
ಇಲಕಲ್ಲ :
ಹುನಗುಂದ ತಾಲೂಕಿನ ಹಾವರಿಗೆ ಗ್ರಾಮದಲ್ಲಿ ನಿನ್ನೆಯ ದಿನ SRNE ಫೌಂಡೇಶನ್ ಕಾರ್ಯಕರ್ತರು ಕರೋನಾ ವಾರಿಯರ್ ಗಳಿಗೆ ಸನ್ಮಾನ ಹಾಗೂ ದಿನಸಿ ಆಹಾರ ಕಿಟ್ ವಿತರಣೆ ಮಾಡಲು ಮುಂದಾದಾಗ ಡಾ: ವಿಜಯಾನಂದ ಕಾಶಪ್ಪನವರ ಕುಟುಂಬದಿಂದ ಬೆದರಿಕೆ ಕರೆ ಬಂದ ಕಾರಣ ೩:೩೦ ರವರೆಗೆ ಕಾದು ಕುಳಿತಿದ್ದ ನೂರಾರು ಕರೋನಾ ವಾರಿಯರ್ ಗಳು ಹೇಳದೆ ಕೇಳದೆ ಜಾಗ ಖಾಲಿ ಮಾಡಿದ್ದರು. ಇದು ವಿಜಯಾನಂದ ಕಾಶಪ್ಪನವರ ಕುಟುಂಬ ದಬ್ಬಾಳಿಕೆಯ ಸಾಕ್ಷಿ, ಇದನ ಕ್ಷೇತ್ರದ ಜನ ಗಮನಿಸುತ್ತಿದ್ದಾರೆ. ಎಂದು SRNE ಫೌಂಡೇಶನ್ ಸಂಸ್ಥಾಪಕ / ಅಧ್ಯಕ್ಷ ಶ್ರೀ ಎಸ್,ಆರ್ ನವಲಿ ಹಿರೇಮಠ ಅವರು ಆರೋಪಿಸಿದ್ದರು.


ಇದಕ್ಕೆ ನಮ್ಮ BB ನ್ಯೊಜ್ ಕಾರ್ಯಾಲಯಕ್ಕೆ ದೂರವಾಣಿ ಕರೆ ಮಾಡಿ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕರಾದ ಡಾ: ವಿಜಯಾನಂದ ಕಾಶಪ್ಪನವರ ಕಳೆದ ೪ ತಿಂಗಳ ನಿರಂತರ ಹುನಗುಂದ ಮತ ಕ್ಷೇತ್ರದಲ್ಲಿ ನಮ್ಮ ಕುಟುಂಬ ಎಲ್ಲಾ ಕರೋನಾ ವಾರಿಯರ್ ಗಳಿಗೆ ಆಹಾರ ಕಿಟ್ ನಾವು ನೀಡಿದ್ದೇವೆ,ಕೆಲವರು ಪಡೆದಿದ್ದಾರೆ ಇನ್ನ್ ಕೆಲವರು ಪಡೆದಿಲ್ಲ ಎಲ್ಲಾ ಗ್ರಾಮದಲ್ಲಿ ಸ್ವೀಕಾರ ಮಾಡೊದು ಅವರ ವಯಕ್ತಿಕ ವಿಚಾರ ಅಲ್ಲದೇ ಸುಕಾ ಸುಮ್ಮನೆ ನಮ್ಮ ಕುಟುಂಬದ ಮೇಲೆ ಆರೋಪ ಮಾಡತಿರೋ ನವಲಿ ಹಿರೇಮಠ ಅವರು ದುಡಿದು ಬೆವರು ಸುರಿಸಿ ತಂದ ಹಣದಿಂದ ಕಿಟ್ ನೀಡಲಿ ಏನ್ ರೀ ಅದು SRNE ಫೌಂಡೇಶನ್ ಇದಕ್ಕೆ ಹಣ ಎಲ್ಲಿಂದ ಬರುತ್ತಿದೆ,? ಇದನ ಕ್ಷೇತ್ರದ ಜನ ಅವರನ್ನೂ ಗಮನಿಸುತ್ತಿದ್ದಾರೆ. ಸರಕಾರ ಮಟ್ಟದಲ್ಲಿ ಈ ಫೌಂಡೇಶನ್ ಮೇಲೆ ತನಿಖೆ ಮಾಡಿಸುತ್ತೇನೆ ,BJP ಪಕ್ಷವನ್ನು A+ B ಮಾಡಿ ಶಾಸಕ ದೊಡ್ಡನಗೌಡ & ಹಿರೇಮಠ ಇಬ್ಬರು ಆಳಾಕತ್ತಾರ ಇದರ ಫಲಿತಾಂಶವನಗನು ೨೦೨೩ ಕ್ಕೆ ತೋರಿಸುತ್ತೇನೆ ಎಂದರು.

ಅಲ್ಲದೇ ಹುನಗುಂದ ಮತ ಕ್ಷೇತ್ರದಲ್ಲಿ ಈಗಾಗಲೇ ೨ ಆ್ಯಂಬುಲೆನ್ಸ್ ಉಚಿತ ಸೇವೆ ಮಾಡಲು ಇನ್ನೂ ಎರಡು ದಿನದಲ್ಲಿ ಬರುತ್ತಿವೆ ,ಸದಾ ಜನ ಸೇವೆಗಾಗಿ ನಮ್ಮ ಕುಟುಂಬ ಹೋರಾಟ ಮಾಡುತ್ತಿದೆ, ಇದನ ಸಹಿಸಲು ಆಗದೇ ನವಲಿ ಹಿರೇಮಠ ಅವರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.