ಅಧ್ಯಕ್ಷೀಯ ಅವಧಿ ಮುಗಿಯುತ್ತಿದ್ದರೂ, ನಿಯಮದಂತೆ ಹುದ್ದೆ ತೊರೆಯಲು ಮುಂದಾಗದಿರುವ ಟ್ರಂಪ್ ವಿರುದ್ದ 25 ನೇ ತಿದ್ದುಪಡಿಯ ವಿಶೇಷ ಅಧಿಕಾರವನ್ನು ಬಳಸಲು ಅಲ್ಲಿನ ಪ್ರತಿನಿಧಿಗಳು ಒಪ್ಪಿಗೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ನಂತರ ಡೊನಾಲ್ಡ್ ಟ್ರಂಪ್ ವಿರುದ್ಧ ಅಲ್ಲಿನ ಸಂಸತ್ ಎರಡನೇ ಬಾರಿಗೆ ದೋಷಾರೋಪಣೆಯನ್ನು (ಮಹಾಭಿಯೋಗ) ಹೊರಿಸಿದೆ. ಹಾಗಾಗಿ ಎರಡು ಬಾರಿ ಮಹಾಭಿಯೋಗಕ್ಕೆ ಗುರಿಯಾಗಿ ಟ್ರಂಪ್ ಅಮೆರಿಕದ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿ ಉಳಿಯಲಿದ್ದಾರೆ.
ಅಧಿಕೃತವಾಗಿ ಹುದ್ದೆ ತೊರೆದು ಹೋಗಲು ಡೊನಾಲ್ಡ್ ಟ್ರಂಪ್‌ಗೆ ಕೊನೆಯ ಅವಕಾಶವನ್ನು ಡೆಮೋಕ್ರಾಟ್ಸ್ ನೀಡಿದ್ದಾರೆ. ಟ್ರಂಪ್ ಅಧ್ಯಕ್ಷೀಯ ಅವಧಿ ಕೊನೆಯಾಗಲು ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಯಾವಾಗ ಹುದ್ದೆ ಬಿಟ್ಟು ನಿರ್ಗಮಿಸುತ್ತಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಅಧ್ಯಕ್ಷೀಯ ಅವಧಿ ಮುಗಿಯುತ್ತಿದ್ದರೂ, ನಿಯಮದಂತೆ ಹುದ್ದೆ ತೊರೆಯಲು ಮುಂದಾಗದಿರುವ ಟ್ರಂಪ್ ವಿರುದ್ದ 25 ನೇ ತಿದ್ದುಪಡಿಯ ವಿಶೇಷ ಅಧಿಕಾರವನ್ನು ಬಳಸಲು ಅಲ್ಲಿನ ಪ್ರತಿನಿಧಿಗಳು ಒಪ್ಪಿಗೆ ನೀಡಿದ್ದಾರೆ. ಈ ಅಧಿಕಾರವನ್ನು ಈ ಮೊದಲು ಯಾರ ವಿರುದ್ಧವೂ ಬಳಸಲಾಗಿಲ್ಲ. ಅಧ್ಯಕ್ಷೀಯ ಅವಧಿ ಮುಗಿದ ಬಳಿಕವೂ, ಹುದ್ದೆ ತೊರೆಯದಿದ್ದರೆ, ಈ ತಿದ್ದುಪಡಿ ಬಳಸಿಕೊಂಡು ಸಂಸತ್ ಕ್ರಮ ಕೈಗೊಳ್ಳುತ್ತದೆ.
ಮಂಗಳವಾರ ರಾತ್ರಿ ಅಂಗೀಕರಿಸಿದ ಪದಚ್ಯುತಿ ನಿರ್ಣಯದ ಪರವಾಗಿ 223-205 ಮತಗಳು ಬಿದ್ದಿವೆ.
ಅಮೆರಿಕದ ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ದಾಳಿ ಮತ್ತು ಹಿಂಸಾಚಾರ, ಐವರ ಸಾವು ಪ್ರಕರಣ ದೊಡ್ಡ ಕೋಲಾಹಲ ಸೃಷ್ಟಿಸಿದೆ. ಇದು ಡೊನಾಲ್ಡ್ ಟ್ರಂಪ್ ಬೆಂಬಲಿಗರ ಕೃತ್ಯವಾಗಿರುವುದರಿಂದ, ಟ್ರಂಪ್ ಅಮೆರಿಕ ಸಂಸತ್‌ನಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ.
ಇದರ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಷಿಂಗ್ಟನ್‌ನ ಎಫ್‌ಬಿಐ ಅಧಿಕಾರಿ ಸ್ಟೀವನ್ ಎಂ ಡಿ ಆಂಟುವೊನೊ, “ಕ್ಯಾಪಿಟಲ್ ಮೇಲಿನ ದಾಳಿಯಲ್ಲಿ ಭಾಗವಹಿಸಿದ ಪ್ರತಿಭಟನಕಾರರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಕುರಿತಾಗಿ ಅಮೆರಿಕದ ಅಟಾರ್ನಿ ಕಚೇರಿ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಆರು ದಿನಗಳಲ್ಲಿ ನಾವು ದಂಗೆಕೋರರ ವಿರುದ್ಧ 160 ಪ್ರಕರಣಗಳನ್ನು ದಾಖಲಿಸಿದ್ದೇವೆ. ಇದು ಕೇವಲ ಆರಂಭವಷ್ಟೇ” ಎಂದು ಹೇಳಿದ್ದಾರೆ.
ಇತ್ತ ಅಮೆರಿಕ ಕ್ಯಾಪಿಟಲ್ ಮೇಲಿನ ದಾಳಿಗೂ ಮುನ್ನ ತಾನು ಮಾಡಿದ ಭಾಷಣವನ್ನು ಸಮರ್ಥಿಸಿಕೊಂಡಿರುವ ಟ್ರಂಪ್, ದೇಶದಾದ್ಯಂತ ಆಕ್ರೋಶ ಭುಗಿಲೇಳಲಿದೆ ಎಂದು ಎಚ್ಚರಿಸಿದ್ದಾರೆ.
ಇನ್ನು ಎರಡನೇ ಬಾರಿ ಮಹಾಭಿಯೋಗಕ್ಕೆ ಗುರಿಯಾಗಿರುವ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ನಮ್ಮ ಪ್ರಜಾಪ್ರಭುತ್ವದ ಮೇಲೆ ಕಳೆದ ವಾರ ಅನಾಗರಿಕ ದಾಳಿಯಾಗಿದ್ದನ್ನು ನಾವು ನೋಡಿದ್ದೇವೆ. ಇದು ನಮ್ಮ ರಾಷ್ಟ್ರದ 244 ವರ್ಷಗಳ ಇತಿಹಾಸದಲ್ಲಿ ಕಂಡು ಕೇಳರಿಯದ ಕೃತ್ಯವಾಗಿತ್ತು” ಎಂದು ಬೈಡನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://twitter.com/ANI/status/1349537264750063620/photo/1?ref_src=twsrc%5Etfw%7Ctwcamp%5Etweetembed%7Ctwterm%5E1349537455150489602%7Ctwgr%5E%7Ctwcon%5Es3_&ref_url=https%3A%2F%2Fnaanugauri.com%2Ftrump-the-black-mark-in-american-history%2F