ಸಿದ್ದನಕೊಳ್ಳ : ‘ಏಕಾಂಗಿ ನಾನಲ್ಲ’ ಆಲ್ಬಂ ಸಾಂಗ್ ಬಿಡುಗಡೆ* ಸಿದ್ಧನಕೊಳ್ಳ: ಎಸ್‌ಎನ್ ಜಾಲ್ಸ್ ಕ್ರಿಯೇಟಿವ್ ಸ್ಟುಡಿಯೋದ ಸಿದ್ದಾರ್ಥ್ ಜಾಲಿಹಾಳ ಅವರು ಹೊಸ ಹೊಸ ಆಲ್ಬಮ್ ಹಾಡುಗಳನ್ನು ಮತ್ತು ಕಿರು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಮೊದಲನೇ ಹಾಡು ‘ಏ ವಿಧಿಯೇ’ ಜನರ ಮನ ಸೆಳೆದಿದೆ. ಇದೀಗ ‘ಏಕಾಂಗಿ ನಾನಲ್ಲ’ ಎಂಬ ಆಲ್ಬಮ್ ಸಾಂಗ್‌ನ್ನು ಹುಬ್ಬಳ್ಳಿ-ಧಾರವಾಡ ಹಾಗೂ ಮಹಾರಾಷ್ಟ್ರದ ನಾನಾ ಸ್ಥಳಗಳಲ್ಲಿ ಚಿತ್ರೀಕರಿಸಿರುವ ಈ ಹಾಡು ಅತ್ಯಮೂಲ್ಯವಾದ ಸ್ನೇಹ ಮತ್ತು ಪ್ರೀತಿ ನಮ್ಮೊಟ್ಟಿಗೆ ಇದ್ದಾಗ ನಾವೆಲ್ಲ ಹೇಗೆ ಸಂತೋಷವಾಗಿರುತ್ತೇವೆ, ಅದೇ ಅಕಸ್ಮಾತ್ ಸ್ನೇಹ ಮತ್ತು ಪ್ರೀತಿ ಕೊಂಡಿ ಕಳಚಿಕೊಂಡಾಗ ಯಾವ ರೀತಿಯ ನೋವು, ಸಂಕಟ, ಪಶ್ಚಾತ್ತಾಪವನ್ನು ಅನುಭವಿಸುತ್ತೇವೆ ಎಂಬುದನ್ನು ಇದರಲ್ಲಿ ತೋರಿಸಲಾಗಿದೆ ಎಲ್ಲರೂ ಯುವ ಕಲಾವಿದ ಸಿದ್ಧಾರ್ಥ ಅವರಿಗೆ ಯೂಟೂಬ್ ನಲ್ಲಿ ಹಾಡು ನೋಡಿ,ಹೆಚ್ಚು ಹೆಚ್ಚು ಶೇರ್ ಮಾಡಿ,ಸಬ್ ಸ್ಕ್ರೈಬ್ ಮಾಡುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಸಿದ್ಧನಕೊಳ್ಳದ ಡಾ.ಶಿವಕುಮಾರ ಮಹಾಸ್ವಾಮಿಗಳು ಹೇಳಿದರು. ಅವರು ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಸುಕ್ಷೇತ್ರ ಸಿದ್ಧನಕೊಳ್ಳದ ಸಿದ್ಧಪ್ಪಜ್ಜನ ಮಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ “ಏಕಾಂಗಿ ನಾನಲ್ಲ ” ಆಲ್ಬಂ ಸಾಂಗ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.
ಈ ಹಾಡಿನ ಮುಖ್ಯ ಪಾತ್ರದಲ್ಲಿ ಸಿದ್ಧಾರ್ಥ್ ಜಾಲಿಹಾಳ್,ದೇವಿಕಾ, ರಾಘವೇಂದ್ರ ಆರ್ ಜೆ ಮುಂತಾದವರು ನಟಿಸಿದ್ದು, ಎಚ್ ವಾಣಿಶ್ರೀ ಅವರು ಈ ಹಾಡು ರಚಿಸಿದ್ದಾರೆ, ಚೇತನ್ ಪಾವಟೆ ಅವರು ಈ ಹಾಡನ್ನು ತುಂಬಾ ಸುಂದರವಾಗಿ ಸಂಯೋಜಿಸಿ ಹಾಡಿದ್ದಾರೆ. ಸುಭಾಷ್ ಅವರು ಈ ಹಾಡಿಗೆ ಸ್ಕ್ರೀನ್ ಪ್ಲೇ ಮತ್ತು ನಿರ್ದೇಶನವನ್ನು ಮಾಡಿದ್ದಾರೆ, ಸಾಂಗ್ ಕೊರಿಯೋಗ್ರಾಪಿಯನ್ನು ರಾಘವೇಂದ್ರ ಆರ್ ಜೆ ಮಾಡಿದ್ದಾರೆ. ಇದರ ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ ನಿರ್ವಹಿಸಿದ್ದಾರೆ. ರಾಜೇಶ್ ಪವಾರ್ ಅವರ ಕ್ಯಾಮೆರಾ ವರ್ಕ್ ಚೆನ್ನಾಗಿ ಮೂಡಿ ಬಂದಿದೆ ಹೀಗಾಗಿ ಯುವ ಪೀಳಿಗೆಯ ಮನಸನ್ನು ಸೆಳೆಯುತ್ತದೆ. ಶ್ರೀಗಳು ನಮಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ ಎಂದು ನಿರ್ಮಾಪಕ ಸಿದ್ಧಾರ್ಥ ಜಾಲಿಹಾಳ ಹೇಳಿದರು. ಇದೇ ಸಂದರ್ಭದಲ್ಲಿ ಹಾಡನ್ನು ಎಸ್ ಎನ್ ಜಾಲ್ಸ್ ಕ್ರಿಯೇಟಿವ್ ಯೂಟೂಬ್ ಚಾನೆಲ್ ಗೆ ಬಿಡುಗಡೆ ಮಾಡಲಾಯಿತು. ಸಿದ್ಧಾರ್ಥ ಜಾಲಿಹಾಳ, ಅಮೀತಕುಮಾರ ಕಲ್ಯಾಣ ಶೆಟ್ಟರ್ ,ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ್,ರಾಘವೇಂದ್ರ ಆರ್.ಜೆ,ನಾಗರಾಜ ಕಲ್ಗುಡಿ ಮತ್ತು ಶ್ರೀಮಠದ ಸದ್ಭಕ್ತರು ಪಾಲ್ಗೊಂಡಿದ್ದರು.