ಮೊಳಕಾಲ್ಮುರು : ತಾಲೂಕಿನ ಹಾನಗಲ್ ಗ್ರಾಮದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೋವಿಡ್ ಹೆಸರಲ್ಲಿ ಈಗಾಗಲೇ ರಾಜ್ಯದಲ್ಲಿ ಕೋವಿಡ್ -19 ಹೆಸರಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಾವಿರಾರುಕೋಟಿ ರೂ.ಗಳ ಹಗರಣದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ। ಪುಷ್ಪ ಅಮರನಾಥ ಅವರುಆರೋಪಿಸಿದರು.
ಕೊರೊನಾ ಪರೀಕ್ಷೆ ಪಿಪಿಇ ಸೀಲ್ ಡೌನ್ ನೆಪದಲ್ಲಿ ಲೂಟಿ ಮಾಡಲಾಗುತ್ತಿದೆ. ಪಿ.ಪಿ.ಇ, ಕಿಟ್ ಗಳ ಖರೀದಿ ಹಾಗೂ ಜನರ ಹೆಸರಲ್ಲಿ ಕೊರೋನಾ ರೋಗದಲ್ಲಿ ಸರ್ಕಾರ ಲೂಟಿ ಮಾಡಿದೆ ಜನರ ಹೆಸರಲ್ಲಿ ರಾಜಕೀಯ ಮಾಡುತ್ತಾ ಸಾರ್ವಜನಿಕರ ಹಣವನ್ನು ಪೋಲು ಮಾಡಿ ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ ಎಂದರು. ಆರೋಗ್ಯ ಸಚಿವರ ಕ್ಷೇತ್ರದಲ್ಲಿ ಆಂಬ್ಯುಲೆನ್ಸ್
ವೈದ್ಯರು ಮತ್ತು ಸಿಬ್ಬಂದಿ ಕೊರತೆ, ಬಸ್, ಕುಡಿಯುವ ನೀರು, ನೇಕಾರರ ಸಮಸ್ಯೆಗಳು ಸೇರಿದಂತೆ ಸ್ಥಳೀಯವಾಗಿ ಹಲವಾರು ಗಂಭೀರ ಸಮಸ್ಯೆಗಳು ತಾಂಡವವಾಡುತ್ತಿವೆ.
ಅದನ್ನು ನಿವಾರಿಸುವಲ್ಲಿ ಸಚಿವರು ಸಂಪೂರ್ಣ ವಿಫಲರಾಗಿದ್ದು ಕೂಡಲೇ ಆಂಬ್ಯುಲೆನ್ಸ್ ವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸಬೇಕು.ಜನತೆಯ ಸಮಸ್ಯೆಗಳ ನಿವಾರಣೆಗೆ ಎಷ್ಟು ಪ್ರಮಾಣದ ಪ್ಯಾಕೇಜ್ ನೀಡಲಾಗಿದೆ ಎಂಬುದನ್ನು ತಿಳಿಸಬೇಕಾಗಿದೆ. ಕ್ಷೇತ್ರದಲ್ಲಿ ಯಾವುದೇ ಪ್ರಗತಿ ಕಾಣದಾಗಿರುವುದು ನಾಚಿಕೆಗೇಡಿತನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೀನಾಕ್ಷಿ, ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಸದಸ್ಯ ಡಾ | ಬಿ.ಯೋಗೇಶ್‌ಬಾಬು, ಕೆಪಿಸಿಸಿ ವೀಕ್ಷಕರಾದ ಶುಭಾ, ನಾಗಮಣಿ, ಮೋಕ್ಷಾ ಜಯಲಕ್ಷ್ಮೀ, ಮುನೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟೇಲ್ ಜಿ ಪಾಪನಾಯಕ, ಕಾರ್ಯದರ್ಶಿ ಶ್ರೀನಿವಾಸಲು, ತಾಲೂಕು ಸಮಿತಿಯ ಜಗದೀಶ್ ಮತ್ತು ಇಂದ್ರಮ್ಮ, ತಾಪಂ ಅಧ್ಯಕ್ಷೆ ಬೋರಮ್ಮ, ಪಪಂ ಸದಸ್ಯರಾದ ಪದ್ಮಾವತಿ, ಚಿತ್ತಮ್ಮಎಂ. ಅಬ್ದುಲ್ಲಾ ನಬಿಲ್ ಅನ್ಸರ್.ಹೊಸಳ್ಳಿ ಸೂರ್ಯ ಪ್ರಕಾಶ್ ಹಾಜರಿದ್ದರು.