
ಅಮೀನಗಡ ; ಇಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶೂಲೇಭಾವಿ ಗ್ರಾಮದ ವೀರ ಸಾವರ್ಕರ್ ಯುವ ಸಂಘಟನೆಯಿಂದ ಗ್ರಾಮದ ಯುವಕರು ಇಂದು ಬೆಳಗಿನ ಜಾವ ೫:೩೦ ರಿಂದ ೭ ಗಂಟೆ ವರೆಗೆ ಯೋಗಾಸನ ಮಾಡುವ ಮೂಲಕ ವಿಶ್ವ ಯೋಗ ದಿನವನ್ನು ಆಚರಿಸಿದರು.

ಭಾರತಾಂಭೆಯ ಪೊಟಗೆ ಹೂವು ಮಾಲೆ ಹಾಕಿ ಪುಸ್ಪಾರ್ಚನೆ ಮಾಡುವ ಮೂಲಕ ಯೋಗಾಸನಕ್ಕೆ ಚಾಲನೆ ನೀಡಿದ ನಾಗೇಶ ಗಂಜಿಹಾಳ, ಸಭೆ ಉದ್ದೇಶಿಸಿ ಎಲ್ಲರೂ ಪ್ರತಿ ದಿನ ಯೋಗವನ್ನು ಮಾಡಬೇಕು ಅದರಲ್ಲಿ ,ಪ್ರಾಣಾಯಾಮ ಬಹಳ ಮುಖ್ಯವಾಗಿ ನಮ್ಮ ಆರೋಗ್ಯವನ್ನು ವೃದ್ದಿಸುತ್ತದೆ ಇವತ್ತಿನ ಒತ್ತಡದ ಬದುಕಿನಲ್ಲಿ ನಿತ್ಯ ೧೦ ನಿಮಿಷಗಳ ಕಾಲ ವಾದರೂ ನಾವು ಧ್ಯಾನ ಮಾಡಬೇಕು ಎಂದರು. ಈ ಯೋಗ ದಿನಾಚರಣೆಯಲ್ಲಿ ವಿನೋದ ಮಡಿವಾಳರ ,ಬಿ,ವಾಯ್, ಆಲೂರು ಯೋಗ ಶಿಕ್ಷಕರಾಗಿ ಆಗಮಿಸಿದ್ದರು,

ಪುಸ್ಪ ಸಮರ್ಪನೆ ಮಾಡಿ ಯೋಗ ಮಾಡುವ ಮೂಲಕ ಚಾಲನೆ ನೀಡದರು ದೇವರಾಜ ಕಮತಗಿ, ಮಾನು ಹೊಸಮನಿ, ಹನಮಂತ ಮಿಣಜಗಿ ,ಯಮನೂರ ಹುಲ್ಯಾಳ,ಗ್ಯಾನಪ್ಪ ಗೋನಾಳ, ಹನಮಂತ ನಾವಿ, ದೇವರಾಜ ಮೇಟಿ ಶಿವುಕುಮಾರ ಅಂಬಿಗೇರ,ಅನೇಕ ಯುವಕರು ಭಾಗಿಯಾಗಿದ್ದರು.
