
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ಸಮಿಪದ ಶೂಲೇಭಾವಿ ಗ್ರಾಮದಲ್ಲಿ ಅಮೀನಗಡ ನೂತನ ಘಟಕಾಧಿರಿ ಶ್ರೀ ಯಮನಪ್ಪ ಬೋಜಪ್ಪ ಭಜಂತ್ರಿ ಇವರ ಮನೆಯಲ್ಲಿ ಶ್ರಾವಣ ಮಾಸದ ನಿಮಿತ್ತವಾಗಿ ಇಂದು ಸತ್ಯನಾರಾಯಣ ಧಾರ್ಮಿಕ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು,ಜಿಲ್ಲಾ ಗೃಹ ರಕ್ಷಕದಳದ ಭೋದಕರಾದ ಶ್ರೀ ಎ,ಎಲ್,ಸಾಹುಕಾರ್ ಅವರು ಇಂದು ಆಕಸ್ಮಿಕವಾಗಿ ಯಮನಪ್ಪ ಭಜಂತ್ರಿ ಅವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಭೋಜಪ್ಪ ಭಜಂತ್ರಿ ಅವರು ಸ್ವಾಗತ ಮಾಡಿ ಅವರಿಗೆ ಗೌರವ ಸತ್ಕಾರ ಮಾಡಿ ಆರ್ಶಿವದಿಸಿದರು.ಸನ್ಮಾನ ಸ್ಬೀಕರಿಸಿ ನಂತರ ಅದೇ ಶಾಲನ್ನು ಹಿರಿಯರಾದ ಭೋಜಪ್ಪ ಭಜಂತ್ರಿ ಅವರಿಗೆ ಮರಳಿ ಹಾಕಿ ಅವರ ಆರ್ಶಿವಾದ ಪಡೆದು ನಯ ವಿನಯದ ಪಾಠವನ್ನು ಕಲಿಸಿದರು,ಉನ್ನತ ಉದ್ದೆಯಲ್ಲಿ ಇದ್ದರು ಸಂಸ್ಕಾರವನ್ನು ಎತ್ತಿ ಹಿಡಿದು ಸೈ ಎನ್ನಿಸಿಕೊಂಡರು.

ಈ ಸಂದರ್ಭದಲ್ಲಿ ಶ್ರೀ ಎಮ್,ಎಚ್ ಪಾರೂಕಿ ಘಟಕಾ ಅಧಿಕಾರಿಗಳು ಚೋಳಚಗುಡ್ಡ
ಶ್ರೀ ಕೆ,ಡಿ ಮಂಗರಿ ಘಟಕಾಧಿಕಾರಿಗಳು ಬದಾಮಿ, ಶ್ರೀ ಹನಮಂತ ಬಂಡಿವಡ್ಡರ ,ಹಾಗೂ ಯಮನಪ್ಪ ಬೊ ಭಜಂತ್ರಿ ಘಟಕಾಧಿಕಾರಿಗಳು ಅಮೀನಗಡ,ಹಾಗೂ ಕೊರಮ ಸಮಾಜದ ಅಧ್ಯಕ್ಷರಾದ ಶ್ರೀ ಯಮನಪ್ಪ ಭಜಂತ್ರಿ, ಹಿರಿಯರಾದ ಭೋಜಪ್ಪ ಭಜಂತ್ರಿ, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ,ಬಿ ವಿಜಯಶಂಕರ್,ಶ್ರೀ ಮಹಾಂತೇಶ ಭಜಂತ್ರಿ, ಸದಸ್ಯರು ರಾಜ ರಾಜೇಶ್ವರಿ ಪ,ಸ,ಸಂ, ಸೂಳೇಭಾವಿ ಹಾಗೂ ಕುಟುಂಬ ಸದಸ್ಯರು ಉಪಸ್ಥಿತಿ ಇದ್ದರು.