ಬೆಂಗಳೂರು: ಸಿಡಿ ಪ್ರಕರಣದಲ್ಲಿ ಎಸ್‌ಐಟಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಟಿ ಅಧಿಕಾರಿಗಳು ಕಾನೂನಿನಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಭಟನೆ, ಟ್ವಿಟ್, ಟೀಕೆಗಳು ಯಾವುದೂ ಎಸ್ ಐಟಿ ತನಿಖೆ ಮೇಲೆ ಪ್ರಭಾವ ಬೀರುವುದಿಲ್ಲ. ರಮೇಶ್ ಜಾರಕಿಹೊಳಿಯನ್ನು ವಶಕ್ಕೆ ಪಡೆಯಬೇಕೋ ಬೇಡವೋ ಎಂಬುದನ್ನು ಎಸ್ ಐಟಿ ನಿರ್ಧರಿಸುತ್ತದೆ. ಕಾನೂನು ಮತ್ತು ಗೃಹ ಸಚಿವನಾದರೂ ಎಸ್ ಐಟಿ ತನಿಖೆ ವಿಷಯದಲ್ಲಿ ನಾನು ಮಧ್ಯಪ್ರವೇಶಿಸುವುದಿಲ್ಲ ಎಂದರು.
ಕಾಂಗ್ರೆಸ್ ಮೇಟಿ ಪ್ರಕರಣದಲ್ಲಿ ನಡೆದುಕೊಂಡಿದ್ದು ಗೊತ್ತಿದೆ. ಎಫ್‌ಐಆರ್ ಕೂಡ ದಾಖಲಿಸದೇ ಸಿಐಡಿ ಮೂಲಕ ತನಿಖೆ ನಡೆಸಿ, ಕ್ಲೀನ್ ಚಿಟ್ ಕೊಟ್ಟಿತ್ತು. ಇಂತಹ ಕಾಂಗ್ರೆಸ್ ಗೆ ಈ ಪ್ರಕರಣದ ಬಗ್ಗೆ ಮಾತನಾಡುವಂತ ನೈತಿಕ ಹಕ್ಕಿಲ್ಲ. ಯಾರ ಒತ್ತಡಕ್ಕೂ ನಾವು ಮಣಿಯಿಲ್ಲ. ಯಾರ ಪರವೂ ನಾವು ಇಲ್ಲ, ಯಾರ ವಿರುದ್ಧವೂ ನಾವು ಇಲ್ಲ. SIT ಯಲ್ಲಿ ಹಿರಿಯ ಅಧಿಕಾರಿ ಇದ್ದಾರೆ. ಅವು ಕ್ರಮ ಬದ್ದವಾಗಿ ಕೆಲಸ ಮಾಡ್ತಿದ್ದಾರೆ. ಅನವಶ್ಯಕವಾಗಿ ಮಾತಾಡಿ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.