ಬಾಗಲಕೋಟ: ಕರ್ನಾಟಕ ಆರ್ಕೆಸ್ಟ್ರಾ ಮಾಲೀಕರು ಹಾಗೂ ಕಲಾವಿದರ ಕ್ಷೇಮಾಭಿವೃದ್ಧಿ ಸಂಘ ಘಟಕ ಬಾಗಲಕೋಟೆ ಇವರ ಸಾರಥ್ಯದಲ್ಲಿ ಇಂದು ದಿವಂಗತ ,ಗಾನ ಕೋಗಿಲೆ, ಸ್ವರ ಸಾಮ್ರಾಟ ,ಎಸ್,ಬಿ,ಬಾಲಸುಬ್ರಹ್ಮಣ್ಯಂ ಅವರ ಭಾವ ಪೂರ್ಣ ಶ್ರದ್ಧಾಂಜಲಿಯನ್ನು ಜಿಲ್ಲಾ ಅಧ್ಯಕ್ಷರು ಜೂನಿಯರ್ ಆನಂದ್ ರಾಂಪುರ್ ಹಾಗೂ ಹೀರಾ ಅತ್ತಾರ್ ಮಲ್ಲಿಕ್ ಕಲಾದಗಿ ಅಬ್ದುಲ್ ಅಗಸಿ ಮನಿ ಲಕ್ಷ್ಮಣ್ ಆಸಂಗಿ ಸಂದೀಪ್ ಪವರ್ ಹಾಗೂ

ವೀರಯೋಧರು ಭೀಮಶಿ ವಡ್ಡರ್ ಹಾಗೂ ಮಹಿಳಾ ಕೀರ್ತಿ ಹಾಗೂ ವೀಣಾ ಗಾಯಕಿಯರು ಸೇರಿ ಕನ್ನಡದ ಗಾನಕೋಗಿಲೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಬಾಗಲಕೋಟೆ ಜಿಲ್ಲೆಯ ಕೆರೂರು ಪಟ್ಟಣದಲ್ಲಿ ನಡೆಯಿತು, ಭಾವಪೂರ್ಣ ಶ್ರದ್ಧಾ ಅಂಜಲಿ ಅದರ ಜೊತೆಗೆ ಪುಷ್ಪಾರ್ಚನೆ ಮಾಡಿ ಒಂದು ನಿಮಿಷಗಳ ಕಾಲ ಮೌನಾಚರಣೆ ಆಚರಿಸಲಾಯಿತು,

ಅಪಾರ ಕಲಾವಿದರ ನೆರಳಾಗಿದ್ದ ಎಸ್,ಪಿ,ಅವರು 40,ಸಾವಿರ ವಿವಿಧ ಭಾಷೆ ಗಳಲಿ ಹಾಡಿ ದಾಖಲೆ ಮಾಡಿದ್ದಾರೆ ಇಂತಹ ಗಾಯಕರು ಇನ್ನೂ ಯಾವತ್ತು ಹುಟ್ಟೊಕ್ಕೆ ಸಾಧ್ಯವಿಲ್ಲ, ಅವರ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಿಲ್ಲಾ ಅಧ್ಯಕ್ಷ ಆನಂದ ಅವರು ಕಂಬನಿ ಮಿಡಿದು, ಅವರ ಭಾವ ಚಿತ್ರಕ್ಕೆ ಪುಷ್ಪಗಳನ ಹಾಕಿ ನೂರೊಂದು ನೆನಪು ಗೀತೆ ಹಾಡುವ ಮೂಲಕ ನುಡಿ ನಮನ ಸಲ್ಲಿಸಿದರು.