ಬಾಗಲಕೋಟೆ: ವಿದ್ಯಾಗಿರಿ ಯುವಶಕ್ತಿ ವತಿಯಿಂದ ಇಂದು ದೇಶದ ಅಪ್ರತೀಮ ಹೋರಾಟಗಾರ ,ದೇಶ ಭಕ್ತ ವೀರ ಕ್ರಾಂತಿಕಾರಿ ಶಾಹಿದ್ ಭಗತ್ ಸಿಂಗ್ ಅವರ ೧೧೩ನೇ ಜಯಂತಿಯನ್ನು ವಿದ್ಯಾಗಿರಿ ಇಂಜಿನಿಯರಿಂಗ್ ಕಾಲೇಜ್ ವೃತ್ತದಲ್ಲಿ ಯುವಕರುಹಾಗೂ ಅಧ್ಯಕ್ಷ ಸಚಿನ್ ಅವರ ಸಾರಥ್ಯದಲ್ಲಿ ವೀರ ಭಗತ್ ಸಿಂಗ್ ಅವರ ಭಾವ ಚಿತ್ರಕ್ಕೆ ಹಾರ ಹಾಕಿ ಜಯಗೋಶ ಕೂಗಿ ಸಿಹಿ ಹಂಚಿ ಭಗತ್ ಸಿಂಗ್ ಅವರ ಜಯಂತಿಯನ್ನು ಆಚರಿಸಕಾಯಿತು.
ಅವರ ಜೀವನದ ಸಾರವನ್ನು ಅವರ ಹೋರಾಟದ ಕ್ಷಣಗಳನ್ನು ಶಿವನಗೌಡ ಮಿರ್ಜಿ ಅವರು ಮಾತನಾಡಿ ಭಗತ್ ಸಿಂಗ್ ತಮ್ಮ ಆರನೇ ವಯಸ್ಸಿನಲ್ಲಿ ಅವರ ಚಿಕ್ಕಪ್ಪನ ಜೊತೆ ಹೊಲಕ್ಕೆ ಹೋದಾಗ ಅಂದಿನ ಬ್ರಿಟಿಷ್ ದಬ್ಬಾಳಿಕೆಯನ್ನು ಜನ,ಚಿಕ್ಕ ಮಕ್ಕಳ ಮೇಲೆ ಭಾರಿ ಪರಿಣಾಮ ಬೀರಿತ್ತು ಆ ಕ್ಷಣವನ್ನು ಬಾಲ್ಯದಲ್ಲಿ ಇದ್ದ ಭಗತ್ ಸಿಂಗ್ ಅಂದಿನ ಸ್ಥಿತಿಗತಿಗಳನ್ನು ನೋಡಿ ಅವರ ಚಿಕ್ಕಪ್ಪನಿಗೆ ಅಪ್ಪಾಜಿ ನಾವು ಹೋಲದಲ್ಲಿ ಟೊಮೆಟೊ ,ಹಾಗೂ ಬದನೆಕಾಯಿ ಅಥವಾ ಮೆಕ್ಕೆ ಜೊಳ ಹಚ್ಚಿ ಈ ಬಂದೂಕುಗಳನ್ನು ಬೆಳೆದು ನಮ್ಮ ಜನರ ಕೈಯಲ್ಲಿ ಕೊಡೋಣ ಅವರು ಹೇಗೆ ನಮ್ಮ ಮೇಲೆ

ಯುದ್ದಕ್ಕೆ ಬರುತ್ತಾರೊ ನೋಡೋಣ ಎಂದಾಗ ಅವರ ಚಿಕ್ಕಪ್ಪ ಭಗತ್ ಸಿಂಗ್ ಅವರ ದೇಶ ಭಕ್ತಿ, ಅವರಲ್ಲಿರುವ ಖಾಳಜಿ ನೋಡಿ ಅವನನ್ನು ತಬ್ಬಿಕೊಂಡು ಕೊಂಡಾಡಿದರು, ಅಂತಹ ಭಗತ್ ಸಿಂಗ್ ಕೊನೆಗೆ ತಮ್ಮ ಹೋರಾಟದ ಮೂಲಕವೇ ಬ್ರಿಟಿಷ್ ರ ವಿರುದ್ಧ ಹೋರಾಟ ಮಾಡಿ ತಮ್ಮ ೨೬ನೇ ವಯಸ್ಸಿನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದರು ಎಂದು ಹೇಳೊಕೆ ವಿಷಾದಕರ,ಅಂತಹ ಮಹಾನ್ ಹೋರಾಟಗಾರ, ಭಗತ್ ಸಿಂಗ್ ಅವರಂತಹ ಈ ಪುಣ್ಯ ಸರಳ ಜಯಂತಿ ಉತ್ಸವದಲ್ಲಿ ಮಾತನಾಡಲು
ಅವಕಾಶ ಮಾಡಿ ಕೊಟ್ಟ ಸಚಿನ್ ಅವರಿಗೆ ಧನ್ಯವಾದ ಎಂದರು.ಅಧ್ಯಕ್ಷರು ಸಚಿನ್ ಪಟ್ಟನಶೆಟ್ಟಿ ,ರಾಮು ಕಟ್ಟಿಮ ನಿ ,ವೀರೇಶ್ ಬೆನ್ನೂರ್ ಮಂಜು ಹೊದ್ಲೂರ ,ಗುರುರಾಜ್ ಜಾಬ ಶೆಟ್ಟಿ ,ಶಿವನಗೌಡ ಮಿರ್ಜಿ , ಹನಮಂತ ವಾಲ್ಮೀಕಿ, ಶಿವು ಪತ್ತಾರ ,ಈಶ್ವರ ಹಿರೇಮಠ ಅನೇಕ ಯುವಕರು ಉಪ ಸ್ಥಿತರಿದ್ದರು.