ಬೆಂಗಳೂರು: ಸೈಬರ್ ಕ್ರೈಂ ಬೇಧಿಸುವಲ್ಲಿ ಪೊಲೀಸರು ದಕ್ಷತೆ ಮೆರೆದಿದ್ದು, ಡ್ರಗ್ಸ್ ಜಾಲ ಹೊರಗೆಳೆಯುವಲ್ಲಿ ಅಧಿಕಾರಿಗಳು ಉತ್ತಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮುಖ್ಯಮಂತ್ರಿ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಗೊಂದು ಎಫ್.ಎಸ್.ಎಲ್ ತೆರೆಯಲು ಚಿಂತನೆ ನಡೆದಿದೆ. ಕಾಲೇಜು ಹೆಣ್ಣು ಮಕ್ಕಳಿಗೆ ಸೆಲ್ಫ್ ಡಿಫೆನ್ಸ್ ತರಬೇತಿ ಕೊಡಲಿದ್ದೇವೆ. ಎಂತಹ ಸವಾಲನ್ನೂ ನಮ್ಮ ಪೊಲೀಸರು ಮೆಟ್ಟಿ ನಿಲ್ತಾರೆ. ಕ್ಲಿಷ್ಟ ಪರಿಸ್ಥಿತಿಯಲ್ಲೂ ಚಾಣಾಕ್ಷತೆ ಮೆರೆದಿದ್ದಾರೆ.
ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲ ಕಡೆಯಿಂದ ಟೀಕೆ ಟಿಪ್ಪಣಿ ಬರ್ತಿದೆ. ನಮ್ಮ ಗುರಿ ದಾರಿ ತಪ್ಪಿಸುವ ಯತ್ನಗಳು ನಡೀತಿವೆ. ಆದ್ರೆ ತಾಳ್ಮೆಯಿಂದ ಟೀಕೆ ಟಿಪ್ಪಣಿಗಳನ್ನು ಸಹಿಸಿ ಉತ್ತರ ಕೊಡುವ ವಿಶ್ವಾಸ ಇದೆ ಎಂದು ಹೇಳಿದರು.