
ಅಮೀನಗಡ : ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶೂಲೀಭಾವಿ ಗ್ರಾಮದ ಪ್ರತಿಷ್ಠಿತ ಶ್ರೀ ರಾಮಯ್ಯಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ತಮ್ಮನೆಪ್ಪ ಬಸವರಾಜ ಭಜಂತ್ರಿ ಅವರಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ ಇವರು ಆಹ್ವಾನಿಸಿದ್ದ ಉತ್ತಮ ೧೫೦ ಕವಿತೆಗಳಲ್ಲಿ ಇವರ ಕವಿತೆ ಆಯ್ಕೆ ಮಾಡಲಾಗಿತ್ತು.

ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಈ ಪ್ರಶಸ್ತಿಯನ್ನು ಅತ್ಯಂತಹ ಗೌರವಯುತವಾಗಿ ಕೊಡಮಾಡಲಾಯಿತು. ಬಂದಂತಹ ಪ್ರಶಸ್ತಿ ಪುರಸ್ಕೃತರಿಗೆ ಮಂಗಳಾರತಿ ಮಾಡಿ ಸ್ವಾಗತ ಕೋರಲಾಯಿತು. ಈ ಸಮಾರಂಭದಲ್ಲಿ ಸೂಳೇಭಾವಿ ಗ್ರಾಮದ ಮೂರು ಜನ ಯುವ ಸಾಹಿತಿಗಳಿಗೆ ಪ್ರಶಸ್ತಿ ಲಭಿಸಿದ್ದು ಶ್ಲಾಘನೀಯ.
ಯುವ ಸಾಹಿತಿ / ಶಿಕ್ಷಕ ಶ್ರೀ ತಮ್ಮನೆಪ್ಪ ಬಿ ಭಜಂತ್ರಿ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
