ನವದೆಹಲಿ: ದೂರಸಂಪರ್ಕ ಕಂಪನಿಗಳು ತಮ್ಮ ಯೋಜನೆಗಳ ಬಗ್ಗೆ ಪ್ರಕಟಣೆ ನೀಡುವಾಗ ಹಾಗೂ ಜಾಹೀರಾತು ನೀಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಭಾರತೀಯ ದೂರಸಂಪರ್ಕ ಪ್ರಾಧಿಕಾರವು (ಟ್ರಾಯ್) ಶುಕ್ರವಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಮೊಬೈಲ್ ಸೇವೆಗಳಿಗೆ ಸಂಬಂಧಿಸಿದ ಆಫರ್‌ಗಳ ವಿಚಾರದಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶ ಇದರ ಹಿಂದಿದೆ ಎಂದು ಹೇಳಿದೆ. ‘ದೂರಸಂಪರ್ಕ ಸೇವಾದಾತರು ಈಗ ಅನುಸರಿಸುತ್ತಿರುವ ಕ್ರಮಗಳು ಪಾರದರ್ಶಕವಾಗಿ ಇಲ್ಲ ಎಂಬುದು ಗಮನಕ್ಕೆ ಬಂದಿದೆ. ಕೆಲವು ಕಂಪನಿಗಳು ಹೆಚ್ಚುವರಿ ಷರತ್ತು ಮತ್ತು …
Read More »