೂಲೇಭಾವಿಯ ಪುರಾತನ ಐತಿಹಾಸಿಕ ಶಿವ ದೇವಾಲಯದ ಆವರಣವನ್ನು ಸ್ವಚ್ಚ ಗೊಳಿಸಿ ಅಲ್ಲಿರುವ ಗಿಡಗಳಿಗೆ ನೀರು ಹಾಕಿ ಸರಳವಾಗಿ ಶಾಸಕರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಇಂದು ಅವರ ಶ್ರೇಯಾ ಅಭಿವೃದ್ದಿಗಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ಅವರಿಗೆ ಶುಭ ಕೋರಿ ಆ ಭಗವಂತ ಇನ್ನೂ ನೂರಾರು ಕಾಲ ಆಯ್ಯಷ,ಆರೋಗ್ಯವನ್ನು ದಯಪಾಲಿಸಿ ಮತ್ತೆ ಅಧಿಕಾರವನ್ನು ಹಿಡಿಯುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಸ್ವಚ್ಚತಾ ಕಾರ್ಯದಲ್ಲಿ ಪಾಲದಗೊಂಡ ಕಾರ್ಯಕರ್ತರು .
ಈ ಸಂದರ್ಭದಲ್ಲಿ ಹುನಗುಂದ ತಾಲೂಕಿನ OBC ಘಟಕದ ಅಧ್ಯಕ್ಷ ಶ್ರೀ ನಾಗೇಶ ಗಂಜಿಹಾಳ,ಶ್ರೀ ರಮೇಶ ಮಡಿವಾಳರ ಶ್ರೀ ಆನಂದ ಮೊಕಾಶಿ,ಶ್ರೀ ಹನಮಂತ ಹಿರೇಮನಿ, ಶ್ರೀ ಯಮನೂರ ಹುಲ್ಯಾಳ ಶ್ರೀ ಯಮನೂರ ಬಾರಕೇರ ,ಮುಂತಾದ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.