
ಕಮತಗಿ: ಇಂದು ನಗರದಲ್ಲಿ ಶ್ರೀ ನೆಹರು ಯುವ ಕೇಂದ್ರ ಬಾಗಲಕೋಟ ಹಾಗೂ ವಚನ ವೈಭವ ಮಹಿಳಾ ಜಾನಪದ ಸಾಂಸ್ಕೃತಿಕ ಕಲಾ ಸಂಘ ಹಾಗೂ ರೈನ್ ಬೋ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಕಮತಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಷಟಸ್ಥಲ ಬ್ರಹ್ಮ ಶಿವಕುಮಾರ ಮಹಾಸ್ವಾಮಿಗಳು ವಹಿಸಿದ್ದರು.

ಹಾಗೂ ಉದ್ಘಾಟಕರಾಗಿ ಸುಷ್ಮಾ ಎಂ ಗವಳಿ ( ಡಿಸ್ಟಿಕ್ ಯೂತ್ ಆಫೀಸರ ) ಹಾಗೂ ಕಾರ್ಯಕ್ರಮದಲ್ಲಿ ಶ್ರೀ ವ್ಹಿ ಬಿ ನಾಯಕ್ ( ರೇಂಜ್ ಫಾರೆಸ್ಟ್ ಆಫೀಸರ್) ಅತಿಥಿಗಳಾಗಿ ರಾಮರಾವ್ ಬಿರಾದರ್. ಅಮರೇಶ್ ಕೊಳ್ಳಿ.ಪ್ರಕಾಶ ಆಚನೂರ್. ಹುಚ್ಚೇಶ್ವರ ಪದವಿ ಕಾಲೇಜಿನ ಶೆಟ್ಟರ್ ಪ್ರಾಚಾರ್ಯರು. ಲಕ್ಷ್ಮಿ ಗೌಡರ್. ಪ್ರಮೋದ್ ಗಾಡದ. ಕಾರ್ಯಕ್ರಮದ ಅತಿಥಿಗಳಾಗಿದ್ದರು ಹಾಗೂ ಕಾರ್ಯಕ್ರಮದಲ್ಲಿ ರೈನ್ ಬೋ ಸಂಸ್ಥೆಯ ಪದಾಧಿಕಾರಿಗಳು. ಸರಳ ಸಂಜೀವಿನಿ ಯೋಗ ಸಂಸ್ಥೆಯ ಪದಾಧಿಕಾರಿಗಳು. ಬನಶ್ರೀ ಮಹಿಳಾ ಸಂಘದ ಸದಸ್ಯರು ಹಾಗೂ ಹುಚ್ಚೇಶ್ವರ ಮಹಾವಿದ್ಯಾಲಯದ ಉಪನ್ಯಾಸಕ ಉಪನ್ಯಾಸಕಿಯರು. ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಶ್ರೀಮತಿ ಸುಷ್ಮಾ ಘವಳಿ ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಲಕ್ಷ್ಮೀ ಗೌಡರ್ ಮಾತನಾಡಿದರು. ಪರಿಸರ ದಿನಾಚರಣೆ ಕುರಿತು ಶ್ರೀ ವ್ಹಿ. ಬಿ. ನಾಯಕ್ ಹಾಗೂ ಶ್ರೀ ಪ್ರಕಾಶ್ ಅಚನೂರು ಮಾತನಾಡಿದರು ಶ್ರೀ ಇಸ್ಮಾಯಿಲ್ ಮಕನದಾರ್ ಹಾಗೂ ಶ್ರೀಮತಿ ಛಾಯಾ ವಡವಡಗಿ ಕಾರ್ಯಕ್ರಮವನ್ನು ನಿರೂಪಿಸಿದರು,ಶ್ರೀ ಹುಚ್ಚೇಶ್ವರ ಕಾಲೇಜಿನ ಆವರಣದಲ್ಲಿ ಸುಮಾರು 10 ಸಸಿಗಳನ್ನು ನೆಡುವುದರ ಮೂಲಕ ಈ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲಾಯಿತು.