ದಾವಣಗೆರೆ: ಜಿಲ್ಲೆಯಲ್ಲಿ 38 ವೃದ್ಧರು, 37 ವೃದ್ಧೆಯರು ಸೇರಿ 332 ಮಂದಿಗೆ ಕೊರೊನಾ ಇರುವುದು ಮಂಗಳವಾರ ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ. ಪಿಜೆ ಬಡಾವಣೆಯ 65 ವರ್ಷದ ವೃದ್ಧ ತೀವ್ರ ಉಸಿರಾಟದ ಸಮಸ್ಯೆಯಿಂದ ನಿಧನರಾದರು. ಅವರು ಅಧಿಕ ರಕ್ತದೊತ್ತಡ, ಹೃದಯಸಂಬಂಧಿ ಕಾಯಿಲೆ, ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. 21 ಬಾಲಕರಿಗೆ, 19 ಬಾಲಕಿಯರಿಗೂ ಕೊರೊನಾ ಬಂದಿದೆ. 18ರಿಂದ 59 ವರ್ಷದ ವರೆಗಿನ 121 ಪುರುಷರಿಗೆ, 96 ಮಹಿಳೆಯರಿಗೆ ಸೋಂಕು ತಗುಲಿದೆ. ದಾವಣಗೆರೆ ತಾಲ್ಲೂಕಿನಲ್ಲಿ 206 …
Read More »