

ಇಲಕಲ್ಲ: ಇದೆ ತಿಂಗಳು ಮೇ ೨೨ ರಂದು ಭಾನುವಾರ ನಗರದ ಶ್ರೀ ವಿರಮಣಿ ಕ್ರೀಡಾ ಮೈದಾನದಲ್ಲಿ ಸಾಯಂಕಾಲ ಅದ್ದೂರಿಯಾಗಿ ಈ ಯುನೈಟೆಡ್ ನ್ಯೂಜ್ ಚಾನಲ್ ಲಾಂಛನ ಬಿಡುಗಡೆ ಸಮಾರಂಭವನ್ನು ಬಾಗಲಕೋಟೆ ಜಿಲ್ಲೆಯ ಇಲಕಲ್ಲ ನಗರದ SVM ಕಾಲೇಜು ಮೈದಾನದ ಶ್ರೀ ವೀರಮಣಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿತ್ತು. ನಗರದ ಪ,ಪೂ,ಶ್ರೀ ಗುರುಮಾಹಾಂತ ಶ್ರೀಗಳ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಭಾಗವಹಿಸಲು ಆಗದೇ ಇರುವುದರಿಂದ ಸದರಿ ಈ ಚಾನಲ್ ಲಾಂಛನ ಬಿಡುಗಡೆ ಸಮಾರಂಭವನ್ನು ಮುಂದಿನ ಜುನ್ ತಿಂಗಳ ೨೨/೦೬/೨೦೨೨ ರಂದು ನಡೆಸಲು ಯುನೈಟೆಡ್ ಟಿಮ್ ಇಂದು ನಗರದ ಕಾಮತ್ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಈ ಚಾನಲ್ CEO ಶೇಖಬ್ ಅವರು ಮಾಹಿತಿ ಹಂಚಿಕೊಂಡರು ಈ ಪತ್ರಿಕಾ ಪ್ರಕಟನೆಯಲ್ಲಿ ಸಣ್ಣ & ಮಧ್ಯಮ ಪತ್ರಿಕೆಗಳ ರಾಜ್ಯ ಉಪಾಧ್ಯಕ್ಷರಾದ ಶ್ರೀ ಡಿ,ಬಿ,ವಿಜಯಶಂಕರ್ ,ನಗರದ ಜನಧ್ವನಿ ಸುದ್ದಿ ವಾಹಿನಿ ಚಾನಲ್ ಸಂಪಾದಕರಾದ ಶ್ರೀ ಮುರ್ತುಜಾಸಾಬ ಜಮಖಾನ ಹಾಗೂ ಸಣ್ಣ & ಮದ್ಯಮ ಪತ್ರಿಕೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಶ್ರೀ ದಾನಯ್ಯಸ್ವಾಮಿ ಹಿರೇಮಠ ಶ್ರೀ ಹಾಜಿಮಸ್ತಾನ್ ಬದಾಮಿ, ಬಾಬು ಸರ್ ಉಪಸ್ಥಿತಿ ಇದ್ದರು.
