ಬಳ್ಳಾರಿ ; ರಾಜ್ಯ ಕೇಂದ್ರ ಸರ್ಕಾರ ಗಳು,ಬಡವರ ಪರವಾಗಿ ಇದ್ದಿವಿ,ಎಂದು ಬೊಬ್ಬೆ ಹೊಡಿಯುತ್ತವೆ. ಬಡವರ ಆರೋಗ್ಯ ವಿಚಾರ ದಲ್ಲಿ ಕೇಂದ್ರ ರಾಜ್ಯ ಸರ್ಕಾರ ಗಳು ಉಚಿತ ಚಿಕಿತ್ಸೆಗಾಗಿ ಅರೋಗ್ಯ ಕಾರ್ಡುಗಳನ್ನು ಜಾರಿಗೆ ತಂದಿವೆ. ಆದರೂ ಬಡವರು ಹಣ ತೆತ್ತು ಚಿಕಿತ್ಸೆ ಮಾಡಿಸಿಕೊಳ್ಳಲು ಸಾಧ್ಯವಾಗದೆ ಅನೇಕ ಸಾವುಗಳು ಸಂಭವಿಸಿದ್ದು ತಿಳಿದ ಸಂಗತಿ ಆಗಿದೆ.

ಇನ್ನೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಅಲ್ಲಿಗೆ ಬರುವ ರೋಗಿಗಳನ್ನು ನಿರಾಯಾಸವಾಗಿ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡುವ ಅಥವಾ ಕಳಿಸುವ ಸಂಗತಿ ಇಡೀ ಜಗತ್ತಿಗೆ ತಿಳಿದಿರುವ ವಿಚಾರ. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯ ಕಾರ್ಡ್ ಗಳು,ಬಿಪಿಎಲ್ ಕಾರ್ಡ್ ಗಳು, ಚಿಕಿತ್ಸೆ ನಿಮಿತ್ತ ಸಹಕಾರಿ ಅಗುತ್ತಿದ್ದವು.ಅದ್ರೆ ಇತ್ತಿಚ್ಚಿನ ದಿನಗಳಲ್ಲಿ ರಾಜ್ಯಸರ್ಕರ,ಸರ್ಕಾರಿ ಆಸ್ಪತ್ರೆ ಗಳಲ್ಲಿ ಬಡವರ,ಬಿಪಿಎಲ್ ಕಾರ್ಡ್ ದಾರರಗೆ,50%ಯುಜರ್ ಚಾರ್ಜ್ ಅಡಿಯಲ್ಲಿ ಶುಲ್ಕವನ್ನು ವಸೂಲಿ ಮಾಡಲು ಆದೇಶ ಮಾಡಿದೆ.ಬಳ್ಳಾರಿ ವಿಮ್ಸ್ ಆಸ್ಪತ್ರೆ ಗೆ ಬಿಪಿಎಲ್ ಕಾರ್ಡ್ ಇದ್ದವರು ಹೋದರೆ,ಅಲ್ಲಿ ಶುಲ್ಕ ವಿಧಿಸುವದನ್ನು ನೊಡಿ ಪ್ರಜ್ಞೆ ತಪ್ಪಿ ಹೋಗುವುದು ಖಚಿತ. ವಿಮ್ಸ್ ಗೆ ನಮ್ಮ ರಾಜ್ಯದ ರೋಗಿಗಳು ಅಲ್ಲದೇ ಹೊರ ರಾಜ್ಯದ ಆಂದ್ರಪ್ರದೇಶದ ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಾರೆ. ಎಲ್ಲರು ಬಹುತೇಕ ಬಿಪಿಎಲ್ ಕಾರ್ಡ್ ಹೊಂದಿದವರೇ ಆಗಿರುತ್ತಾರೆ .
ಈಹಿಂದೆ ವಿಮ್ಸ್ ನಲ್ಲಿ ಎಲ್ಲ ರೀತಿಯ ಚಿಕಿತ್ಸೆಯು ಉಚಿತವಾಗಿ ಮಾಡಲಾಗುತ್ತಿತ್ತು. ಔಷಧ ಮಾತ್ರ ಹೊರಗಡೆ ಬರೆದು ಕೊಡುವ ಪದ್ಧತಿ ಇತ್ತು.ಇನ್ನೂ ಸ್ಕ್ಯಾನಿಂಗ್ ಗಳು,ರಕ್ತ ಪರೀಕ್ಷೆ ಗಳು ಶೇಕಡಾವಾರು ಹೊರಗೆ ಮಾಡಿಸಿ ಕೊಳ್ಳುವ ಪರಿಸ್ಥಿತಿ ಇತ್ತು. ಸರ್ಕಾರ ಎಲ್ಲವು ಬಡವರಿಗೆ ಅನುಕೂಲ ಅಗಲಿ ಎಂದು ಬಾಯಿ ಮಾತಿನಲ್ಲಿ ಹೇಳುತ್ತದೆ ಅಷ್ಟೇ. ಪ್ರಸ್ತುತ ವಿಮ್ಸ್ ನಲ್ಲಿ ರೋಗಿಗಳು ಉಚಿತ ಚಿಕಿತ್ಸೆ ಪಡೆಯುವದು.”ಕನಸಿನ” ಮಾತು. ಯಾವುದೇ ಆಪರೇಷನ್ ಇಲ್ಲದಂತೆ, ತಪಾಸಣೆ ಮಾಡಿಸಿಕೊಳ್ಳಲು ಕನಿಷ್ಠ ಸಾವಿರ ಗಟ್ಟಲೆ ಹಣವನ್ನು ಖರ್ಚು ಮಾಡಬೇಕಾದ ಪರಿಸ್ಥಿತಿ ಉದ್ಭವ ಅಗಿದೆ.ಇನ್ನು ಆಪರೇಷನ್ ಮಾಡಿಸಿಕೊಳ್ಳವ ಪರಿಸ್ಥಿತಿ ಬಂದರೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳನ್ನು ಮೀರಿಸುತ್ತದೆ. ಬಳ್ಳಾರಿ ವಿಮ್ಸ್ ಆಸ್ಪತ್ರೆ ನಲ್ಲಿ, ಬೆಡ್ ಚಾರ್ಜ್, ಉಟದ ಚಾರ್ಜ್ ಮಾತ್ರ ಇಲ್ಲ ಇನ್ನುಳಿದ ಎಲ್ಲದಕ್ಕೂ ಖರ್ಚು ಮಾಡಬೇಕು !
ಬಡಜನರು ” ಹಣ ಖರ್ಚು ಮಾಡಲಾಗದ ಬಡವರು ಕಣ್ಣೀರು ಹಾಕುತ್ತಾರೆ “. ಇಲ್ಲಿನ ರಾಜಕಾರಣಿಗಳಿಗೆ ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಕೆಲ ತಿಂಗಳ ಗಳು ಹಿಂದೆ ಉಸ್ತುವಾರಿ ಸಚಿವರು ಆನಂದ್ ಸಿಂಗ್ ವಿಮ್ಸ್ ನಲ್ಲಿ ಕೆಲವು ನೂತನ ಹೊಸ ಸಲಕರಣೆಗಳ ವಿಭಾಗಗಳ ಉದ್ಘಾಟನೆ ಮಾಡಿದರು, ಅದೆ ಸಮಯದಲ್ಲಿ ನಿರ್ದೇಶಕರಿ ಗೆ ಬಿಪಿಎಲ್ ಕಾರ್ಡ್ ದಾರರಗೆ, ಫೀಜ್ ವಸೂಲಿ ಮಾಡದ೦ತೆ ಆದೇಶವನ್ನು ನೀಡಿದ್ದುರು.ಅದ್ರೆ ಸಚಿವರ ಆದೇಶ ಕ್ಕೆ ಕಿಮ್ಮತ್ತು ಇಲ್ಲದಂತೆ ಅಗಿದೆ. ಈ ವಿಚಾರವಾಗಿ ನಿರ್ದೇಶಕ ಡಾ.ದೇವಾನಂದ್ ಅವರನ್ನು ಸಂಪರ್ಕ ಮಾಡಿದಾಗ ಆಯಾ ಚಿಕಿತ್ಸೆ ಮತ್ತು ತಪಾಸಣೆಗಳಿಗೆ ರೋಗಿಗಳಿಂದ ನಿಗದಿತ ಶುಲ್ಕ ವಸೂಲಿ ಮಾಡುವಂತೆ 2018,ರಲ್ಲಿ ಸರ್ಕಾರದ ಆದೇಶ ಮಾಡಲಾಗಿದೆ. ನಾವು ಅದನ್ನು ಇಂಪ್ಲಿಮೇಟ್ ಮಾಡಿರಲಿಲ್ಲ,ನಮಗೆ ಆಡಿಟ್ ಸಂದರ್ಭಗಳಲ್ಲಿ ಸರ್ಕಾರದದಿಂದ ಸಮಸ್ಯೆ ಗಳು ಬಂದಿವೆ ನಾವು ಸರಕಾರದ ಆದೇಶ ಪಾಲನೆ ಮಾಡಬೇಕಾಗಿದೆ ,ಆದರೂ ಕಡಿಮೆ ದರದಲ್ಲಿ ಎಲ್ಲವನ್ನೂ ಮಾಡುತ್ತಿದೆ ಇದರಿಂದ ನಮಗೆ ಅನುಕೂಲ ಆಗುತ್ತದೆ.”ಆಯುಶ್ಮಾನ್ ಭಾರತ್ ಆರೋಗ್ಯ ಕರ್ನಾಟಕ”ದಲ್ಲಿ ಶೇಕಡಾವಾರು ಉಚಿತ ಸೇವೆ ಸಿಗುತ್ತದೆ.ಇದು ಸರ್ಕಾರದ ನಿರ್ಣಯ ಎ೦ದರು.
ಬಡವರ ಬಿಪಿಎಲ್ ಕಾರ್ಡ್, ಮುಖಾಂತರ ಹಣವನ್ನು ಕಿತ್ತು ಕೊಂಡು ಆಸ್ಪತ್ರೆ ನಡೆಸುವ ಪರಿಸ್ಥಿತಿಯಲ್ಲಿ ಸರ್ಕಾರಗಳು ಇವೆ?? ಅಂದರೆ ಬಡವರ ಪರಿಸ್ಥಿತಿ ಎನು,?? ರಾಜಕಾರಣಿಗಳ ಕಪಿಮುಷ್ಟಿಯಲ್ಲಿ, ವಿಮ್ಸ್ ಆಡಳಿತ,ನಿಂತಿದೆ.ಯಾವ ಸರ್ಕಾರ ಬಂದರೆ ಅವರ ಪರವಾಗಿ ಇರುವ ನಿರ್ದೇಶಕರು ನೇಮಕ ವಾಗುತ್ತಾರೆ.ಅವರ ಮೇಲೆ ರಾಜಕಾರಣಿಗಳು ಸವಾರಿ ಮಾಡುತ್ತಾರೆ. ಸಚಿವರು ಗಳು ಬಂದರೆ ಮಾಧ್ಯಮಗಳನ್ನು ಹೊರಗೆ ಹಾಕಿ ಬಾಗಿಲುಗಳು ಮುಚ್ಚಿಕೊಂಡು ಮೀಟಿಂಗ್ ಮಾಡುತ್ತಾರೆ.ಹೊರಗೆ ಬಂದ ಮೇಲೆ ಎಲ್ಲವು ಸರಿ ಹೋಗಿದೆ ಎಂದು ಆತುರ ದಲ್ಲಿ ಹೊರಟು ಬಿಡುತ್ತಾರೆ . ಇಂತಹ ರಾಜಕಾರಣಿಗಳು,ಜನಪರ ವಾಗಿ ಇದ್ದಾರೆ ಅಂತ ಹೇಳಲು ನಾಚಿಕೆ ಆಗುತ್ತದೆ ಏಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.