Breaking News

ಸರಳವಾಗಿ ನಡೆದ ಮೊಹರಂ ಹಬ್ಬ

ಅಮೀನಗಡ : ಹಿಂದೂ ಮುಸ್ಲಿಮರ ಭಾವೈಕ್ಯತೆಯ ಹಬ್ಬಗಳಲ್ಲಿ ಮೊಹರಂ ಹಬ್ಬವು ಒಂದು. ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಹಜರತ ಹಾಸನ್ ಮತ್ತು ಹುಸೇನ್‍ರ ಪುಣ್ಯ ಸ್ಮರಣೆ ನಿಮಿತ್ಯ ಆಚರಿಸುವ ಹಬ್ಬವೇ ಈ ಮೊಹರಂ.

ಈ ಹಬ್ಬವನ್ನು ಪ್ರತಿ ವರ್ಷ ಬಹು ಸಡಗರದಿಂದ ಹಿಂದೂ-ಮುಸ್ಲಿಂ ಭಾಂಧವರು ಕೂಡಿಕೊಂಡು ಆಚರಿಸುತ್ತಿದ್ದು, ಹಳ್ಳಿಗಾಡಿನಲ್ಲಿ ಈ ಹಬ್ಬದ ಸಂಭ್ರಮ ಸೊಗುಡು ನೋಡುಗರ ಕಣ್ಣ-ಮನಗಳನ್ನು ತಣಿಸುತ್ತಿತ್ತು. ಆದ್ರೆ, ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸಂಭ್ರಮಕ್ಕೆ ಕಡಿವಾಣ ಬಿದ್ದಿದೆ.

ಈ ಸಂಧರ್ಭದಲ್ಲಿ ಜನ್ರು ವಿವಿಧ ವೇಷ ಭೂಷಣಗಳಿಂದ ಕಂಗೊಳಿಸುತ್ತಿದ್ರು. ಸಂಗೀತ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕಿ, ಕುಣಿತ, ಮಟಕಿ ಕುಣಿತ, ಮರಗಾಲು ಕುಣಿತ, ಹೀಗೆ ಅನೇಕ ಕುಣಿತದಿಂದ ನೋಡುಗರನ್ನು ತುದಿ ಗಾಲಿನ ಮೇಲೆ ನಿಲ್ಲಿಸುತ್ತಿತ್ತು. ಆದ್ರೆ, ಕೊರೊನಾ ಹಾವಳಿಯಿಂದಾಗಿ ಈ ಕುಣಿತುಗಳು ಈ ವರ್ಷ ನಡೆಯದೇ ಇರುವುದು ಭಕ್ತ ವೃಂದದಲ್ಲಿ ನಿರಾಸೆ ಮೂಡಿಸಿದೆ.

ಅದರಂತೆ ಅಮೀನಗಡಲ್ಲಿಯೂ ಕೊರೊನಾ ಹಿನ್ನೆಯಲ್ಲಿ ಈ ಬಾರಿಯ ಮೊಹರಂ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿದ್ದಾರೆ. ಪಟ್ಟಣದಲ್ಲಿ ಇಂದು ಸರಳವಾಗಿ ಇಂದು ಕೆಲವೇ ಜನರು ಭಾಗವಹಿಸಿ ಸರಳ ರೀತಿಯಲ್ಲಿ ಆಚರಿಸಿದ್ದಾರೆ. ವರದಿ : ಎಮ್.ಡಿ.ಮುಸ್ತಾಪ್

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.