
ಗೋವಾ: (ಪಣಜಿ) ಇಂದು ಗೋವಾದ ಪಣಜಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡು ಕಸಾಪ ನ ರಾಜ್ಯಾಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಕರ್ನಾಟಕದ ಕಸಾಪ ರಾಜ್ಯಾಧ್ಯಕ್ಷರಾದ ನಾಡೋಜ ಶ್ರೀ ಡಾ: ಮಹೇಶ ಜೋಶಿ ಅವರು ಈ ಕಾರ್ಯಕ್ರಮ ಉದ್ಘಾಟನೆ ಮಾಡಿ ಪದಾಧಿಕಾರಿಗಳಿಗೆ ಅಧಿಕೃತ ಪ್ರಮಾಣ ಪತ್ರ ನೀಡಿ ಎಲ್ಲರೂ ಗಡಿನಾಡಲ್ಲಿ ಕನ್ನಡದ ಅಳಿವು ಹಾಗೂ ಉಳಿವಿಗಾಗಿ ಹಾಗೂ ಕನ್ನಡಿಗರ ಕಲೆ ಹಾಗೂ ನೆಲೆ ನಿಲ್ಲಲು ಮಕ್ಕಳ ಶೈಕ್ಷಣಿಕ ಹಕ್ಕು ಅವರ ಭವಿಷ್ಯದ ರಕ್ಷಣೆ ಮಾಡಲು ಇಲ್ಲಿ ಕನ್ನಡದ ಕಂಪಣ್ಣ ಬಿರಬೇಕು ೩ ಲಕ್ಷ ಜನ ಕನ್ನಡಿಗರು ಇಲ್ಲಿ ನೆಲೆಸಿದ್ದಾರೆ. ಇವರಲ್ಲಿ ೧ ಲಕ್ಷ ಜನ ಕಸಾಪ ಸದಸ್ಯರಾಗಿ ತಮ್ಮೆಲ್ಲರಿಗಾಗಿ ಕನ್ನಡ ಭವಣ ನಿರ್ಮಾಣ ಮಾಡಬೇಕು. ಈ ಭವಣದ ನಿರ್ಮಾಣಕೆ

ನನ್ನ ಹಾಗೂ ವಯಕ್ತಿಕವಾಗಿ ನಾನು ಸಹಕಾರ ನೀಡುತ್ತೇನೆ, ನಮ್ಮ ಕರ್ನಾಟಕ ಸರಕಾರದಿಂದ ಹೆಚ್ಚಿನ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ಈ ಅದ್ದೂರಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತಾಡಿದ ಪ,ಪೂ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಉಕ್ಕೇರಿ ಮಠ ಇವರು ನಾವು ಕೆಚ್ಚೆದೆಯ ಕನ್ನಡಿಗರು ಈ ಸರಕಾರಕ್ಕೆ ಪ್ರತಿ ಬಾರಿ ಜಾಗ ಕೊಡಿ,ಅನುದಾನ ಕೊಡಿ ಎಂದು ಕೇಳುವ ಬದಲು ನಾನೇ ಜೊಳಿಗೆ ಒಡ್ಡುತ್ತೇನೆ ನಾಳೆ ಹಣ ಹೊಂದಿಸಿ ಕನ್ನಡ ಭವಣ ನಿರ್ಮಾಣ ಮಾಡುವ ಸಂಕಲ್ಪ ಪ್ರತಿಯೊಬ್ಬ ಕನ್ನಡಿಗ ಹೊಂದಬೇಕು ಎಂದರು.
ನೂತನ ರಾಜ್ಯ ಘಟಕದ ಅಧ್ಯಕ್ಷರಾದ ಸಿದ್ದಣ್ಣ ಮೇಟಿ ಅವರು ನಾನು ೩೦ ವರ್ಷಗಳಿಂದ ಈ ಗೋವಾದಲ್ಲಿ ಒಬ್ಬ ಕೂಲಿ ಕಾರ್ಮಿಕನಾಗಿ ಗುತ್ತಿಗೆದಾರನಾಗಿ ಸೇವೆ ಮಾಡಿ ಇಲ್ಲಿನ ಕನ್ನಡಿಗರಿಗಾಗಿ ಸೇವೆ ಮಾಡಿದ ಫಲದಿಂದ ಇಂದು ನನಗೆ ಬಹಳ ದೊಡ್ಡ ಜವಾಬ್ದಾರಿಯನ್ನು ನಾಡೋಜ ಡಾ: ಮಹೇಶ ಜೋಷಿ ಅವರು ವಹಿಸಿದ್ದಾರೆ, ಅವರ ಮಾರ್ಗದರ್ಶನದಲ್ಲಿ ನಾವು ಗೋವಾದ ೩ ಲಕ್ಷ ಕನ್ನಡಿಗರ ಒಳಿತಿಗಾಗಿ ಉತ್ತಮ ಕೆಲಸ ಮಾಡುತ್ತೇವೆ ಎಂದರು,ಪೂಜ್ಯರು ಜೋಳಿಗೆ ಹಿಡಿದರೆ ನನ್ನಿಂದ ೧೦ ಲಕ್ಷ ರೂಪಾಯಿ ಈ ಕನ್ನಡ ಭವಣದ ನಿರ್ಮಾಣಕ್ಕೆ ನಾನು ಸಹಾಯ ಮಾಡುತ್ತೇನೆ ಎಂದರು.
ಈ ಕಸಾಪ ಅದ್ದೂರಿ ಸಮಾರಂಭದಲ್ಲಿ ಅನೇಕ ಸಾಹಿತಿಗಳಿಗೆ ಸನ್ಮಾನ ಮಾಡಿ ಬಡ ಯುವತಿಗೆ ಶಿಕ್ಷಣಕ್ಕಾಗಿ ೧೦,೦೦೦ ಸಾವಿರ ರೂಪಾಯಿ ಚಕ್ಕ್ ನೀಡಿ ಸಿದ್ದಣ್ಣ ಮೇಟಿ ಅವರು ಮಾನವಿಯತೆ ಮೆರೆದರು.

ವಿಜಯಪೂರ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ನೀಲಮ್ಮ ಎಸ್ ಮೇಟಿ ಪೂಜ್ಯರಿಂದ & ಡಾ: ಮಹೇಶ ಜೋಶಿ ಅವರಿಂದ ಚಕ್ ನೀಡಲಾಯಿತು. ಗೋವಾದ ನೂತನ ಕಸಾಪ ನ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಈ ಕಸಾಪ ಪದಗ್ರಹಣ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಪ,ಪೂ,ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು,ಉಳಿದಂತೆ ಡಾ: ಶಶಿಧರ ನರೇಂದ್ರ, ಡಾ: ಪ್ರಕಾಶ ಗರುಡ ಡಾ: ಕೃಷ್ಣ ಕಟ್ಟಿ, ಶ್ರೀ ಹರ್ಷ ಡಂಬಳ,ಶ್ರೀ ಪ್ರಕಾಶ ಉಡಕೇರಿ,ಶ್ರೀ ಶ್ರೀ ಸಮೀರ ಜೋಷಿ,ಶ್ರೀ ಮಲ್ಲಿಕಾರ್ಜುನ ಬದಾಮಿ,ಶ್ರೀ ಹನಮಂತ ರೆಡ್ಡಿ,ಶ್ರೀ ಮಹೇಶಬಾಬು ಸುರ್ವೆ, ಈ ಎಲ್ಲಾ ಗೌರವಾನ್ವಿತರು ಉಪಸ್ಥಿತಿ ವಹಿಸಿದ್ದರು.
ಮಧ್ಯಾಹ್ನ ೨:೩೦ ಘಂಟಗೆ ” ಬೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ” . ಗೋವಾ ಸಾಹಿತ್ಯ ಪರಿಷತ್ತಿನ ಕಲಾವಿದರಿಂದ ಬೇಂದ್ರೆ ಕಾವ್ಯ ವಿಹಾರ,ಕವಿಗೋಷ್ಠಿ ನಡೆಯಿತು, ಈ ಕಾರ್ಯಕ್ರಮದ ಅಧ್ಯಕ್ಷೆಯನ್ನು ಶ್ರೀ ಪ್ರಕಾಶ ಉಡಕೇರಿ ವಹಿಸಿದ್ದರು. ಉಪನ್ಯಾಸಕರಾಗಿ ಡಾ: ಶಶಿಧರ ನರೇಂದ್ರ ಅವರು ” ಶ್ರಾವಣ ವೈಭವ ” ವಿಷಯ ಬೇಂದ್ರೆ ಕಾವ್ಯದಲ್ಲಿ ಪ್ರಕೃತಿ ಮತ್ತು ಸೌಂದರ್ಯ ವಿಷಯದ ಕುರಿತು ಮಾತನಾಡಿದರು. ಡಾ: ಅರವಿಂದ ಯಾಳಗಿ “ಕಾವ್ಯಾನುಭ,


ವಿಷಯ ಅಂಬಿಕಾತನಯದತ್ತ ಕವಿಕಾವ್ಯ-ಕಲ್ಪನೆ ವಿಷಯದ ಮೇಲೆ ಮಾತನಾಡಿದರು. ಡಾ: ಪ್ರಕಾಶ ಗರುಡ ” ರಂಗದರ್ಶನ ” ವಿಷಯ ಬೇಂದ್ರೆಯವರ ನಾಟಕಗಳು ,ವಿಷಯ ಕುರಿತು ಮಾತನಾಡಿದರು. ಗೋಷ್ಠಿ ೨ ಶ್ರೀ ಶಮೀರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾಗಿ ಡಾ: ಕೃಷ್ಣಾ ಕಟ್ಟಿ ” ದತ್ತ ದರ್ಶನ ” ಬೇಂದ್ರೆ ಕಾವ್ಯದಲ್ಲಿ ಅನುಭಾವದ ನೆಕೆಗಳು” ವಿಷಯ ಕುರಿತು ಮಾತನಾಡಿದರು. ಕೊನೆಯದಾಗಿ ಶ್ರೀ ಹರ್ಷಾ ಡಂಬಳ “ಭಾಷಾ ಬಾಂಧವ್ಯ” ಕನ್ನಡ- ಮರಾಠಿ ಕಾವ್ಯಾನುಸಂಧಾನ ವಿಷಯ ಕುರಿತು ಮಾತನಾಡಿದರು. ಬೆಳಗಿನ ೧೧ ಗಂಟೆಯಿಂದ ಅಚ್ಚುಕಚ್ಚಾಗಿ ಕಾರ್ಯಕ್ರಮ ನಡೆಯಿತು. ಶ್ರೀಮತಿ ಕಾಂಚನಾ ಜೋಶಿ ಹಾಗೂ ಸಂಗಡಿಗರು ಗಾಯನ ಹಾಡಿ ಎಲ್ಲರನ್ನು ರಂಜಿಸಿದರು.
ಈ ಸಮಾರಂಭ ಕಸಾಪ ರಾಜ್ಯಸಮಿತಿ ನೂತನ ಅಧ್ಯಕ್ಷರಾದ ಶ್ರೀ ಸಿದ್ದಣ್ಣ ಎಸ್ ಮೇಟಿ ,ಗೌರವ ಕಾರ್ಯದರ್ಶಿಗಳಾಗಿ ಶ್ರೀ ನಾಗರಾಜ್ ಜಿ ಗೋಂದಕರ ಹಾಗೂ ಶ್ರೀ ಪ್ರಕಾಶ ಕೃಷ್ಣ ಭಟ್, ಗೌರವ ಕೋಶಾಧ್ಯಕ್ಷರಾಗಿ ಶ್ರೀ ಪುಟ್ಟಸ್ವಾಮಿ ಗುಡಿಕಾರ,ಮಹಿಳಾ ಪ್ರತಿನಿಧಿಗಳಾಗಿ ಶ್ರೀಮತಿ ರೇಣುಕಾ ದಿನ್ನಿ ಶ್ರೀಮತಿ ಕಾಂಚನಾ ಜೋಶಿ ಪ,ಜಾ,ಪ್ರತಿನಿಧಿಯಾಗಿ ಶ್ರೀ ತವರಪ್ಪ ಸಿ ಲಮಾಣಿ ಹಾಗೂ ಶ್ರೀಶೈಲ ಛಲವಾದಿ ಪ,ಪ,ಪ್ರತಿನಿಧಿ ಶ್ರೀ ಕೆ.ಜಮಾದಾರ್, ಸಂ,ಸಂ,ಪ್ರತಿನಿಧಿ ಶ್ರೀ ಪಡದಯ್ಯ ಹಿರೇಮಠ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬದಾಮಿ ಅವರು ಎಲ್ಲರೂ ಲವಲವಿಕೆಯಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.








ಅನೇಕ ಜನ ಗೌರವಾನ್ವಿತ ಸಾಹಿತಿಗಳಿಗೆ ,ಕವಿಗಳಿಗೆ ಪತ್ರತರ್ಕರಿಗೆ ಸನ್ಮಾನಿಸಿ ಗೌರವಿಸಿದರು.