
ಅಮೀನಗಡ : ಇಂದು ರಾಜ್ಯಾದ್ಯಂತ ಕಂದಾಯ ಇಲಾಖೆ ರೈತರ ಬಳಿಗೆ ಅದ್ದೂರಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕ್ಕಬಳ್ಳಾಪುರದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದರ ಪ್ರಯುಕ್ತ ಇಡಿ ರಾಜ್ಯಾದ್ಯಂತ ಎಲ್ಲಾ ಕಂದಾಯ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮದ ಜನ ಪ್ರತಿನಿಧಿಗಳು ಸೇರಿ ಆಯಾ ಗ್ರಾಮ ಮಟ್ಟದಲ್ಲಿ ರೈತರ ಉತಾರ,ಪಾನಿ,ಜಾತಿ / ಆದಾಯ ಪ್ರಮಾಣ ಪತ್ರ ಸೇರಿದಂತೆ ಅನೇಕ ದಾಖಲೆಗಳನ್ನು ಸ್ವತಹ ರೈತರಿಗೆ ವಿತರಿಸುವ ಮೂಲಕ ಹುನಗುಂದ ತಾಲೂಕಿನ ಸೊಳೇಭಾವಿಯಲ್ಲಿ ಇದಕ್ಕೆ ಚಾಲನೆ ನೀಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಗ್ಯಾನವ್ವ ದುರಗಪ್ಪ ಮಾದರ ಹಾಗೂ ಉಪಾಧ್ಯಕ್ಷ ಶ್ರೀಮತಿ ಜ್ಯೋತಿ ಜಗದೇಶ ಪೂಜಾರ ಹಾಗೂ ಉಪ ತಹಶೀಲ್ದಾರ ಶ್ರೀ ಎಮ್,ಆರ್,ಹೆಬ್ಬಳಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಈ ಸರಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರೈತ ಮಹಿಳೆ ಶ್ರೀಮತಿ ಬಸಮ್ಮ ಗುಂಡಪ್ಪ ಮೇನಸಗಿ ಅವರಿಗೆ ಉತಾರ ಹಾಗೂ ಜಾತಿ ಪ್ರಮಾಣ ಪತ್ರ ನೀಡುವ ಮೂಲಕ ಗ್ರಾಮ ಪಂಚಾಯತಿ ಅಧ್ಯಕ್ಷರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಈ ಸರಳ ಸಭೆ ಉದ್ದೇಶಿಸಿ ಮಾತನಾಡಿದ ಉಪ ತಹಶೀಲ್ದಾರ ಅವರು ರೈತರು ಇನ್ನೂ ಮುಂದೆ ಯಾವುದೆ ರೀತಿ ನಮ್ಮ ಇಲಾಖೆಗೆ ಅಲೆದಾಡುವ ಅವಶ್ಯಕತೆ ಇಲ್ಲ ನಮ್ಮ ಕಂದಾಯ ಇಲಾಖೆಯ ಸಿಬ್ಬಂದಿ ತಮ್ಮ ಮನೆ ಬಾಗಿಲಿಖೆ ತಮ್ಮ ಹೊಲದ ಉತಾರ,ಪಾನಿ,ಜಾತಿ,ಆದಾಯ ಪ್ರಮಾಣ ಪತ್ರಗಳನ್ನು ನಿಗದಿತ ಅವಧಿಯಲ್ಲಿ ಬಂದು ತಲುಪಿಸಲ್ಲಿದ್ದಾರೆ,ಇಂದು ರಾಜ್ಯಾದ್ಯಂತ ಮಾನ್ಯ ಮುಖ್ಯಮಂತ್ರಿ ಬೊಮ್ಮಯಿ ಸಾಹೇಬರು ಇಂದು ಚಿಕ್ಕಬಳ್ಳಾಪುರದಲ್ಲಿ ಚಾಲನೆ ನೀಡುತ್ತಿದ್ದಾರೆ.

ಹೀಗಾಗಿ ನಮ್ಮ ಇಲಾಖೆಯಿಂದ ನಾವು ಈ ದಿನ ತಮ್ಮೆಲ್ಲರ ಮೂಲಕ ರೈತರಿಗೆ ಈ ದಾಖಲೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ BJP ಪಕ್ಷದ ತಾಲೂಕ OBC ಘಟಕದ ಅಧ್ಯಕ್ಷ ಶ್ರೀ ನಾಗೇಶ ಗಂಜಿಹಾಳ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶ್ರೀ ದೇವರಾಜ ಕಮತಗಿ ,ಗ್ರಾಮ ಪಂ,ಸದಸ್ಯರಾದ ಶ್ರೀ ಗ್ಯಾನಪ್ಪ ಗೋನಾಳ,ಶ್ರೀ ಮಹಾಂತಯ್ಯ ನಂಜಯ್ಯನಮಠ, ಸ್ರೀ ಜಗದೇಶ ರಗಟಿ,ಶ್ರೀ ದುರಗಪ್ಪ ಮಾದರ,ಶ್ರೀಮತಿ ಇಂದ್ರವ್ವ ಮಡಿವಾಳರ, ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿ ಶ್ರೀ ರಾಜು ಹಗ್ಗದ ,ಸಿಬ್ಬಂದಿ ನೀಲಪ್ಪ ಪೂಜಾರ ಉಪಸ್ಥಿತಿ ಇದ್ದರು.