
ಬಾಗಲಕೋಟೆ : ಇಂದು ಶಿವಶರಣ ಶ್ರೀ ಬಸವಣ್ಣನವರ ಐಕ್ಯತಾನವಾದ ಸುಕ್ಷೇತ್ರ ಕೂಡಲಸಂಗಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘ (ರಿ) ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಸಂಘದ ಎಲ್ಲಾ ಮಾಧ್ಯಮ ಸ್ನೇಹಿತರಿಗಾಗಿ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರ ಹಾಗೂ ಅಧ್ಯಾಯನ ಪ್ರವಾಸ ಶಿಬಿರವನ್ನು ಹಮ್ಮಿಕೊಂಡಿತ್ತು.

ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಯಿಂದ ೪೫ ಕ್ಕೂ ಹೆಚ್ಚು ಜನ ಪತ್ರಕರ್ತರು ಭಾಗ ವಹಿಸಿದ್ದರು. ಈ ಅಧ್ಯಾಯನ ಪ್ರವಾಸ ಶಿಬಿರವು ಮೊದಲೆ ನಿಗದಿ ಮಾಡಿದಂತೆ ಐಹೊಳೆ, ಪಟ್ಟದಕಲ್ಲು, ಕಟಾಪೂರ ಶಿರಡಿ ಸಾಯಿನಾಥ, ಹುಲಗಿಕೊಳ್ಳ ( B,N,ಜಾಲಿಹಾಳ)ಮಹಾಕೂಟ ಬದಾಮಿ, ಪ್ರವಾಸ ಕೈಗೊಳ್ಳಲಾಗಿತ್ತು, ಈ ಶಿಬಿರವನ್ನು ಸಂಘದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಮುರಗೇಶ ಶಿವಪೂಜಿ ಅವರು ಚಾಲನೆ ನೀಡಿದರು.

ಕೂಡಲಸಂಗಮದಿಂದ ಆರಂಭವಾದ ಈ ಅಧ್ಯಾಯನ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಪ್ರವಾಸದ ಆರಂಭದಿಂದ ಕೊನೆಯವರೆಗೂ ಗ್ರಾಮೀಣ ಪತ್ರಕರ್ತರ ಇಂದಿನ ಸ್ಥಿತಿ-ಗತಿ ಕುರಿತು ಸುರ್ಧಿವಾಗಿ ಬಸ್ಸಿನಲ್ಲಿ ಚರ್ಚಿಸಲಾಯಿತು, ನಂತರ ರಾಜ್ಯ ಅಧ್ಯಕ್ಷರು ಎಲ್ಲರ ಮನರಂಜನೆಗಾಗಿ ಹಳೆಯ ಕರೋಕೆ ಗೀತೆ ಹಾಡಿ ಎಲ್ಲರನ್ನು ರಂಜಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಸುದೇಶಕುಮಾರ ಅವರು ಹಾಗೂ ನಾಗರಾಜ ಅವರು ಮಾಧ್ಯಮ ಮಿತ್ರರಿಗೆ ಅನೇಕ ಸಲಹೆಗಳನ್ನು, ಮಾಹಿತಿಗಳನ್ನು, ನೀಡಿದರು, ಮಹಾಕೂಟದಲ್ಲಿ 1:30 ಕ್ಕೆ ಕಾರ್ಯಾಗಾರ ಆರಂಭವಾಗಿ ಇಂದಿನ ಪತ್ರಕರ್ತರ ಸ್ಥಿತಿ ಕುರಿತು ಸುದೇಶಕುಮಾರ ಹಾಗೂ ವಿಜಯಶಂಕರ್ ಅವರು ಶಿಬಿರದಲ್ಲಿ ತಮ್ಮ ಅನುಭವದ ನುಡಿ ಹಂಚಿಕೊಂಡರು.

ಈ ಸಂದರ್ಭದಲ್ಲಿ ಪಂಚಾಯತ ರಾಜ್ಯ ಗ್ರಾಮೀಣ ವಿಭಾಗದ ಮಾಧ್ಯಮ ಸಲಹೆಗಾರಾದ ನಾಗರಾಜ್ ಅವರಿಗೆ ಗೌರವ ಸನ್ಮಾನವನ್ನು ರಾಜ್ಯ ಘಟಕ ಹಾಗೂ ಕೊಪ್ಪಳ ಘಟಕದಿಂದ ಮಾಡಲಾಯಿತು. ಮತ್ತು ಬಾಗಲಕೋಟೆ ಜಿಲ್ಲಾ ಘಟಕದಿಂದ ರಾಜ್ಯನ ಅಧ್ಯಕ್ಷರಿಗೆ ಗೌರವ ಸನ್ಮಾನ ಮಾಡಲಾಯಿತು. ಈ ಕಾರ್ಯಾಗಾರ ಹಾಗೂ ಅಧ್ಯಾಯನ ಪ್ರವಾಸ ಶಿಬಿರದಲ್ಲಿ

ರಾಜ್ಯಾಧ್ಯಕ್ಷರು ಸೇರಿದಂತೆ, ರಾಜ್ಯ ಉಪಾಧ್ಯಕ್ಷರಾದ ಶ್ರೀ ಸುದೇಶಕುಮಾರ, ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಶ್ರೀ ಡಿ,ಬಿ,ವಿಜಯಶಂಕರ್ ,ಜಿಲ್ಲಾ ಪ್ರ,ಕಾ,ಶ್ರೀ ದಾನಯ್ಯಸ್ವಾಮಿ ಹಿರೇಮಠ, ಜಿಲ್ಲಾ,ಕಾ, ಶ್ರೀ ಹಮನಂತ ಹಿರೇಮನಿ,ಶ್ರೀ ವಾಯ್,ಎಫ್,ಭಜಂತ್ರಿ. ಶ್ರೀ ಮಂಜುನಾಥ ಕುರಿ,ಶ್ರೀ ಹಾಜಿಮಸ್ತಾನ ಬದಾಮಿ ಶ್ರೀ ಕೃಷ್ಣಾ ಮೋಹರೆ, ವಸಂತ ಹೊಸಮನಿ, ಶ್ರೀ ರಮೇಶ ಭಜಂತ್ರಿ ,ಹಾಗೂ ರಾಜ್ಯದ ವಿವಿಧ ಜಿಲ್ಲೆಯಿಂದ ಅನೇಕ ಹಿರಿಯ ಸಂಪಾದಕರು ವರದಿಗಾರರು, ತುಂಬಾ ಉತ್ಸುಕರಾಗಿ ಪಾಲ್ಗೊಂಡಿದ್ದರು,
