ಅಮೀನಗಡದ ವ್ಯಾಪಾರಸ್ಥರ ಸಂಘದ ವತಿಯಿಂದ ಇಂದು ರಾಷ್ಟ್ರೀಯ ಬೀದಿ ಬದಿ ವ್ಯಾಪಾರಸ್ಥರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾವಲಾಸಾಬ ಬಾಗೇವಾಡಿ ವಹಿಸಿಕೊಂಡಿದ್ದರು .ಮುಖ್ಯ ಅತಿಥಿಗಳಾಗಿ ಉಪ ತಹಶಿಲ್ದಾರ ಎಸ್,ವಿ ಕುಂದರಗಿ, ಪಟ್ಟಣ ಪಂಚಾಯತ ಅಧ್ಯಕ್ಷ ಸಂಗಪ್ಪ ತಳವಾರ, ಪಟ್ಟಣ ಪಂಚಾಯತ ಸದಸ್ಯ ಮನೋಹರ ರಕ್ಕಸಗಿ, ಅಂಜುಮನ್ ಇಸ್ಮಾಂ ಕಮೀಟಿ ಅಧ್ಯಕ್ಷ ಅಜಮೀರ ಮುಲ್ಲಾ, ಶಿವಪುತ್ರಪ್ಪ ಹುಲ್ಲಿಕೇರಿ, ಜಗದೀಶ್ ಬಿಸಲ್ಲದಿನ್ನಿ, ಬಸವರಾಜ ನಿಂಬಿಹೋಳೆ, ಅಂಬರೀಶ್ ಮಡ್ಡಿಕಟ್ಟಿ, ಜಿಲ್ಲಾ ಘಟಕದ ಸದಸ್ಯ ಮುತ್ತಪ್ಪ ಮುಂದಿನಮನಿ ಅಥಿತಿಗಳಾಗಿ ಭಾಗವಹಿಸಿದರು.

ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಅಜಮೀರ ಮುಲ್ಲಾ ರೈತರು ಈ ದೇಶದ ಬೆನ್ನೆಲುಬು ಇದ್ದಂತೆ ಅದೇ ತರಹ ಬೀದಿ ಬದಿ ವ್ಯಾಪಾರಸ್ಥರು ಈ ದೇಶದ ದೇಹ ಇದ್ದಂತೆ, ಬಿಸಿಲು, ಚಳಿ ಅನ್ನದೆ ಈ ಎರಡು ವರ್ಗಗಳು ಕಾಯಕಯೋಗಿಗಳಾಗಿದ್ದಾರೆ ದೇಶದ ಪ್ರಗತಿಗೆ ಈ ಎರಡು ವರ್ಗಗಳ ಯೋಗದಾನ ಪ್ರಮುಖವಾಗಿದೆಂದರು.
ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಜಗದೀಶ್ ಬಿಸಲದಿನ್ನಿ ಬೀದಿ ಬದಿ ವ್ಯಾಪಾರಸ್ಥರು ಆತ್ಮ ನಿರ್ಭರ ಯೋಜನೆಯಲ್ಲಿ ಬರುವ 10.000 ಕಿರು ಸಾಲವನ್ನು ಎಲ್ಲರು ತೆಗೆದುಕೊಳ್ಳಬೇಕು, ತಾವು ಆರ್ಥಿಕವಾಗಿ ಮುಂದೆ ವರಿಯಬೇಕು ಮತ್ತು ತೆಗೆದುಕೊಂಡ ಸಾಲವನ್ನು ಸರಿಯಾಗಿ ತುಂಬಬೇಕು ಎಂದು ಹೇಳಿದರು. ಅಮೀನಗಡದ ಬೀದಿ ಬದಿ ವ್ಯಾಪಾರಸ್ಥರ ಸಂಘದ ಸರ್ವ ಸದಸ್ಯರು ಉಪಸ್ಥಿತಿ ಇದ್ದರು. ವರದಿ : ಮುಸ್ತಾಪ್ ಮಾಸಾಪತಿ