ದಾವಣಗೆರೆ :ಜಿಲ್ಲೆಯಲ್ಲಿ ಬುಧವಾರ ಕೋವಿಡ್ ಸೋಂಕಿಗೆ ಗರ್ಭಿಣಿ ಮಹಿಳೆ ಒಳಗೊಂಡಂತೆ ಒಟ್ಟು ಆರು ಜನರು ಮೃತಪಟ್ಟಿದ್ದಾರೆ. ಆರು ಜನರ ಸಾವಿನಿಂದ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 68 ಆಗಿದೆ.

ಕೋವಿಡ್ ನಿಂದ 30 ವರ್ಷದ ಗರ್ಭಿಣಿ (ರೋಗಿ ನಂಬರ್ 109884), ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 75 ವರ್ಷದ ವೃದ್ಧ (ರೋಗಿ ನಂಬರ್ 142190), 62 ವರ್ಷದ ವೃದ್ಧ (ರೋಗಿ ನಂಬರ್ 138187), 46 ವರ್ಷದ ವ್ಯಕ್ತಿ (ರೋಗಿ ನಂಬರ್ 113193), 49 ವರ್ಷದ ವ್ಯಕ್ತಿ (ರೋಗಿ ನಂಬರ್ 132189), 38 ವರ್ಷದ ವ್ಯಕ್ತಿ (ರೋಗಿ ನಂಬರ್ 128602) ಮೃತಪಟ್ಟವರು.
ದಾವಣಗೆರೆಯಲ್ಲಿ ಒಂದೇ ದಿನ 224 ಜನರಲ್ಲಿ ಹೊಸದಾಗಿ ಕೋವಿಡ್ ಸೋಂಕು ದೃಢಪಟ್ಟಿದೆ. ಕೋವಿಡ್ ನಿಂದ ಗುಣಮುಖರಾದ 91 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ 1027ಸಕ್ರಿಯ ಪ್ರಕರಣಗಳಿವೆ.