
ಹುನಗುಂದ : ಕಳೆದ ೨- ೩ ವರ್ಷಗಳಿಂದ ನಗರದಲ್ಲಿ ತಮ್ಮ ಉತ್ತಮ ಕರ್ತವ್ಯವನ್ನು ಸಾರ್ವಜನಿಕ ರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿಯುತ ವಾತಾವರಣ ಕಾಪಾಡಲು ಹಗಲು ರಾತ್ರಿ ತಮ್ಮ ಕರ್ತವ್ಯ ಮಾಡಿ ಸೈ ಎನ್ನಿಸಿಕೊಂಡ ಅನೇಕ ಸಿಬ್ಬಂದಿಗಳು ಇಂದು ಬೇರೆ ಕಡೆ ವರ್ಗಾವಣೆ ಗೊಂಡಿದ್ದಾರೆ ಅದರಲ್ಲಿ

ಶ್ರೀ ಎಸ್,ಎಸ್,ದೊಡಮನಿ ASI ಶ್ರೀ ಬಿ ಬಿ ಸಂಗಮ ASI ಶ್ರೀ ಎಸ್,ಆರ್, ಶ್ರೀ ತೊಂಡಿಹಾಳ CPC ಶ್ರೀ ಆರ್,ಎಸ್,ಬಿರಾದರ್ CPC
ಶ್ರೀ ಬಿ,ಎಸ್,ತಾರಿವಾಳ CPC. ಶ್ರೀ ಎಚ,ಎಚ್, ಬಾದಿಮನಾಳ. ಇವರೆಲ್ಲರು ಇಂದು ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆ ನಿಮಿತ್ತವಾಗಿ ಠಾಣಾ ಅಧಿಕಾರಿ ಪಿ,ಎಸ್,ಐ ಶರಣಬಸಪ್ಪ ಸಂಗಳದ ಹಾಗೂ ಠಾಣೆ ಸಿಬ್ಬಂದಿ ಎಲ್ಲರೂ ಸೇರಿ ಅವರನ್ನು ಅತ್ಯಂತ ಗೌರವ ಪೂರ್ವಕ ಸನ್ಮಾನ ಮಾಡಿ ಅವರ ಉತ್ತಮ ಕರ್ತವ್ಯವನ್ನು ನೆನೆದು ಎಲ್ಲರೂ ಮುಂದೆನೂ ತಾವೆಲ್ಲರೂ ಹೀಗೆ ಉತ್ತಮ ಸೇವೆ ಮಾಡುವ ಮೂಲಕ ಜನ ನಮ್ಮನ್ನು ಗುರುತಿಸಬೇಕು ನಮ್ಮ ಹೆಸರಿಂದ ಅಲ್ಲ ಎಂದು ಅವರನ್ನು ಉರುದುಂಬಿಸಿ ಸನ್ಮಾನಿಸಿ ಬಿಳ್ಕೋಟ್ಟರು. ಈ ಸಂಧರ್ಭದಲ್ಲಿ ಠಾಣೆ PSI ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗ ಉಪಸ್ಥಿತಿ ಇದ್ದರು.